ಸೌತ್ ಸಿನಿ ದುನಿಯಾದ ಯಶಸ್ವಿ ಜೋಡಿಗಳು ಗೋವಾದಲ್ಲಿ ಒಟ್ಟಿಗೆ ನ್ಯೂ ಇಯರ್ ಸೆಲೆಬ್ರೇಶನ್ ಮಾಡಿ ಸುದ್ದಿ ಆಗಿದ್ದಾರೆ.

ಸೌತ್ ಸಿನಿ ದುನಿಯಾದ ಯಶಸ್ವಿ ಜೋಡಿಗಳು ಗೋವಾದಲ್ಲಿ ಒಟ್ಟಿಗೆ ನ್ಯೂ ಇಯರ್ ಸೆಲೆಬ್ರೇಶನ್ ಮಾಡಿ ಸುದ್ದಿ ಆಗಿದ್ದಾರೆ. ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ಶೈನ್ ಆಗುತ್ತಿರುವ ಜನಪ್ರಿಯ ನಟಿ ಅಂದರೆ ಅದು ರಶ್ಮಿಕಾ ಮಂದಣ್ಣ. ಕನ್ನಡ ಸಿನಿಮಾರಂಗದಿಂದ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟ ರಶ್ಮಿಕಾ ಮಂದಣ್ಣ ಇಂದು ತೆಲುಗು, ತಮಿಳು ಮತ್ತು ಬಾಲಿವುಡ್ ದಿಗ್ಗಜ ಬಿಗ್-ಬಿ ಅಮಿತಾಬ್ ಬಚ್ಚನ್ ಅವರ ಜೊತೆ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ನಟಿಸಿದ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗುತ್ತಿದ್ದು, ದಕ್ಷಿಣ ಭಾರತ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳು ಅಂದಾಕ್ಷಣ ಅವರ ಸಿನಿಮಾದಷ್ಟೇ ಅವರ ವೈಯಕ್ತಿಕ ವಿಚಾರಗಳು ಕೂಡ ಸಾಕಷ್ಟು ಸುದ್ದಿ ಆಗುತ್ತವೆ. ಅಂತೆಯೇ ಅವರ ಬಗ್ಗೆ ಗಾಸಿಪ್ ಗಳು ಕೂಡ ಹರಿದಾಡುತ್ತವೆ.

ಅಂತೆಯೇ ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆಯೂ ಕೂಡ ಗಾಸಿಪ್ ವೊಂದು ಸೌತ್ ಸಿನಿ ದುನಿಯಾದ ಗಲ್ಲಿಗಲ್ಲಿಯಲ್ಲಿ ಹರಿದಾಡುತ್ತಿದೆ. ಅದೇನಪ್ಪಾ ಅಂದರೆ ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಅವರೊಟ್ಟಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬುದು. ತೆಲುಗಿನ ಗೀತ ಗೋವಿಂದಂ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು ನಟಿ ರಶ್ಮಿಕಾ ಮಂದಣ್ಣ. ಈ ಚಿತ್ರದಲ್ಲಿ ಕಿಸ್ಸಿಂಗ್ ಸೀನ್ ಭಾರಿ ಸಂಚಲನ ಸೃಷ್ಟಿ ಮಾಡಿತು. ಗೀತ ಗೋವಿಂದಂ ಚಿತ್ರದ ಯಶಸ್ಸು ಇವರಿಬ್ಬರಿಗೂ ಕೂಡ ಮತ್ತಷ್ಟು ಸ್ಟಾರ್ ವ್ಯಾಲ್ಯೂವನ್ನು ಹೆಚ್ಚಿಸಿತ್ತು.

ಟಾಲಿವುಡ್ ಕ್ಯುಟ್ ಪೇರ್ ಆದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೊತೆಯಾಗಿ ಮತ್ತೆ ಡಿಯರ್ ಕಾಮ್ರೆಡ್ ಎಂಬ ಚಿತ್ರದಲ್ಲಿ ಕಾಣಿಸಿಕೊಂಡರು. ಹೀಗೆ ಪರಸ್ಪರ ಇಬ್ಬರು ವಿವಿಧ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇಬ್ಬರು ಕೂಡ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಜೋರಾಯಿತು. ಈ ಬಗ್ಗೆ ಅವರನ್ನ ಸುದ್ದಿಗಾರರು ಪ್ರಶ್ನೆ ಮಾಡಿದಾಗ ಇಲ್ಲ ನಾವಿಬ್ರು ಜಸ್ಟ್ ಗುಡ್ ಫ್ರೆಂಡ್ಸ್ ಅನ್ನೋದನ್ನ ಮಾತ್ರ ಹೇಳುತ್ತಿದ್ದರು. ಇತ್ತೀಚೆಗಷ್ಟೇ ರೆಸ್ಟೋರೆಂಟ್ ವೊಂದರ ಡಿನ್ನರ್ ಪಾರ್ಟಿಯಲ್ಲಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಜೊತೆಯಾಗಿ ಕಾಣಿಸಿಕೊಂಡರು.

ಇದೀಗ ರಶ್ಮಿಕಾ ಮಂದಣ್ಣ ನ್ಯು ಇಯರ್ ಸೆಲೆಬ್ರೇಶನ್ ಮಾಡಲು ವಿಜಯ್ ಜೊತೆ ಗೋವಾಗೆ ತೆರಳಿ ಎಂಜಾಯ್ ಮಾಡಿದ್ದಾರೆ. ರೆಸಾರ್ಟ್ ವೊಂದರ ಸ್ವಿಮ್ಮಿಂಗ್ ಪೂಲ್ ಬಳಿ ನಿಂತು ಫೋಟೋ ತೆಗೆಸಿಕೊಂಡಿರುವ ರಶ್ಮಿಕಾ ಮಂದಣ್ಣ ಒಂದಷ್ಟು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ವಿಜಯ್ ದೇವರಕೊಂಡ ಮತ್ತು ಅವರ ಸೋದರ ಆನಂದ್ ದೇವದಕೊಂಡ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಜೊತೆಯಾಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

ಇದೀಗ ಆದವಾಳು ಮೀಕು ಜೋರು ಎಂಬ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಇದೇ ಮೊದಲ ಬಾರಿಗೆ ಲೈಗರ್ ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಪೂರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದ ಪುಷ್ಪ ಸಿನಿಮಾ ಬಾಕ್ಸ್ ಆಫಿಸ್ ನಲ್ಲಿ ನೂರಾರು ಕೋಟಿ ಲೂಟಿ ಮಾಡಿ ಭಾರಿ ಸೌಂಡ್ ಮಾಡುತ್ತಿದೆ.

Leave a Reply

%d bloggers like this: