ಸೋತ ಮತ್ತೊಂದು ದೊಡ್ಡ ಬಾಲಿವುಡ್ ಚಿತ್ರ, ವಿಕ್ರಾಂತ್ ರೋಣಗೆ ಸುಲಭವಾಯಿತು ಹಾದಿ

ನಿನ್ನೆ ತಾನೇ ಅಂದರೆ ಜುಲೈ 22ರಂದು ಗ್ರ್ಯಾಂಡ್ ಆಗಿ ರಿಲೀಸ್ ಆದ ಬಾಲಿವುಡ್ ಸ್ಟಾರ್ ನಟ ರಣ್ ಬೀರ್ ಕಪೂರ್ ಅಭಿನಯದ ಬಿಗ್ ಬಜೆಟ್ ಸಿನಿಮಾ ಶಂಶೇರಾ ಕನ್ನಡದ ಕೆಜಿಎಫ್2 ಚಿತ್ರದ ದಾಖಲೆಯನ್ನ ಮುರಿಯೋ ಪ್ರಯತ್ನ ಮಾಡುತ್ತಾ ಅನ್ನೋ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಇತ್ತೀಚೆಗೆ ಕೆಲವು ವರ್ಷಗಳಿಂದ ಬಾಲಿವುಡ್ ನಲ್ಲಿ ದಕ್ಷಿಣ ಭಾರತದ ಸಿನಿಮಾಗಳದ್ದೇ ಹವಾ ಆಗಿದೆ. ಬಾಲಿವುಡ್ ಸ್ಟಾರ್ ಸಿನಿಮಾಗಳೇ ಮಕಾಡೆ ಮಲಗುತ್ತಿರುವಾಗ ನಮ್ಮ ದಕ್ಷಿಣ ಭಾಗದ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿವೆ. ಅದಕ್ಕೊಂದಷ್ಟು ಉದಾಹರಣೆ ನೋಡುವುದಾದರೆ ಬಾಹುಬಲಿ ಬಾಹುಬಲಿ2, ಪುಷ್ಪಾ, ಆರ್.ಆರ್.ಆರ್ ಕೆಜಿಎಫ್, ಕೆಜಿಎಫ್ ಚಾಪ್ಟರ್2, ಸೂರರೈ ಪೊಟ್ರು, ಜೈ ಭೀಮ್ ಅಂತಹ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಸಿನಿಮಾಗಳು ಉತ್ತರ ಭಾರತದಲ್ಲಿ ಸದ್ದು ಮಾಡುತ್ತಿವೆ.

ಉತ್ತಮ ಕಂಟೆಂಟ್ ಹೊಂದಿರುವ ನಮ್ಮ ಭಾಗದ ಸಿನಿಮಾಗಳು ಉತ್ತರ ಭಾರತದ ಸಿನಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಿವೆ. ಆದ್ದರಿಂದ ಬಾಲಿವುಡ್ ಮಂದಿ ಹೇಗಾದ್ರು ಮಾಡಿ ಈ ಸೌತ್ ಸಿನಿಮಾಗಳಿಗೆ ಪೈಪೋಟಿ ನೀಡೋವಂತಹ ಒಂದಾದ್ರು ಸಿನಿಮಾ ಈ ಸಂಧರ್ಭದಲ್ಲಿ ಬರಬೇಕು ಅಂತ ನಿರೀಕ್ಷೆ ಇಟ್ಟುಕೊಂಡಿದ್ರು‌. ಅದಕ್ಕೆ ತಕ್ಕಂತೆ ರಣ್ ಬೀರ್ ಕಪೂರ್ ಅವರ ಬಿಗ್ ಬಜೆಟ್ ಸಿನಿಮಾ ಆಗಿದ್ದ ಶಂಶೇರಾ ಸಿನಿಮಾ ಟೀಸರ್ ಮತ್ತು ಟ್ರೇಲರ್ ಮೂಲಕ ಸಕ್ಸಸ್ ಕಾಣುವ ನಿರೀಕ್ಷೆ ಹುಟ್ಟಿಸಿತ್ತು. ಆದರೆ ರಿಲೀಸ್ ಆದ ನಂತರ ರಣ್ ಬೀರ್ ಕಪೂರ್ ಅವರ ಈ ಶಂಶೇರಾ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿ ವಿಮರ್ಶಕರು ಕೂಡ ಕಡಿಮೆ ರೇಟಿಂಗ್ ನೀಡಿದ್ದಾರೆ.

ರಣ್ ಬೀರ್ ಕಪೂರ್ ಅವರ ನಟನೆ ಮತ್ತು ಅವರ ಹೊಸ ವರಸೆಯನ್ನ ಮೆಚ್ಚಿದ್ದರು ಕೂಡ ಒಟ್ಟಾರೆಯಾಗಿ ಸಿನಿಮಾವನ್ನ ಒಪ್ಪಿಕೊಳ್ಳಲು ವಿಮರ್ಶಕರು ಕೂಡ ಹಿಂದೇಟಾಕಿದ್ದಾರೆ. ಶಂಶೇರಾ ಚಿತ್ರ ಮೊದಲ ದಿನದಲ್ಲಿ ಸರಿ ಸುಮಾರು ಹನ್ನೆರಡು ಕೋಟಿ ಗಳಿಕೆ ಮಾಡಬಹುದು ಎಂದು ಅಂದಾಜಿಸಿದ್ದಾರೆ. ಹೀಗಾಗಿ 150 ಕೋಟಿ ಬಜೆಟಲ್ಲಿ ತಯಾರಾದ ಈ ಶಂಶೇರಾ ಸಿನಿಮಾ ಕೆಜಿಎಫ್ ದಾಖಲೆಯನ್ನ ಯಾವುದೇ ಕಾರಣಕ್ಕೂ ಟಚ್ ಕೂಡ ಮಾಡಕ್ಕಾಗಲ್ಲ ಎಂದು ಮೂಲಗಳು ತಿಳಿಸಿವೆ. ಇನ್ನು ಈ ಚಿತ್ರವನ್ನು ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಆದಿತ್ಯಾ ಚೋಪ್ರಾ ಅವರು ನಿರ್ಮಾಣ ಮಾಡಿದ್ದರು. ಕರಣ್ ಮಲ್ಹೋತ್ರಾ ಅವರು ನಿರ್ದೇಶನ ಮಾಡಿರುವ ಈ ಶಂಶೇರಾ ಸಿನಿಮಾ ಇದೀಗ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷೆಗೆ ತಕ್ಕಂತೆ ಕಲೆಕ್ಷನ್ ಮಾಡಿಲ್ಲ. ಈ ಬಹುಕೋಟಿ ವೆಚ್ಚದ ಸಿನಿಮಾದಲ್ಲಿ ಸಂಜಯ್ ದತ್, ವಾಣಿ ಕಪೂರ್, ರೊನೀತ್ ರಾಯ್, ಸೌರಭ್ ಶುಕ್ಲಾ ಮುಂತಾದವರು ನಟಿಸಿದ್ದಾರೆ. ಈ ಚಿತ್ರ ಸೋತಿದ್ದರಿಂದ ಮುಂದಿನ ವಾರ ಬಿಡುಗಡೆ ಆಗಲಿರುವ ವಿಕ್ರಾಂತ್ ರೋಣ ಚಿತ್ರಕ್ಕೆ ಈಗ ದಾರಿ ಇನ್ನಷ್ಟು ಸುಲಭವಾಗಿದೆ.

Leave a Reply

%d bloggers like this: