ಸೋಲೇ ಇಲ್ಲದ ಸರದಾರ ಅಂಬಾನಿ ಓಟಕ್ಕೆ ಬ್ರೇಕ್ ಹಾಕಿದ ಟಾಟಾ! ಜನರಿಗೆ ಈಗ ಭರ್ಜರಿ ಸಿಹಿ ಸುದ್ದಿ.. ನೋಡಿ ಒಮ್ಮೆ

ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಉಂಟು ಮಾಡಿದ ಮುಖೇಶ್ ಅಂಬಾನಿ ಅವರ ಒಡೆತನದ ರಿಲಯನ್ಸ್ ಜಿಯೋ ಸಂಸ್ಥೆ ಸದ್ಯದ ಮಟ್ಟಿಗೆ ಭಾರತದಲ್ಲಿ ಅತಿ ದೊಡ್ಡ ಟೆಲಿಕಾಂ ನೆಟ್ ವರ್ಕ್ ಹೊಂದಿದ್ದು, ದೇಶಾದ್ಯಂತ ಅಪಾರ ಜನಪ್ರಿಯತೆ ಪಡೆದುಕೊಂಡು ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ನೆಟ್ ವರ್ಕ್ ಸಂಸ್ಥೆಯಾಗಿ ಹೊರ ಹೊಮ್ಮಿದೆ. ನೆಟ್ ವರ್ಕ್ ಕ್ಷೇತ್ರದಲ್ಲಿ ಏಕಸ್ವಾಮ್ಯತೆ ಮರೆಯುತ್ತಿದ್ದ ಭಾರ್ತಿ ಏರ್ಟೆಲ್ ಟೆಲಿಕಾಂ ಸಂಸ್ಥೆಗೆ ಪ್ರಬಲ ಪೈಪೋಟಿ ನೀಡುತ್ತಿರುವ ರಿಲಯನ್ಸ್ ಜಿಯೋ ಸಂಸ್ಥೆಗೆ ಪರ್ಯಾಯವಾಗಿ ಮತ್ತೊಂದು ಕಂಪನಿ ಟೆಲಿಕಾಂ ನೆಟ್ ವರ್ಕ್ ಮಾರುಕಟ್ಟೆಗೆ ಹೊಸ ರೂಪದಲ್ಲಿ ಲಗ್ಗೆ ಇಟ್ಟಿದೆ. ಜಿಯೋ ಸಂಸ್ಥೆಗೆ ಸ್ಪರ್ಧೆಯೊಡ್ಡಲು ಪರಿಚಯವಾಗುತ್ತಿರುವ ಬ್ರಾಡ್ ಬ್ರಾಂಡ್ ಮತ್ಯಾವುದೂ ಅಲ್ಲ‌. ಅದೇ ಟಾಟಾ ಸಂಸ್ಥೆ. ಹೌದು ಜಗತ್ತಿನ ಪ್ರತಿಷ್ಟಿತ ಉದ್ಯಮ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಕಂಪನಿ ಈಗಾಗಲೇ ಮಾರುಕಟ್ಟೆಯಲ್ಲಿ ಇದ್ದಂತಹ ತನ್ನ ಟಾಟಾ ಸ್ಕೈ ಎಂಬ ಬ್ರ್ಯಾಂಡ್ ಅನ್ನ ಟಾಟಾ ಪ್ಲೇ ಎಂದು ಬದಲಾವಣೆ ಮಾಡಿದೆ.

ಈ ಮೂಲಕ ಟಾಟಾ ಕಂಪನಿಯು ಕೂಡ ಎಲ್ಲಾ ಬ್ರಾಡ್ ಬ್ರಾಂಡ್ ಸಂಸ್ಥೆಗಳಿಗೆ ಪ್ರಬಲ ಸ್ಪರ್ಧೆಯೊಡ್ಡಲಿದೆ. ಈಗಾಗಲೇ ಭಾರತದ ಅತ್ಯಂತ ಹಳೆಯ ಜನಪ್ರಿಯ ಟೆಲಿಕಾಂ ನೆಟ್ ವರ್ಕ್ ಗಳಾದ ಭಾರ್ತಿ ಏರ್ಟೆಲ್ ಓಟಿಟಿ ಆಯ್ಕೆಗಳನ್ನು ಕಡಿಮೆ ದರದಲ್ಲಿ ನೀಡುವ ಯೋಜನೆ ಮಾಡಿಕೊಂಡಿದ್ದು, ಒಂದಷ್ಟು ರಿಯಾಯಿತಿ ದರದಲ್ಲಿ ಓಟಿಟಿ ಆಯ್ಕೆಗಳ ಯೋಜನೆಗಳನ್ನ ಕೂಡ ನೀಡಲಾಗುತ್ತಿದೆ. ಇದಕ್ಕೆ ತಕ್ಕಂತೆ ಜಿಯೋ ಸಂಸ್ಥೆ ಕೂಡ ಉತ್ತಮ ಆಕರ್ಷಕ ದರದಲ್ಲಿಯೇ ಬ್ರಾಡ್ ಬ್ರಾಂಡ್ ಸೇವೆಯನ್ನ ನೀಡುತ್ತಿದ್ದು, ಅಪಾರ ಗ್ರಾಹಕ ವಲಯವನ್ನ ಸೃಷ್ಟಿಸಿಕೊಂಡಿದೆ. ಇದೀಗ ಟಾಟಾ ಕಂಪನಿಯ ಟಾಟಾ ಸ್ಕೈ ಎಂದು ಇದ್ದಂತಹ ಹೆಸರನ್ನ ಟಾಟಾ ಪ್ಲೇ ಎಂದು ಮರು ನಾಮಕರಣ ಮಾಡಿಕೊಂಡು ತನ್ನ ವೇದಿಕೆಯಲ್ಲಿ ಬರೋಬ್ಬರಿ ಹದಿನಾಲ್ಕು ಓಟಿಟಿ ಪ್ಲಾಟ್ ಫಾರ್ಮ್ ಗಳ ಆಯ್ಕೆಯನ್ನ ತನ್ನ ಗ್ರಾಹಕರಿಗೆ ಕೊಡುಗೆಯಾಗಿ ನೀಡಲಾಗುವ ಯೋಜನೆ ಹಾಕಿಕೊಂಡಿದೆ.

ಇತ್ತೀಚೆಗೆ ಕೆಲವು ದಿನಗಳ ಹಿಂದೆಯಷ್ಟೇ ಭಾರ್ತಿ ಏರ್ಟೆಲ್ ಟೆಲಿಕಾಂ ನೆಟ್ ವರ್ಕ್ ಕಂಪನಿಯು ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ದರದಲ್ಲಿ ಡೇಟಾ ಸೇವೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿತ್ತು. ಇದರ ಜೊತೆಗೆ ಇದೀಗ ಟಾಟಾ ಪ್ಲೇ ಕೂಡ ಓಟಿಟಿ ಪ್ಲಾಟ್ ಫಾರ್ಮ್ ನೀಡುತ್ತಿದ್ದು ಗ್ರಾಹಕರಿಗೆ ಅತ್ಯಂತ ಉಪಯೋಗಕಾರಿಯಾಗಿದೆ. ಟಾಟಾ ಪ್ಲೇಯಲ್ಲಿ ಡಿಟಿಎಚ್ ಸೇವೆಯ ಜೊತೆ ಜೊತೆಗೆ 14 ಓಟಿಟಿ ಪ್ಲಾಟ್ ಫಾರ್ಮ್ ಗಳ ಆಯ್ಕೆಯ ಅವಕಾಶವನ್ನು ಕೂಡ ಪಡೆಯಬಹುದಾಗಿದೆ. ಟಾಟಾ ಪ್ಲೇ ನಲ್ಲಿ ತಿಂಗಳಿಗೆ ಕೇವಲ 275 ರೂ. ಪಾವತಿಸಿದರೆ ಡಿಟಿಎಚ್ ಸೇವೆಯ ಜೊತೆಗೆ ಓಟಿಟಿ ವೇದಿಕೆಗಳನ್ನ ಸಹ ಉಪಯೋಗಿಸಬಹುದಾಗಿದೆ.

Leave a Reply

%d bloggers like this: