SM ಕೃಷ್ಣ 2 ಮಕ್ಕಳು ಯಾರು ಗೊತ್ತಾ.. 2ನೇ ಮಗಳು ಸಾವಿರಾರು ಕೋಟಿಗಳ ವೈ’ನ್ ಕಂಪನಿಯ ಓನರ್

ಕರ್ನಾಟಕ ರಾಜ್ಯದ ಕ್ಲಾಸ್ ರಾಜಕಾರಣಿ ಅಂದರೆ ಅದು ಮಾಜಿ ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ಅವರು.ರಾಜ್ಯದ ರಾಜಧಾನಿ ಬೆಂಗಳೂರು ಮಹಾನಗರ ಇಂದು ಅನೇಕ ಮಲ್ಟಿ ನ್ಯಾಶನಲ್ ಕಂಪನಿಗಳನ್ನ ಹೊಂದಿದೆ.ಅಂದರೆ ಅದಕ್ಕೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ತೆಗೆದುಕೊಂಡ ನಿರ್ಧಾರಗಳು ಮತ್ತು ವಿದೇಶಗಳಲ್ಲಿ ಹೊಂದಿದ್ದ ಉತ್ತಮ ಸಂಪರ್ಕ.ಎಸ್.ಎಂ.ಕೃಷ್ಣ ಅವರು ಕಾನೂನು ಪದವೀಧರರಾಗಿದ್ದು,ವಿದೇಶದಲ್ಲಿ ಉನ್ನತ ವ್ಯಾಸಂಗ ಕೂಡ ಮಾಡಿದ್ದಾರೆ.ಸರ್ವತೋಮುಖ ಅಭಿವೃದ್ಧಿ ಮತ್ತು ಬೆಂಗಳೂರು ನಗರಕ್ಕೆ ಬಹುರಾಷ್ಟ್ರೀಯ ಕಂಪನಿಗಳು ಆಗಮನವಾಗಲು ಎಸ್.ಎಂ ಕೃಷ್ಣ ಅವರು ಪ್ರಮುಖ ಪಾತ್ರ ಆಗಿದ್ದಾರೆ ಎಂದರೆ ತಪ್ಪಾಗಲಾರದು. ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದು,ರಾಜ್ಯದ ಹದಿನಾರನೇ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಎಸ್.ಎಂ.ಕೃಷ್ಣ ಅವರು ಕಾರಣಾಂತರಗಳಿಂದ ಕಾಂಗ್ರೆಸ್ ಪಕ್ಷ ತೊರೆದು 2017 ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ.

ಕೆಲವು ವರ್ಷಗಳ ಹಿಂದೆಯಷ್ಟೇ ಇವರ ಅಳಿಯರಾದ ಕೆಫೆ ಕಾಫಿ ಡೇ ಮಾಲೀಕರಾದ ಸಿದ್ದಾರ್ಥ್ ರವರು ಆತ್ಮಹತ್ಯೆ ಗೆ ಒಳಗಾದ ಹಿನ್ನೆಲೆ,ಇವರ ಕುಟುಂಬಕ್ಕೆ ಆಘಾತವಾಗಿ ಇದರಿಂದ ಹೊರಬರಲು ಸಾಕಷ್ಟು ದಿನಗಳಿಡಿದವು.ಈ ದುರ್ಘಟನೆ ಬಳಿಕ ಕೆಫೆ ಕಾಫಿ ಡೇ ಮಾಲೀಕರಾದ ದಿವಂಗತ ಸಿದ್ದಾರ್ಥ್ ಮತ್ತು ಮಾಳ್ವಿಕ ಕೃಷ್ಣ ದಂಪತಿಗಳ ಮೊದಲ‌ ಪುತ್ರ ಅಮಾರ್ತ್ಯ ಹೆಗ್ಡೆ ಅವರು ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷರಾದ ಡಿಕೆಶಿ ಪುತ್ರಿ ಐಶ್ವರ್ಯರನ್ನು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದರು.ಈ ಶುಭ ಕಾರ್ಯವು ಎಸ್.ಎಂ.ಕೃಷ್ಣ ಅವರ ಮನೆಯಲ್ಲಿ ಮತ್ತೆ ಕಳೆ ಸಂಭ್ರಮ ಏರ್ಪಡಲು ಕಾರಣವಾಯಿತು.ಇನ್ನು ಎಸ್.ಎಂ.ಕೃಷ್ಣ ಅವರ ಬಗ್ಗೆ ತಿಳಿಯುವುದಾದರೆ ಇವರು 1932 ರಲ್ಲಿ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಮಲ್ಲಯ್ಯ ಮತ್ತು ತಾಯಮ್ಮ ದಂಪತಿಗಳಿಗೆ ಜನನವಾಗುತ್ತಾರೆ.ಎಸ್.ಎಂ.ಕೃಷ್ಣ,ಪ್ರೇಮ ದಂಪತಿಗಳಿಗೆ ಮಾಳ್ವಿಕ ಕೃಷ್ಣ ಮತ್ತು ಶಾಂಭವಿ ಕೃಷ್ಣ ಎಂಬ ಇಬ್ಬರು ಹೆಣ್ಣು ಮಕ್ಕಳು.

ಮಾಳ್ವಿಕ ಕೃಷ್ಣ ಸಿದ್ದಾರ್ಥ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಾರೆ.ಇನ್ನು ಎರಡನೇ ಪುತ್ರಿಯಾದ ಶಾಂಭವಿ ಕೃಷ್ಣ ಅವರು ಉಮೇಶ್ ಎಂಬುವರನ್ನ ವಿವಾಹ ಆಗುತ್ತಾರೆ.ಉಮೇಶ್ ಅವರು ಅವರ ಸಂಬಂಧಿಕರೇ ಆಗಿರುತ್ತಾರೆ.ಇನ್ನು ಇವರಿಗೆ ಉದ್ಯಮ ಕಡೆ ಆಸಕ್ತಿ ಇದ್ದ ಕಾರಣ ಒಂದೂವರೆ ದಶಕದ ಹಿಂದೆಯೆ ಬೆಂಗಳೂರಿನ ಹೊರಭಾಗದಲ್ಲಿರುವ ನಂದಿಬೆಟ್ಟದ ಬಳಿ ಎಸ್.ಟಿ.ಯು ವೈನ್ ರಿ ಎಂಬ ವೈನ್ ಉದ್ಯಮವನ್ನು ಆರಂಭಿಸುತ್ತಾರೆ.ಈ ಭಾಗದ ರೈತರು ಹೆಚ್ಚು ದ್ರಾಕ್ಷಿ ಬೆಳೆಗಳನ್ನು ಬೆಳೆಯುತ್ತಿದ್ದ ಕಾರಣ ಇಲ್ಲಿ ವೈನ್ ತಯಾರಿಸುವ ಉದ್ಯಮ ಆರಂಭಿಸಿದರೆ ರೈತರಿಗೂ ಅನುಕೂಲ ಆಗುತ್ತದೆ ಎಂಬ ಆಲೋಚನೆಯಿಂದ ರೈತರು ಬೆಳದ ದ್ರಾಕ್ಷಿಯನ್ನ ನೇರವಾಗಿ ಖರೀದಿ ಮಾಡುತ್ತಾರೆ.ಒಟ್ಟಾರೆಯಾಗಿ ಮಾಜಿ ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ಅವರ ಮಕ್ಕಳಿಬ್ಬರು ರಾಜಕೀಯದ ಕಡೆ ಮುಖ ಮಾಡದೇ ತಮ್ಮ ತಮ್ಮ ಸ್ವಂತ ದಾರಿಯನ್ನ ಕಂಡುಕೊಂಡಿದ್ದಾರೆ.

Leave a Reply

%d bloggers like this: