ಆಟೋ ಚಾಲಕ ಮಗ ಸಿರಾಜ್ ಕ್ರಿಕೆಟ್ ನಲ್ಲಿ ಈಗ ಪಡೆಯುತ್ತಿರುವ ಸಂಬಳ ಎಷ್ಟು ಗೊತ್ತಾ, ಎಷ್ಟೋ ಬಡವರಿಗೆ ಆದರ್ಶವಾಗಿದ್ದರೆ

ಸಾಧನೆ ಎಂಬುದು ಕೇವಲ ಮೂರಕ್ಷರವಲ್ಲ.ಅದು ಹಲವಾರು ವರ್ಷಗಳ ಕಾಲ ಹಗಲಿರುಳು ಅವಿರತ ಶ್ರಮ ಪಟ್ಟು,ಅವಮಾನ,ಕೊಂಕು ಮಾತಗಳನ್ನ ಸಹಿಸಿಕೊಂಡು ಅಂತಿಮವಾಗಿ ಯಶಸ್ಸು ಪಡೆಯುವ ಹಂತವೇ ಸಾಧನೆ.ಅದರಂತೆ ಇಂದು ಕ್ರಿಕೆಟ್ ಜಗತ್ತಿನಲ್ಲಿ ಸ್ಟಾರ್ ಬೌಲರ್ ಅಗಿ ಮಿಂಚುತ್ತಿರುವ ಮೊಹಮ್ಮದ್ ಸಿರಾಜ್ ಕೂಡ ಸಾಧಕರಾಗಿ ನಮ್ಮ ಮುಂದಿದ್ದಾರೆ. ಒಬ್ಬ ಸಾಮಾನ್ಯ ಬಡ ಆಟೋ ಚಾಲಕನ ಮಗ ಇಂದು ಕ್ರಿಕೆಟ್ ಕ್ಷೇತ್ರದಲ್ಲಿ ತನ್ನ ಪ್ರತಿಭೆಯ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಸಿರಾಜ್ ಅವರ ಜೀವನ ಮತ್ತು ಸಾಧನೆಯ ಹಾದಿ ನಿಜಕ್ಕೂ ಕೂಡ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗುತ್ತದೆ.ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡದ ಪರವಾಗಿ ಅತ್ಯುತ್ತಮವಾಗಿ ಬೌಲಿಂಗ್ ಪ್ರದರ್ಶನ ನೀಡಿರುವ ಮೊಹಮ್ಮದ್ ಸಿರಾಜ್ ಅವರ ಬಗ್ಗೆ ಬಿಸಿಸಿಐ ಉತ್ತಮ ಸಹಕಾರ ಪ್ರೋತ್ಸಾಹ ನೀಡಲು ಮುಂದಾಗಿದೆ.

ಇತ್ತೀಚೆಗೆ ಟೀಮ್ ಇಂಡಿಯಾ ಪರವಾಗಿ ಸತತವಾಗಿ ಉತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಮತ್ತು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಎ ದರ್ಜೆಯಲ್ಲಿ ಸ್ಥಾನ ನೀಡಿದ್ದು,ಪ್ರತಿಯೊಬ್ಬರಿಗೂ ಕೂಡ ಏಳು ಕೋಟಿ ಪ್ರೋತ್ಸಾಹ ಧನ ನೀಡಲಾಗಿದೆ.ಅದರಂತೆ ಯುವ ವೇಗದ ಬೌಲರ್ ಆಗಿ ಗಮನ ಸೆಳೆದಿರುವ ಮೊಹಮ್ಮದ್ ಸಿರಾಜ್ ಅವರಿಗೆ ಸಿ ವಿಭಾಗದಲ್ಲಿ ಸ್ಥಾನ ನೀಡಲಾಗಿದೆ. ಈ ಸಿ ವಿಭಾಗದಲ್ಲಿರುವ ಕ್ರಿಕೆಟ್ ಆಟಗಾರರಿಗೆ ಬಿಸಿಸಿಐ ನಿಂದ ವಾರ್ಷಿಕವಾಗಿ ಒಂದು.ಕೋಟಿ ರೂ.ಗಳನ್ನ ನೀಡಲಾಗುತ್ತದೆ.ಸಿರಾಜ್ ಅವರನ್ನು ಸೇರಿದಂತೆ ಯುವ ಆಟಗಾರರಾದ ಕುಲದೀಪ್ ಯಾದವ್, ನವದೀಪ್ ಸೈನಿ,ದೀಪಕ್ ಚಹಾರ್,ಹನುಮಾ ವಿಹಾರಿ,ಅಕ್ಷರ್ ಪಟೇಲ್,ಶ್ರೇಯಸ್ ಅಯ್ಯರ್, ಯಜುವೇಂದ್ರ ಚಹಾಲ್ ಅವರಿಗೂ ಕೂಡ ವಾರ್ಷಿಕವಾಗಿ ಒಂದು ಕೋಟಿ ರೂ.ಗಳ ಪ್ರೋತ್ಸಾಹ ಧನವನ್ನು ಬಿಸಿಸಿಐ ನೀಡುತ್ತದೆ.

ಇನ್ನು ಮೊಹಮ್ಮದ್ ಸಿರಜ್ ರಣಜಿ ಟ್ರೋಫಿ ಪಂದ್ಯದಲ್ಲಿ ಹೈದರಾಬಾದ್ ತಂಡದ ಪರ ಆಡಿದರೆ,ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಲಿದ್ದಾರೆ. ಅವರಲ್ಲದೆ, ಯುವ ತಾರೆಗಳಾದ ಕುಲದೀಪ್ ಯಾದವ್, ನವದೀಪ್ ಸೈನಿ, ದೀಪಕ್ ಚಹರ್, ಹನುಮಾ ಶುಬ್ಮನ್ ಗಿಲ್ ಕೂಡ ಸೇರಿದ್ದಾರೆ. ಮೊಹಮ್ಮದ್ ಸಿರಾಜ್ ರಣಜಿ ಟ್ರೋಫೀ‌‌ಯಲ್ಲಿ ಹೈದೆರಾಬಾದ್‍ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಾರೆ.ಐಪಿಎಲ್ ಹತ್ತನೇ ಸೀಸನ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಕೇವಲ ಎರಡು ಲಕ್ಷದಿಂದ ಆರಂಭವಾದ ಇವರ ಬೆಲೆ ಹೈದರಾಬಾದ್ ರೈಸರ್ಸ್ ತಂಡ ಸೇರಿಕೊಳ್ಳುವ ಹೊತ್ತಿಗೆ ಇವರ ಮೌಲ್ಯ ಎರಡು ಕೋಟಿಗೂ ಅಧಿಕವಾಗಿತ್ತು.

Leave a Reply

%d bloggers like this: