‘ಸಿಂಧೂರ ಲಕ್ಷ್ಮಣ’ನಾದ ಡಾಲಿ ಧನಂಜಯ ಅವರು

ಐತಿಹಾಸಿಕ ಚಿತ್ರದಲ್ಲಿ ಶೈನ್ ಆಗಲು ರೆಡಿ ಆಗ್ತಿದ್ದಾರೆ ನಟ ರಾಕ್ಷಸ ಡಾಲಿ ಧನಂಜಯ್! ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಸಖತ್ ಬಿಝೆಯೆಸ್ಟ್ ಬೇಡಿಕೆಯ ನಟ ಅಂದರೆ ಅದು ಡಾಲಿ ಧನಂಜಯ್. ಹೆಡ್ ಬುಷ್ ಸಿನಿಮಾದ ಸಕ್ಸಸ್ ನಲ್ಲಿ ಮಿಂದೆದ್ದು ಧನಂಜಯ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಹೊಸ ಹೊಸ ಸಿನಿಮಾಗಳನ್ನ ಕೂಡ ಒಪ್ಪಿಕೊಳ್ತಿದ್ದಾರೆ. ಈಗಾಗಲೇ ಹೊಯ್ಸಳ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಸುದ್ದಿಯಾಗಿದ್ದು ಅಂದರೆ ಅದು ಬ್ಯೂಟಿ ಕ್ವೀನ್ ರಮ್ಯಾ ಅವರೊಟ್ಟಿಗೆ ನಟಿಸುತ್ತಿರುವ ಉತ್ತರಕಾಂಡ ಸಿನಿಮಾದ ಮುಹೂರ್ತ ಕಾರ್ಯಕ್ರಮದ ಮೂಲಕ. ಇದೀಗ ಧನಂಜಯ್ ಅವರು ಮತ್ತೊಂದು ಸುದ್ದಿಯ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಖತ್ ಟಾಕ್ ಆಗಿದ್ದಾರೆ.

ಅದೇನಪ್ಪಾ ಅಂದರೆ ನಟ ರಾಕ್ಷಸ ಡಾಲಿ ಧನಂಜಯ್ ಅವರು ಐತಿಹಾಸಿಕ ಸಿನಿಮಾವೊಂದರಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಚಿತ್ರವನ್ನ ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರು ನಿರ್ಮಾಣ ಮಾಡುತ್ತಿದ್ದು, ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಐತಿಹಾಸಿಕ ಚಿತ್ರದ ಹೆಸರು ಸಿಂಧೂರ ಲಕ್ಷ್ಮಣ. ಈ ಚಿತ್ರವನ್ನ ದರ್ಶನ್ ಅವರು ಮಾಡ್ತಾರೆ ಎಂದು ಹೇಳಲಾಗ್ತಿತ್ತು. ಆದರೆ ಈಗ ಬದಲಾಗಿದೆ. ಈ ಸಿಂಧೂರ ಲಕ್ಷ್ಮಣ ಸಿನಿಮಾಗೆ ಧನಂಜಯ್ ಆಯ್ಕೆ ಆಗಿದ್ದು, ಕಥೆ ಕೇಳಿದ ನಂತರ ಧನಂಜಯ್ ಅವರು ಸಹ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇಯಾದ ವಿಭಿನ್ನ ವ್ಯಕ್ತಿತ್ವ ಪರಾಕ್ರಮದ ಮೂಲಕ ಉತ್ತರ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಪ್ರದೇಶಗಳಲ್ಲಿ ಅಪಾರ ಪ್ರಸಿದ್ದತೆ ಪಡೆದವರು ಈ ಸಿಂಧೂರ ಲಕ್ಷ್ಮಣ. ಸಿಂಧೂರ ಲಕ್ಷ್ಮಣ ಅವರನ್ನ ಇಂದಿಗೂ ಕೂಡ ಆ ಭಾಗಗಳಲ್ಲಿ ಪೂಜಿಸಿ ಗೌರವಿಸುತ್ತಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಬಡವರನ್ನ ಕೂಡ ಬಿಡದೇ (ಕಪ್ಪ) ತೆರಿಗೆಯನ್ನ ವಸೂಲಿ ಮಾಡ್ತಿದ್ದಾಗ ಬ್ರಿಟೀಷರ ವಿರುದ್ದ ತಿರುಗಿಬಿದ್ದು, ಬಡವರಿಗೆ ನ್ಯಾಯ ಒದಗಿಸಿ ನೆರವಾಗುತ್ತಿದ್ದರು. ಅದರ ಜೊತೆಗೆ ಬ್ರಿಟೀಷರು ಕೊಳ್ಳೆ ಹೊಡೆದು ಕೂಡಿಟ್ಟಿದ್ದ ಅದೆಷ್ಟೋ ಹಣ ಬಂಗಾರವನ್ನ ಸಿಂಧೂರ ಲಕ್ಷ್ಮಣ ಅವರು ದೋಚಿ ಅದನ್ನೆಲ್ಲಾ ಬಡ ಬಗ್ಗರಿಗೆ ಹಂಚುತ್ತಿದ್ದರು. ವೀರ ಲಕ್ಷ್ಮಣ ಸಿಂಧೂರ ಅವರಿಗೆ ವಿಶೇಷವಾಗಿ ಹಿಮ್ಮುಖವಾಗಿ ಅತ್ಯಂತ ವೇಗವಾಗಿ ಓಡುವಂತಹ ಚಾಕಚಕ್ಯತೆಯ ವಿದ್ಯೆ ಕರಗತವಾಗಿತ್ತು. ಇಂತಹ ಪರಾಕ್ರಮಿ ಸಿಂಧೂರ ಲಕ್ಷ್ಮಣ ಪಾತ್ರವನ್ನ ಡಾಲಿ ಧನಂಜಯ್ ಅವರು ಮಾಡ್ತಿರೋದು ಅವರ ಅಭಿಮಾನಿಗಳಿಗೆ ಸಖತ್ ಸಂತೋಷದ ವಿಚಾರವಾಗಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಈ ಸಿಂಧೂರ ಲಕ್ಷ್ಮಣ ಸಿನಿಮಾವನ್ನ ಬಹಳ ಅದ್ದೂರಿಯಾಗಿ ನಿರ್ಮಾಣ ಮಾಡಲು ಎಲ್ಲಾ ರೀತಿಯ ತಯಾರಿ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ಸಿಂಧೂರ ಲಕ್ಷ್ಮಣ ಸಿನಿಮಾ ಆದಷ್ಟು ಬೇಗ ಶೂಟಂಗ್ ಶುರು ಆಗಲಿದೆ.

Leave a Reply

%d bloggers like this: