ಸೈಮಾ ಅವಾರ್ಡ್ ಫಂಕ್ಷನ್ ಅಲ್ಲಿ ಮುಖ್ಯ ಅತಿಥಿಯಾಗಿ ಯಶ್ ಹಾಗೂ ರಾಧಿಕಾ ಪಂಡಿತ್ ಅವರು, ತಮ್ಮ ಮುಂದಿನ ಚಿತ್ರದ ಬಗ್ಗೆ ಮುನ್ಸೂಚನೆ

ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಸೈಮಾ ಅವಾರ್ಡ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಈ ಸೈಮಾ ಸಿನಿಮೋತ್ಸವ ಕಾರ್ಯಕ್ರಮದಲ್ಲಿ ಕಮಲ್ ಹಾಸನ್, ರಜಿನಿಕಾಂತ್, ಶಿವಣ್ಣ, ಯಶ್, ದರ್ಶನ್, ದಿಗಂತ್, ಐಂದ್ರಿತಾ, ಕಾರುಣ್ಯ ರಾಮ್, ಆಶಿಕಾ ರಂಗನಾಥ್, ರಚಿತಾ ರಾಮ್, ಮಾಲಾಶ್ರೀ ಸೇರಿದಂತೆ ಭಾರತೀಯ ಚಿತ್ರರಂಗದ ಬಹುತೇಕ ದಿಗ್ಗಜ ನಟ ನಟಿಯರು, ತಂತ್ರಜ್ಞರು ಭಾಗವಹಿಸಿದ್ದರು. ಈ ಬಾರಿ ಈ ಸೈಮಾ ಅವಾರ್ಡ್ ಯುವರತ್ನ, ರಾಬರ್ಟ್, ನಿನ್ನ ಸನಿಹಕೆ ಸೇರಿದಂತೆ ಕನ್ನಡದ ಒಂದಷ್ಟು ಸಿನಿಮಾಗಳಿಗೆ ವಿವಿಧ ವಿಭಾಗಗಳಡಿಯಲ್ಲಿ ಅವಾರ್ಡ್ ಸಿಕ್ಕಿದೆ. ಹತ್ತನೇ ವರ್ಷದ ಈ ಸೈಮಾ ಅವಾರ್ಡ್ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ಈ ಬಾರಿ ಸೈಮಾ ಅವಾರ್ಡ್ ಫಂಕ್ಷನ್ ಅನ್ನ ಬೆಂಗಳೂರಿನಲ್ಲಿಯೇ ಮಾಡಲಾಯಿತು. ಇದೇ ಸಂಧರ್ಭದಲ್ಲಿ ಭಾಗವಹಿಸಿದ ಅನೇಕ ನಟ ನಟಿಯರಿಗೆ ಒಂದಷ್ಟು ಪ್ರಶ್ನೆಗಳು ಎದುರಾದವು.

ಡಾಲಿ ಧನಂಜಯ್ ಮಾತನಾಡಿ ಅಪ್ಪು ಸರ್ ಹೆಸರಿನಲ್ಲಿ ನಮ್ಮ ಬೆಂಗಳೂರಿನಲ್ಲಿ ಸೈಮಾ ಅವಾರ್ಡ್ ನಡೆಯುತ್ತಿರೋದು ಖುಷಿ ತಂದಿದೆ ಎಂದು ಹೇಳಿದ್ರು. ಅದರಂತೆ ಶಿವಣ್ಣ, ಪ್ರಮೋದ್ ಶೆಟ್ಟಿ, ನಾಗಭೂಷಣ್, ದಿಗಂತ್, ಸೇರಿದಂತೆ ಎಲ್ಲರೂ ಖುಷಿ ವ್ಯಕ್ತಪಡಿಸಿದ್ರು. ಅದ್ರಂತೆ ಸೈಮಾ ಅವಾರ್ಡ್ಗೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗಳು ಕೂಡ ಕೈ ಹಿಡಿದು ಆಗಮಿಸಿ ಎಲ್ಲರ ಗಮನ ಸೆಳೆದರು‌. ಸಾಮಾನ್ಯವಾಗಿ ಯಶ್ ಎಲ್ಲೇ ಹೋದ್ರು ಕೂಡ ಎದುರಾಗ ಪ್ರಶ್ನೆ ಒಂದೇ. ಕೆಜಿಎಫ್ ಚಾಪ್ಟರ್2 ನಂತರ ನಿಮ್ಮ ಮುಂದಿನ ಸಿನಿಮಾ ಯಾವ್ದು ಅನ್ನೋದು. ಅದೇ ರೀತಿ ಸೈಮಾ ಅವಾರ್ಡ್ ಫಂಕ್ಷನ್ ಅಲ್ಲೂ ಕೂಡ ಇದೇ ಪ್ರಶ್ನೆ ಎದುರಾಯಿತು‌. ಇದಕ್ಕೆ ಯಶ್ ಸದ್ಯಕ್ಕೆ ಸೈಮಾ ಅವಾರ್ಡ್ ಫಂಕ್ಷನ್ ಬಂದಿದ್ದೀನಿ ಅದರ ಬಗ್ಗೆ ಮಾತಾಡೋಣ. ನನ್ ಸಿನಿಮಾ ಬರೋ ಬಗ್ಗೆ ಸರ್ಯಾದ್ ಟೈಮ್ ಗೇ ಹೇಳ್ತೀನಿ. ಕರೆಕ್ಟ್ ಟೈಮ್ ಗೆ ಕರೆಕ್ಟ್ ಆಗೇ ಬರ್ತಿನಿ ಅಂತ ಸ್ಮೈಲ್ ನೀಡಿದ್ದಾರೆ. ಕೊನೆಗೂ ಕೂಡ ಯಶ್ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾತ್ರ ಯಾವುದೇ ಮಾಹಿತಿ ನೀಡ್ತಿಲ್ಲ. ಆದ್ರೇ ಮೂಲಗಳ ಪ್ರಕಾರ್ ಕೆಜಿಎಫ್3 ಅಥವಾ ನರ್ಥನ್ ಅವರ ಜೊತೆ ಯಶ್ 19ನೇ ಚಿತ್ರ ಬರಲಿದೆ ಎಂದು ತಿಳಿದು ಬಂದಿದೆ.

Leave a Reply

%d bloggers like this: