ಸಿಹಿಸುದ್ದಿ ಕೊಟ್ಟ ರಚಿತಾರಾಮ್ ಹಾಗೂ ಧನಂಜಯ.. ಖುಷಿಯಲ್ಲಿ ಶುಭ ಹಾರೈಸಿದ ಅಭಿಮಾನಿಗಳು

ಸಿನಿಮಾ ಹಿನ್ನೆಲೆ ಇಲ್ಲದೆ ಇಂದು ಸಿನಿಮಾ ಕ್ಷೇತ್ರದಲ್ಲಿ ಬಹು ಬೇಡಿಕೆಯ ಜನಪ್ರಿಯ ಸ್ಟಾರ್ ನಟ-ನಟಿಯಾಗಿ ಮಿಂಚುತ್ತಿದ್ದಾರೆ ಈ ಕಲಾವಿದರು. ಹೌದು ಬಣ್ಣದ ಲೋಕದಲ್ಲಿ ಯಾರಿಗೆ ಯಾವಾಗ ಹೇಗೆ ಅದೃಷ್ಟ ಒಲಿದು ಬರುತ್ತದೋ ತಿಳಿಯುವುದಿಲ್ಲ. ಸಣ್ಣ-ಪುಟ್ಟ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಂತಹ ನಟಿಯರು ಬೆಳ್ಳಿ ಪರದೆಯ ಮೇಲೆ ರಾರಾಜಿಸಿಬಿಡುತ್ತಾರೆ. ಅಂತಹ ನಟಿಯರ ಪೈಕಿ ನಟಿ ರಚಿತಾ ರಾಮ್ ಅವರು ಕೂಡ ಒಬ್ಬರು. ಧಾರಾವಾಹಿಗಳ ಮೂಲಕವೇ ಅನೇಕ ನಟಿಯರು ಚಂದನವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಅದೇ ರೀತಿಯಾಗಿ ಆದರೆ ನಟಿ ರಚಿತಾ ರಾಮ್ ಅವರು ಕೂಡ ಅರಸಿ ಎಂಬ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟರು. ರಚಿತಾ ರಾಮ್ ತಮ್ಮ ಮೊದಲ ಸೀರಿಯಲ್ ನಲ್ಲಿಯೇ ಕನ್ನಡ ಪ್ರೇಕ್ಷಕರನ್ನ ತನ್ನತ್ತ ಸೆಳೆದುಕೊಂಡರು. ಕೆಲವು ವರ್ಷಗಳ ಕಾಲ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದ ರಚಿತಾ ರಾಮ್ ಅವರಿಗೆ ತೂಗುದೀಪ ಪ್ರೊಡಕ್ಷನ್ ಹೌಸ್ ನಿಂದ ಅವಕಾಶ ಸಿಗುತ್ತದೆ. ಅದೂ ಕೂಡ ಸ್ಟಾರ್ ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ನಟಿಸುವ ಅವಕಾಶ.

2013 ರಲ್ಲಿ ದರ್ಶನ್ ಅವರ ಹೋಂ ಪ್ರೊಡಕ್ಷನ್ ತೂಗುದೀಪ ಸಂಸ್ಥೆಯಡಿಯಲ್ಲಿ ನಿರ್ಮಾಣದಲ್ಲಿ ಎಂ.ಡಿ ಶ್ರೀಧರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಬುಲ್ ಬುಲ್ ಚಿತ್ರದಲ್ಲಿ ದರ್ಶನ್ ಅವರಿಗೆ ಜೋಡಿಯಾಗುವುದರ ಮೂಲಕ ರಚಿತಾ ರಾಮ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದುಕೊಳ್ಳುತ್ತಾರೆ. ಈ ಚಿತ್ರದ ಸಕ್ಸಸ್ ನಂತರ ರಚಿತಾ ರಾಮ್ ಅವರಿಗೆ ಸಾಲು ಸಾಲು ಸಿನಿಮಾಗಳ ಅವಕಾಶ ದೊರೆಯುತ್ತದೆ. ಕನ್ನಡದ ಸ್ಟಾರ್ ನಟರಾದಂತಹ ದರ್ಶನ್ , ಸುದೀಪ್, ಪುನೀತ್ ರಾಜ್ ಕುಮಾರ್, ಗಣೇಶ್, ದುನಿಯಾ ವಿಜಯ್, ಉಪೇಂದ್ರ, ಶಿವರಾಜ್ ಕುಮಾರ್, ಶ್ರೀ ಮುರುಳಿ, ನೀನಾಸಂ ಸತೀಶ್ ಸೇರಿದಂತೆ ಬಹುತೇಕ ಸ್ಟಾರ್ ನಟರೊಂದಿಗೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಇಂದು ಕನ್ನಡದ ಬಹುಬೇಡಿಕೆಯ ನಟಿಯಾಗಿ ಅಪಾರ ಜನಪ್ರಿಯತೆ ಪಡೆದಿದ್ದಾರೆ. ಅದೇ ರೀತಿಯಾಗಿ ಪ್ರತಿಭೆ ಇದ್ದರು ಕೂಡ ಸತತ ಸೋಲುಗಳನ್ನೇ ಅನುಭವಿಸುತ್ತಾ,ಅನೇಕ ಅವಮಾನ ಟೀಕೆ ಎದುರಿಸಿ ಸೂರಿ ಅವರ ಟಗರು ಸಿನಿಮಾದ ಮೂಲಕ ಡಾಲಿ ಧನಂಜಯ್ ಆಗಿ ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ. ಟಗರು ಚಿತ್ರದಲ್ಲಿ ಡಾಲಿ ಎಂಬ ನೆಗೆಟೀವ್ ಪಾತ್ರ ಮಾಡುವ ಮುನ್ನ ಅನೇಕ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದರು ಕೂಡ ಯಶಸ್ಸು ದಕ್ಕಿರಲಿಲ್ಲ. ಆದರೆ ಟಗರು ಸಿನಿಮಾದ ಬಳಿಕ ಡಾಲಿ ಧನಂಜಯ್ ಆಗಿ ಸ್ಟಾರ್ ನಟರಾದ ಪುನೀತ್ ರಾಜ್ ಕುಮಾರ್, ದರ್ಶನ್, ಆಕ್ಷನ್ ಪ್ರಿನ್ಸ್ ದೃವಸರ್ಜಾ ಅವರ ಜೊತೆ ತೆರೆ ಹಂಚಿಕೊಂಡು ಇಂದು ತಾವು ಕೂಡ ಒಬ್ಬ ಯಶಸ್ವಿ ನಾಯಕ, ನಿರ್ಮಾಪಕನಾಗಿ ಚಂದನವನದಲ್ಲಿ ನೆಲೆ ಕಂಡುಕೊಂಡಿದ್ದಾರೆ.

ಹೌದು ನಟ ಧನಂಜಯ್ ಇಂದು ಕೇವಲ ನಟ ಮಾತ್ರ ಅಲ್ಲ ಬಡವ ರಾಸ್ಕಲ್ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿ ಬಡ್ತಿ ಪಡೆದುಕೊಂಡು ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅವುಗಳಲ್ಲಿ ಹೆಡ್ ಬುಷ್, ಡಾಲಿ, ಮಾನ್ಸುನ್ ರಾಗ ಅಂತಹ ಸಿನಿಮಾ ಕೂಡ ಸೇರಿವೆ. ಇತ್ತೀಚೆಗೆ ಫೆಬ್ರವರಿ 14 ರಂದು ವ್ಯಾಲೆಂಟೆನ್ಸ್ ಡೇ ದಿನದಂದು ಮಾನ್ಸುನ್ ರಾಗ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಅವರ ಅಭಿನಯದ ಈ ಚಿತ್ರದ ಪೋಸ್ಟರ್ ಎಲ್ಲೆಡೆ ಭಾರಿ ಮೆಚ್ಚುಗೆ ಪಡೆದುಕೊಂಡಿದೆ.

ಹೌದು ಮಾನ್ಸುನ್ ರಾಗ ಸಿನಿಮಾದ ಪೋಸ್ಟರ್ ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ನಟ ರಾಕ್ಷಸ ಡಾಲಿ ಧನಂಜಯ್ ಅವರ ಲುಕ್ ಗೆ ಕನ್ನಡ ಪ್ರೇಕ್ಷಕರು ಫಿದಾ ಆಗಿದ್ದಾರೆ. ವಿಖ್ಯಾತ್ ಚಿತ್ರ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಪಕ ಎ.ಆರ್. ವಿಖ್ಯಾತ್ ಅವರು ಈ ಮಾನ್ಸುನ್ ರಾಗ ಚಿತ್ರಕ್ಕೆ ಬಂಡವಾಳ ಹೂಡಿದ್ದು, ರವೀಂದ್ರ ನಾಥ್ ನಿರ್ದೇಶನ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ರಾಗ ಸಂಯೋಜನೆ ಮಾಡಿದ್ದಾರೆ.