ಶ್ರೀ ರಾಮನ ಧ್ಯಾನದಲ್ಲಿ ಮುಳಗಿದ ಶಾರುಖ್ ಖಾನ್ ಮಗ ಆರ್ಯನ್ ಖಾನ್..

ಶ್ರೀ ರಾಮನ ಧ್ಯಾನದಲ್ಲಿ ಬಾಲಿವುಡ್ ಬಾದ್- ಶಾ ಶಾರುಕ್ ಖಾನ್ ಪುತ್ರ..! ಹಿಂದಿ ಚಿತ್ರರಂಗದ ಸುಪ್ರಸಿದ್ದ ನಟರಾದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಸೇವನೆ ಆರೋಪದಡಿ ಕಾರಾಗೃಹ ಸೇರಿದ್ದಾರೆ.ಕಳೆದ ಇಪ್ಪತ್ತು ದಿನಗಳಿಂದ ಜಾಮೀನಿನ ನಿರೀಕ್ಷೆಯಲಿದ್ದ ಆರ್ಯನ್ ಖಾನ್ ಗೆ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ.ಹೀಗಾಗಿ ಆರ್ಯನ್ ಖಾನ್ ಜೈಲಿನಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಸಾಮಾನ್ಯವಾಗಿ ಸ್ಟಾರ್ ನಟರ ಮಕ್ಕಳು ಅಂದ ಮೇಲೆ ಅವರ ಜೀವನ ಶೈಲಿ ಐಷಾರಾಮಿಯೇ ಆಗಿರುತ್ತದೆ.ಖರ್ಚಿಗಾಗಿ ಕೈ ತುಂಬಾ ಹಣ,ಓಡಾಡಲು ದುಬಾರಿ ಬೆಲೆಯ ಕಾರು ಸಿಕ್ಕರೆ ಅವರ ದೃಷ್ಟಿಕೋನ ಯಾವ ಮಟ್ಟಕೆ ನೆಟ್ಟುತ್ತದೆ ಎಂಬುದನ್ನು ಊಹೆ ಮಾಡಿಕೊಳ್ಳ ಬಹುದು. ಬಾಲಿವುಡ್ ಸೂಪರ್ ಸ್ಟಾರ್ ನಟರಾಗಿರುವ ಶಾರುಖ್ ಖಾನ್ ಸದಾ ಶೂಟಿಂಗ್ ಅಂತ ತಮ್ಮ ಸಿನಿಮಾ ಬದುಕಿನ ಕಡೆ ಹೆಚ್ಚು ಗಮನ ಕೊಟ್ಟಿದ್ದರು ಕೂಡ ತಮ್ಮ ಮಕ್ಕಳ ಬಗ್ಗೆ ಗಮನ ಹರಿಸದೇ ಹೋದಲ್ಲಿ ಆ ಮಕ್ಕಳು ಹೇಗೆ ಹಾದಿ ತಪ್ಪಬಹುದು ಎಂಬುದಕ್ಕೆ ಉದಾಹರಣೆ ಆಗಿದ್ದಾರೆ.

ಕೆಲವು ವರ್ಷಗಳ ಹಿಂದೆ ಅವರೇ ಸ್ವತಃ ಶಾರುಖ್ ಖಾನ್ ತಮ್ಮ ಪುತ್ರನಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಿದ್ದೇನೆ ಎಂದು ತಿಳಿಸಿದ್ದರು.ಅವರು ನೀಡಿದ ಸ್ವಾತಂತ್ರ್ಯ ಅವರಿಗೆ ಈಗ ಮುಳುವಾಗಿ ಅವರ ಮಗನ ಬದುಕಿಗೆ ಬಹುದೊಡ್ಡ ಕಪ್ಪು ಚುಕ್ಕೆ ಆಗಿದೆ.ಇನ್ನು ಆರ್ಥರ್ ರೋಡ್ ಕಾರಾಗೃಹದಲ್ಲಿರುವ ಆರ್ಯನ್ ಖಾನ್ ಆಧ್ಯಾತ್ಮ ಪುಸ್ತಕಗಳನ್ನು ಓದುತ್ತಿದ್ದಾರಂತೆ.ಈ ಹಿಂದೆ ನ್ಯಾಯಾಲಯದಲ್ಲಿ ನನಗೆ ತನ್ನ ತಪ್ಪಿನ ಅರಿವಾಗಿದೆ.ನಾನು ಇನ್ನು ಮುಂದೆ ಸಾಮಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡಿದ್ದರು.ಇನ್ನು ಆರ್ಥರ್ ರೋಡ್ ಕಾರಾಗೃಹದಲ್ಲಿ ಆರ್ಯನ್ ಖಾನ್ ತನ್ನ ದಿನಚರಿಯನ್ನು ಹೆಚ್ಚು ಪುಸ್ತಕ ಓದುವುದಕ್ಕೆ ಬದಲಾಯಿಸಿಕೊಂಡಿದ್ದಾರಂತೆ.ಬೆಳಿಗ್ಗೆ ಏಳು ಗಂಟೆಗೆ ಶ್ರೀ ರಾಮ ಭಜನಾ ಧ್ಯಾನದಲ್ಲಿ ತೊಡಗಿಕೊಂಡು,ರಾಮನ ಜಪ ಮಾಡುತ್ತಿದ್ದಾರೆ.

ಕಾರಾಗೃಹದ ಅಧಿಕಾರಿಗಳು ಆರ್ಯನ್ ಖಾನ್ ಅವರಿಗೆ ಗೋಲ್ಡನ್ ಲಯನ್ ಮತ್ತು ರಾಮಸೀತೆಯ ಪುಸ್ತಕಗಳನ್ನು ಅಧ್ಯಾಯನ ಮಾಡುತ್ತಿದ್ದಾರಂತೆ‌.ಇತ್ತೀಚೆಗೆ ನಟ ಶಾರುಖ್ ಖಾನ್ ತಮ್ಮ ಪುತ್ರ ಆರ್ಯನ್ ಖಾನ್ ಅವರನ್ನು ಭೇಟಿ ಮಾಡಿ ಮಾತಾಡಿಕೊಂಡು ಹೋಗಿದ್ದಾರೆ.ಮಗನ ಪರಿಸ್ಥಿತಿ ಕಂಡು ನೋವಿನಲ್ಲಿರುವ ಶಾರುಖ್ ಖಾನ್ ಕುಟುಂಬ ವೇದನೆ ಪಡುತ್ತಿದ್ದಾರೆ.ಎನ್ ಸಿ ಬಿ ಮುಂಬೈ ಘಟಕವು ಡ್ರಗ್ಸ್ ಸೇವನೆ ಮಾಡಿರುವ ಆರೋಪದ ಮೇಲೆ ಅಕ್ಟೋಬರ್ ಮೂರರಂದು ಆರ್ಯನ್ ಖಾನ್ ಅನ್ನು ಬಂಧಿಸಿದರು.

Leave a Reply

%d bloggers like this: