ಶೂಟಿಂಗ್ ವೇಳೆ ಎಡವಟ್ಟು ಮಾಡಿಕೊಂಡ ಟೈಟಾನಿಕ್ ಹೀರೋಯಿನ್

ಟೈಟಾನಿಕ್ ಸಿನಿಮಾ ಮೂಲಕ ಜಗತ್ತಿನಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ ನಟಿ ಕೇಟ್ ಅವರು ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಂಭೀರ ಗಾಯ ಆಗಿದ್ದು ಶೂಟಿಂಗ್ ಸೆಟ್ ನಲ್ಲಿ. ನಟಿ ಕೇಟ್ ವಿನ್ಸ್ಲೆಟ್ ಅವರು ಇತ್ತೀಚೆಗೆ ಕ್ರೊಯೇಷಿಯಾದಲ್ಲಿ ‘ಲೀ’ ಎಂಬ ಸಿನಿಮಾದ ಸಾಹಸ ದೃಶ್ಯ ಸನ್ನಿವೇಶವೊಂದರಲ್ಲಿ ಭಾಗವಹಿಸಿದ್ದರು. 46 ವರ್ಷದ ಕೇಟ್ ವಿನ್ಸ್ಲೆಟ್ ಅವರು ಕುಪಾರಿ ಗ್ರಾಮದಲ್ಲಿ ನಡೆಯುತ್ತಿದ್ದ ಲೀ ಸಿನಿಮಾದ ಸೆಟ್ ನಲ್ಲಿ ಖಾಕಿ ಕಾರ್ಗೋ ಜಂಪ್ ಸೂಟ್ ಧರಿಸಿದ್ದರಂತೆ. ಸಾಹಸ ದೃಶ್ಯದಲ್ಲಿ ನಟಿ ಕೇಟ್ ಅವರು ಉತ್ಸಾಹದಲ್ಲಿ ಎತ್ತರ ಪ್ರದೇಶದಿಂದ ಜಂಪ್ ಮಾಡುವಾಗ ಆಯಾತಪ್ಪಿ ಬಿದ್ದಿದ್ದಾರೆ. ತಕ್ಷಣ ಅವರನ್ನ ಡುಬ್ರೊವ್ನಿಕ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯಕ್ಕೆ ಕೇಟ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ನಟಿ ಕೇಟ್ ನಟಿಸುತ್ತಿರುವ ಈ ಲೀ ಸಿನಿಮಾ ಅಮೆರಿಕಾದ ಸುಪ್ರಸಿದ್ದ ಮಹಿಳಾ ಛಾಯಾಗ್ರಾಹಕಿ ಪತ್ರಕರ್ತೆ ಎಲಿಜಬೆತ್ ಲೀ ಮಿಲ್ಲರ್ ಆತ್ಮಚರಿತ್ರೆಯಾಗಿದ್ಯಂತೆ.

ನಟಿ ಕೇಟ್ ಅವರು ‘ಲೀ’ ಸಿನಿಮಾದಲ್ಲಿ ಛಾಯಾಗ್ರಾಹಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲೀ ಸಿನಿಮಾದಲ್ಲಿ ಜೂಡ್ ಲಾ ಮತ್ತು ಮೇರಿಯನ್ ಕೊಟಿಲಾರ್ಡ್ ಅವರು ಕೂಡ ನಟಿಸಿದ್ದಾರೆ. ‘ಲೀ’ ಸಿನಿಮಾಗಾಗಿ ನಟಿ ಕೇಟ್ ಅವರು ನಿರಂತರವಾಗಿ ನಾಲ್ಕೈದು ವರ್ಷಗಳಿಂದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಲೀ ಚಿತ್ರದ ಸಾಹಸ ದೃಶ್ಯಗಳಿಗಾಗಿ ಭರ್ಜರಿ ಸೆಟ್ ಹಾಕಲಾಗಿತ್ತು. ಆದರೆ ದುರಾದೃಷ್ಟವಶಾತ್ ಕೇಟ್ ಅವರು ಬಿದ್ದು ಗಾಯಗೊಂಡು ಇದೀಗ ಚಿಕಿತ್ಸೆ ಪಡೆದುಕೊಂಡು ಚೇತರಿಕೆ ಆಗಿ ಇದೀಗ ಮತ್ತೇ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರಂತೆ ಎಂದು ಮೂಲಗಳು ತಿಳಿಸಿವೆ. ಹಿಂದೆ ನಟಿ ಕೇಟ್ ಅವರು ಅವಾತಾರ್ ದಿ ವೇ ಆಫ್ ವಾಟರ್ ಪಾತ್ರಕ್ಕಾಗಿ ನೀರಿನಲ್ಲಿ ಧೀರ್ಘಕಾಲದವರೆಗೆ ಉಸಿರನ್ನ ಹಿಡಿದಿಟ್ಟುಕೊಳ್ಳುವುದನ್ನ ಕರಗತ ಮಾಡಿಕೊಂಡಿದ್ದಾರೆ. ಒಟ್ಟಾರೆಯಾಗಿ 1997 ರಲ್ಲಿ ರಿಲೀಸ್ ಆದ ಟೈಟಾನಿಕ್ ಸಿನಿಮಾದಲ್ಲಿ ನಟಿಸುವ ಮುಖಾಂತರ ವರ್ಲ್ಢ್ ವೈಡ್ ಸಖತ್ ಫೇಮಸ್ ಆದ ನಟಿ ಕೇಟ್ ಇದೀಗ ಗಾಯಗೊಂಡು ಭಾರಿ ಸುದ್ದಿಯಾಗಿದ್ದರು.