ಶಿವಣ್ಣನ ಕೈಯಲ್ಲಿರುವ ಪುಟ್ಟ ಮಗು ಯಾರು ಗೊತ್ತಾ? ಮತ್ತೆ ಹುಟ್ಟಿ ಬಂದ ಅಪ್ಪು, ಸಿಹಿ ಸುದ್ದಿ ನೋಡಿ ಒಮ್ಮೆ

ಇತ್ತೀಚೆಗೆ ನಟ ಶಿವರಾಜ್ ಕುಮಾರ್ ಅವರು ತಮ್ಮ ಪತ್ನಿ ಗೀತಾ ಅವರೊಟ್ಟಿಗೆ ಮಗುವೊಂದನ್ನು ಎತ್ತಿಕೊಂಡು ಮುದ್ದಾಡುತ್ತಿರುವ ಫೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೊ ನೋಡಿದ ಬಹುತೇಕ ನೆಟ್ಟಗರು ಶಿವರಾಜ್ ಕುಮಾರ್ ಅವರ ಮೊದಲನೇಯ ಮಗಳಾದ ನಿರುಪಮಾ ಅವರಿಗೆ ಗಂಡು ಮಗುವಾಗಿದೆ.ಹೀಗಾಗಿ ದೊಡ್ಮನೆಯಲ್ಲಿ ಮತ್ತೆ ಅಪ್ಪು ಜನಿಸಿದ್ದಾರೆ ಎಂಬ ಸುಳ್ಳುಸುದ್ದಿಯೊಂದನ್ನ ಹಬ್ಬಿಸಿದ್ದಾರೆ. ಇದು ಅಸಲಿಗೆ ಬೇರೆಯದ್ದೇ ಕಥೆಯಾಗಿದೆ. ಶಿವರಾಜ್ ಕುಮಾರ್ ಅವರು ಮಗುವೊಂದನ್ನ ಮುದ್ದಾಡುತ್ತಿರುವ ಫೋಟೋ ಬಹಳ ಹಿಂದಿನದ್ದು. ಆ ಫೋಟೋ ಪುನೀತ್ ರಾಜ್ ಕುಮಾರ್ ಕಾಲವಾಗುವ ಮುನ್ನ ತೆಗೆದಿರುವ ಫೋಟೋವಾಗಿದೆ. ಫೋಟೋದಲ್ಲಿರುವ ಮಗು ಶಿವಣ್ಣ ಅವರ ಪುತ್ರಿ ನಿರುಪಮಾ ಅವರದ್ದಲ್ಲ.

ಆ ಮಗು ಶಿವಣ್ಣ ಅವರ ಆಪ್ತರ ಮಗುವಾಗಿದ್ದು, ಆ ಮಗುವನ್ನು ನೋಡಲು ಶಿವಣ್ಣ ಮತ್ತು ಗೀತಾ ಅವರು ಹೋದಾಗ ತೆಗೆದಿರುವ ಫೋಟೊವಾಗಿದೆ. ಇನ್ನು ನಟ ಪುನೀತ್ ರಾಜ್ ಕುಮಾರ್ ಅವರಿಗೆ ಮಕ್ಕಳೆಂದರೆ ಬಹಳ ಅಚ್ಚು ಮೆಚ್ಚು. ಮಕ್ಕಳನ್ನ ಕಂಡರೆ ಅವರೇ ಸ್ವತಃ ಹೋಗಿ ಕೆನ್ನೆ ಮುಟ್ಟಿ ಮಾತಾಡಿಸುತ್ತಿದ್ದರು. ಅದಕ್ಕೆ ಉತ್ತಮ ಉದಾಹರಣೆ ಎಂಬಂತೆ ಸಿನಿಮಾ ಕಾರ್ಯಕ್ರಮವೊಂದಕ್ಕೆ ಅಪ್ಪು ಅವರು ಅತಿಥಿಯಾಗಿ ಹೋಗಿದ್ದಾಗ ಅಲ್ಲಿದ್ದ ಪುಟ್ಟ ಪೋರ ಪವರ್ ಸ್ಟಾರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದು ಮುಗ್ದ ಮನಸ್ಸಿನಿಂದ ಕರೆಯುತ್ತಿದ್ದಾಗ ಆ ಮಗುವಿನ ಬಳಿ ಬಂದು ಕೆನ್ನೆ ಮುಟ್ಟಿ ಮಾತಾನಾಡಿಸಿ ಹೋಗುತ್ತಿರುವ ವೀಡಿಯೋವೊಂದು ಸಖತ್ ವೈರಲ್ ಆಗಿತ್ತು. ನಟ ಪುನೀತ್ ರಾಜ್ ಕುಮಾರ್ ಅವರನ್ನು ಕಂಡರೆ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೂ ಅವರನ್ನ ಇಷ್ಟಪಡುತ್ತಿದ್ದರು.

ಅಜ್ಜಿಯೊಬ್ಬರು ಬಸ್ ನಲ್ಲಿ ಅಪ್ಪು ಅವರ ಪೋಸ್ಟರ್ ಬಳಿ ಬಂದು ಅವರನ್ನ ಮುಟ್ಟಿ ಅಳುತ್ತಿರುವ ದೃಶ್ಯವೊಂದು ಕೂಡ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಹೀಗೆ ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ತಿಂಗಳಲ್ಲ ಶತಮಾನಗಳು ಕಳೆದರು ಕೂಡ ಅವರು ಮಾಡಿದಂತಹ ಸಿನಿಮಾ ಹಾಗೂ ಅವರ ಸಾಮಾಜಿಕ ಕಾರ್ಯಗಳು ಅವರನ್ನು ಸದಾ ಜೀವಂತವಾಗಿಟ್ಟಿರುತ್ತದೆ ಎನ್ನಬಹುದು. ಇನ್ನು ನಟ ಪುನೀತ್ ರಾಜ್ ಕುಮಾರ್ ಅವರು ಪ್ರತಿಯೊಂದು ಮಗುವಿನ ಮುಖದಲ್ಲಿ ಇದ್ದೆ ಇರುತ್ತಾರೆ. ಸದಾ ಹಸನ್ಮುಖಿಯಾಗಿ ಮಗುವಿನಂತೆ ನಗುತ್ತಿರುತ್ತಿದ್ದ ಅವರಿಗೆ ಎಂದಿಗೂ ಕೂಡ ಸಾವಿರುವುದಿಲ್ಲ. ಇಂದಿಗೂ ಕೂಡ ಅವರು ಸದಾ ಅವರ ಮಹಾತ್ಕಾರ್ಯಗಳ ಮೂಲಕ ನೆನಪಿನಲ್ಲಿ ಉಳಿದಿರುತ್ತಾರೆ.

Leave a Reply

%d bloggers like this: