ಶಿವಣ್ಣನ ಮದುವೆ ಕಾರ್ಡ್ ನಲ್ಲಿ ನಿಜಕ್ಕೂ ಏನೆಲ್ಲಾ ಬರಿದಿದ್ದರು ಗೊತ್ತಾ? ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.. ನೋಡಿ ಒಮ್ಮೆ

ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮದುವೆಯ ಫೋಟೋ ಮತ್ತು ಲಗ್ನ ಪತ್ರಿಕೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಸ್ ಆಗುತ್ತಿದೆ. ಇದ್ದಕಿದ್ದಂತೆ ಈ ಫೋಟೋ ವೈರಲ್ ಆಗುವುದಕ್ಕೆ ಕಾರಣ ಏನು ಗೊತ್ತಾ..! ಹೌದು ಕನ್ನಡ ಚಿತ್ರರಂಗದ ಎನರ್ಜಿ ಬೂಸ್ಟರ್ ನಟ ಅಂದರೆ ಅದು ಒನ್ ಅಂಡ್ ಓನ್ಲೀ ಶಿವಣ್ಣ. ಆನಂದ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶಿವರಾಜ್ ಕುಮಾರ್ ಅವರು ಸರಿ ಸುಮಾರು ಮೂವತ್ತೈದುವರ್ಷಗಳಳಿಂದ ಕಲಾ ಸೇವೆ ಮಾಡುತ್ತಾ ಬರುತ್ತಿದ್ದಾರೆ. ಇನ್ನು ನಟ ಶಿವಣ್ಣ ಅಂದಾಕ್ಷಣ ಎಲ್ಲರ ಮನಸ್ಸಿಗೂ ಬರುವ ವಿಚಾರ ಅಂದರೆ ಅದು ಅವರ ವಯಸ್ಸು ಮತ್ತು ಉತ್ಸಾಹ. ಹೌದು ಐವತ್ತು ವರ್ಷ ವಯಸ್ಸು ದಾಟಿದ್ದರು ಕೂಡ ಇಂದಿಗೂ ಸಹ ಯುವ ನಟ-ನಟಿಯರನ್ನ ನಾಚಿಸುವಂತೆ ಡ್ಯಾನ್ಸ್, ಫೈಟ್ ಮಾಡುತ್ತಾರೆ. ಒಂದು ರೀತಿಯಾಗಿ ಇಂದಿನ ಎಲ್ಲಾ ಕಲಾವಿದರಿಗೆ ರೋಲ್ ಮಾಡೆಲ್ ಆಗಿದ್ದಾರೆ ಎನ್ನಬಹುದು. ಶಿವರಾಜ್ ಕುಮಾರ್ ಅವರು ತನ್ನ ತಂದೆ ಒಬ್ಬ ಮೇರು ನಟನಾಗಿದ್ದರು ಕೂಡ ಅವರ ಹೆಸರನ್ನ ಬಳಸಿಕೊಳ್ಳದೇ ತಮ್ಮ ಸ್ವಂತ ಪ್ರತಿಭೆಯಿಂದ ಚಿತ್ರರಂಗದಲ್ಲಿ ಇಂದಿಗೂ ಕೂಡ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.

ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ನಟನಾಗಿ ಅಭಿನಯಿಸಿದ ಸತತ ಮೂರು ಸಿನಿಮಾಗಳು ಕೂಡ ನೂರು ದಿನವನ್ನು ಯಶಸ್ವಿಯಾಗಿ ಪೂರೈಸಿ ಚಂದನವನದ ಹ್ಯಾಟ್ರಿಕ್ ಹೀರೋ ಎಂದೇ ಬಿರುದು ಪಡೆದುಕೊಂಡರು. ಇಲ್ಲಿವರೆಗೆ 120 ಕ್ಕೂಹೆಚ್ಚು ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿರುವ ಶಿವರಾಜ್ ಕುಮಾರ್ ಅವರು ಪ್ರಸ್ತುತ ಇರುವ ಎಲ್ಲಾ ಸ್ಟಾರ್ ನಟರಿಗೆ ಪೈಪೋಟಿ ನೀಡುತ್ತಿದ್ದಾರೆ. ಅದೇನೋ ಅಂತಾರಲ್ಲ ಹುಣಸೆ ಮರಕ್ಕೆ ಮುಪ್ಪಾದರು ಹುಣಸೆಗೆ ಮುಪ್ಪೇ ಎಂಬ ಮಾತಿನಂತೆ ನಟ ಶಿವರಾಜ್ ಕುಮಾರ್ ಅವರಿಗೆ ವಯಸ್ಸೆಷ್ಟಾದರು ಕೂಡ ಅದೇಶ ಎನರ್ಜಿ ಚಾರ್ಮ್ ಉಳಿಸಿಕೊಂಡು ಇಪ್ಪತ್ತೈದು ವರ್ಷದ ಹರೆಯರಂತೆ ಕಾಣುತ್ತಾ ಕನ್ನಡ ಸಿನಿ ಪ್ರೇಕ್ಷಕರನ್ನು ಮನರಂಜಿಸುತ್ತಿದ್ದಾರೆ. ಶಿವಣ್ಣ ಅವರು ವರ್ಷಪೂರ್ತಿ ಸಿನಿಮಾಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ನಟ. ಹಾಗಾಗಿ ಅವರು ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಆದರೆ ಇದೀಗ ಶಿವಣ್ಣ ಅವರು ಸುದ್ದಿ ಆಗಿರುವುದು ಅವರ ಸಿನಿಮಾ ವಿಚಾರವಾಗಿ ಅಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇನೂ ಸಕ್ರೀಯವಾಗಿ ಕಾಣಿಸಿಕೊಳ್ಳದ ಶಿವರಾಜ್ ಕುಮಾರ್ ಅವರ ಬಗ್ಗೆ ಒಂದಷ್ಟು ವಿಚಾರಗಳು ಮಾತ್ರ ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ವೈರಲ್ ಆಗಿರುವ ಪೋಸ್ಟ್ ಅಂದರೆ ಅದು ಶಿವರಾಜ್ ಕುಮಾರ್ ಮತ್ತು ಗೀತಾ ಅವರ ಮದುವೆ ಲಗ್ನಪತ್ರಿಕೆಯ ಪೋಟೋಗಳನ್ನು. ಅದರಲ್ಲಿ ಶಿವಣ್ಣ ಅವರ ವಿಧ್ಯಾಭ್ಯಾಸದ ಬಗ್ಗೆ ತಿಳಿಯದ ಅನೇಕ ಮಂದಿಗೆ ಶಿವಣ್ಣ ಅವರು ಬಿ. ಎಸ್ಸಿ. ಡಿ. ಎಫ್. ಎ. ಪದವಿ ಮಾಡಿದ್ದಾರಾ ಎಂದು ಅಚ್ಚರಿ ಪಡುತ್ತಿದ್ದಾರೆ. ಜೊತೆಗೆ ಗೀತಾ ಶಿವರಾಜ್ ಕುಮಾರ್ ಅವರು ಬಿ. ಎ. ಪದವಿ ಪಡೆದಿರುವುದು ಕೂಡ ಇದೀಗ ಬಹಳಷ್ಟು ಮಂದಿಗೆ ಗೊತ್ತಾಗಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಲಗ್ನ ಪತ್ರಿಕೆ ಫೋಟೋ ಭಾರಿ ವೈರಲ್ ಆಗುತ್ತಿದೆ.