ಶಿವಣ್ಣ ಆವತ್ತು ದರ್ಶನ್ ಮತ್ತು ಸುದೀಪ್ ವಿರುದ್ಧ ಸಿಟ್ಟಾಗಿ ವಾರ್ನಿಂಗ್ ಕೊಟ್ಟಿದ್ದು ಯಾಕೆ ಗೊತ್ತಾ? ನಿಜಕ್ಕೂ ಆಗಿದ್ದೇನು ಗೊತ್ತಾ

ಮೈದಾನದ ತುಂಬೆಲ್ಲಾ ಜನ ಸೇರಿದ್ರೇ ಜನ ಅಲ್ಲ. ಐದು ಜನ ಸೇರಿದ್ರೂ ಜನಾನೇ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೌಂಟರ್ ಡೈಲಾಗ್ ಹೊಡೆದದ್ದು ಯಾರಿಗೆ ಗೊತ್ತಾ…! ಕಳೆದ ಕೆಲವು ವರ್ಷಗಳ ಹಿಂದೆ ಕನ್ನಡಕ್ಕೆ ಡಬ್ಬಿಂಗ್ ಬೇಡ ಎಂಬ ವಿಚಾರವಾಗಿ ಕನ್ನಡ ಚಿತ್ರರಂಗ ಒಕ್ಕೋರಲಿನಿಂದಾಗಿ ನಗರದ ಮೈದಾನವೊಂದರಲ್ಲಿ ಬೃಹತ್ ಪ್ರತಿಭಟನೆ ಆಯೋಜನೆ ಮಾಡಲಾಗಿತ್ತು. ಈ ಡಬ್ಬಿಂಗ್ ವಿರೋಧಿಸಿ ಕನ್ನಡ ಚಿತ್ರರಂಗದ ಎಲ್ಲಾ ಖ್ಯಾತನಾಮ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ಸೇರಿದಂತೆ ಸಿನಿಮಾ ಕ್ಷೇತ್ರದ ಪ್ರತಿಯೊಬ್ಬರು ಕೂಡ ಭಾಗವಹಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮನವಿ ಮಾಡಿತ್ತು. ಅದರಂತೆ ಕನ್ನಡ ಸಿನಿ ಪ್ರಿಯರು ಸೇರಿದಂತೆ ಸ್ಯಾಂಡಲ್ ವುಡ್ ನ ಅನೇಕ ಸ್ಟಾರ್ ನಟ-ನಟಿಯರು ಡಬ್ಬಿಂಗ್ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ಆಕ್ರೋಶವನ್ನ ಹೊರ ಹಾಕಿ ಮಾತನಾಡಿದರು.

ಅದರಂತೆ ಕನ್ನಡ ಚಿತ್ರರಂಗದ ಖ್ಯಾತ ನಟರಾದ ಶಿವರಾಜ್ ಕುಮಾರ್, ರವಿಚಂದ್ರನ್, ಜಗ್ಗೇಶ್, ಪುನೀತ್ ರಾಜ್ ಕುಮಾರ್, ದರ್ಶನ್, ಕಿಚ್ಚ ಸುದೀಪ್,ಯಶ್, ದೃವಸರ್ಜಾ, ದುನಿಯಾ ವಿಜಯ್,ಗಣೇಶ್,ದಿಗಂತ್ ನೀನಾಸಂ ಸತೀಶ್ ಸೇರಿದಂತೆ ಅನೇಕ ನಟರು ಪಾಲ್ಗೋಂಡಿದ್ದರು. ಇದೇ ಪ್ರತಿಭಟನೆಯಲ್ಲಿ ಕೆಲವು ಸ್ಟಾರ್ ನಟ-ನಟಿಯರು ಸೂಕ್ತವಾಗಿ ಸ್ಪಂದಿಸದೇ ಸರಿಯಾದ ಸಮಯಕ್ಕೆ ವಿಳಂಬ ಮಾಡಿದ್ದರಿಂದ ಕನ್ನಡ ಚಿತ್ರರಂಗ ಕಲಾವಿದರಲ್ಲಿ ಒಗ್ಗಟ್ಟು ಇಲ್ಲ ಎಂಬ ಸದ್ದು ಕೂಡ ಕೇಳಿ ಬಂತು. ಅಂತೆಯೇ ವೇದಿಕೆಯಲ್ಲಿ ಒಬ್ಬರೊಬ್ಬರಂತೆ ಸ್ಟಾರ್ ನಟರು ಪರಭಾಷೆ ಚಿತ್ರಗಳು ಕನ್ನಡ ಭಾಷೆಗೆ ಡಬ್ ಆಗಿ ಕರ್ನಾಟಕದಲ್ಲಿ ರಿಲೀಸ್ ಆಗುವುದರಿಂದ ಕನ್ನಡ ಚಿತ್ರರಂಗಕ್ಕೆ ಆಗುವ ಅಪಾರ ನಷ್ಟ ಮತ್ತು ಕನ್ನಡ ಕಲಾವಿದರಿಗೆ ಅವಕಾಶಗಳ ಕೊರತೆ ಸೇರಿದಂತೆ ಡಬ್ಬಿಂಗ್ ಸಾಧಕ ಭಾದಕಗಳ ಬಗ್ಗೆ ಅನೇಕ ಹಿರಿಯ ನಟರು ವೇದಿಕೆಯ ಮೇಲೆ ಮಾತನಾಡಿ ಡಬ್ಬಿಂಗ್ ವಿರುದ್ದ ಆಕ್ರೋಶ ಹೊರ ಹಾಕಿದ್ದರು.

ಅದರಂತೆ ವೇದಿಕೆಯ ಮೇಲೆ ಕಿಚ್ಚ ಸುದೀಪ್ ಅವರು ಡಬ್ಬಿಂಗ್ ವಿರುದ್ದ ಮಾತನಾಡುತ್ತಲೇ ನಡುವೆ ನನಗೆ ಇಡೀ ಮೈದಾನದಲ್ಲಿ ಇರುವ ಜನರ ನೋಡಿ ಕನ್ನಡ ಭಾಷೆ ಮೇಲೆ ಅಭಿಮಾನ, ಪ್ರೀತಿ, ಗೌರವ ಇರುವ ಜನರು ಇಷ್ಟೇನಾ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಮೈದಾನ ಸಂಪೂರ್ಣವಾಗದ ಹಿನ್ನೆಲೆಯಲ್ಲಿ ಸುದೀಪ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಅದಾಗೇ ತಾನೇ ಮಾತನಾಡಿ ಮುಗಿಸಿದ ಶಿವಣ್ಣ ಮತ್ತೆ ಎದ್ದು ಬಂದು ಮೈಕ್ ಹಿಡಿದು ಫೀಲ್ಡ್ ತುಂಬಾ ಜನ ಸೇರಿದ್ರೇ ಜನ ಅಲ್ಲ. ಒಬ್ಬ ಸೇರಿದ್ರು ಐದು ಜನ ಸೇರಿದ್ರು ಜನಾನೇ ಜನರಿಂದ ಅಳತೆ ಮಾಡಬಾರದು ಖಡಕ್ ಆಗಿ ಹೇಳಿದ್ದರು. ಇದು ನೇರವಾಗಿ ಸುದೀಪ್ ಅವರ ಮಾತಿಗೆ ಕೌಂಟರ್ ಎಂಬುದು ಎಲ್ಲರಿಗೂ ಅರವಾಯಿತು. ಸದ್ಯಕ್ಕೆ ಎಲ್ಲ ಕೆಟ್ಟ ಸಂಗತಿ ಮರೆತು ಒಂದಾಗಿರುವ ಸುದೀಪ್ ಮತ್ತು ಶಿವಣ್ಣ ಒಟ್ಟಿಗೆ ವಿಲನ್ ಚಿತ್ರದಲ್ಲಿ ಕಾಣಿಸಿಕೊಂಡರು. ಇದೀಗ ಸುದೀಪ್ ಅವರು ಶಿವಣ್ಣ ಅವರೊಟ್ಟಿಗೆ ಉತ್ತಮ ಸ್ನೇಹ ಸಂಬಂಧದಲ್ಲಿದ್ದುಕೊಂಡು ಕನ್ನಡ ಚಿತ್ರರಂಗದ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ.

Leave a Reply

%d bloggers like this: