ಶೆಟ್ಟಿ ಗ್ಯಾಂಗಿನ ಹೊಸ ಬ್ಯಾಚುಲರ್ ಪಾರ್ಟಿಗೆ ಹೊಸ ನಟಿಯರು

ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇದೀಗ ಸಕ್ಸಸ್ ಫುಲ್ ನಟ ಕಮ್ ನಿರ್ಮಾಪಕರಾಗಿ ಮಿಂಚುತ್ತಿದ್ದಾರೆ. ತಾನು ಬೆಳೆದು ತನ್ನ ಜೊತೆ ಕೆಲಸ ಮಾಡೋ ಪ್ರತಿಯೊಬ್ಬರನ್ನೂ ಕೂಡ ಬೆಳೆಸೋ ವ್ಯಕ್ತಿತ್ವ ರೂಢಿಸಿಕೊಂಡಿರೋ ರಕ್ಷಿತ್ ಶೆಟ್ಟಿ ತಾವೇ ಬಂಡವಾಳ ಹೂಡಿ ತಮ್ಮ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಸೆವೆನ್ ಆಡ್ಸ್ ತಂಡದಲ್ಲಿ ರೈಟರ್ ಆಗಿದ್ದ ಕಿರಣ್ ರಾಜ್ ಅವರಿಗೆ 777 ಚಾರ್ಲಿ ಚಿತ್ರ ನಿರ್ಮಾಣ ಮಾಡೋ ಮೂಲಕ ಕಿರಣ್ ರಾಜ್ ಅವರಿಗೆ ನಿರ್ದೇಶಕರಾಗೋದಕ್ಕೆ ಅವಕಾಶ ಮಾಡಿಕೊಟ್ರು. ಈ 777ಚಾರ್ಲಿ ಸಿನಿಮಾ ಸೂಪರ್ ಹಿಟ್ ಆಗಿ ದೇಶಾದ್ಯಂತ ಬರೋಬ್ಬರಿ 150 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಅಫೀಸ್ ನಲ್ಲಿ ಧೂಳೆಬ್ಬಿಸಿತು. ಇದೇ ಸಕ್ಸಸ್ ನಲ್ಲಿ ಇರೋ ರಕ್ಷಿತ್ ಶೆಟ್ಟಿ ಅವರು ಇದೀಗ ಹೊಸದೊಂದು ಸಿನಿಮಾ ಘೋಷಣೆ ಮಾಡಿದ್ದಾರೆ.

ತಮ್ಮ ಕಿರಿಕ್ ಪಾರ್ಟಿ, ಅವನೇ ಶ್ರೀ ಮನ್ನಾರಾಯಣ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಗಳಿಗೆ ಕಥೆ ಮತ್ತು ಚಿತ್ರಕಥೆ ವಿಭಾಗದಲ್ಲಿ ಕೆಲಸ ಮಾಡಿದ ಅಭಿಜಿತ್ ಮಹೇಶ್ ಅವರಿಗೆ ಈ ಹೊಸ ಚಿತ್ರ ನಿರ್ದೇಶನ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ದಿಗಂತ್, ರಿಷಬ್ ಶೆಟ್ಟಿ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಜೊತೆಗೆ ವಿಶೇಷ ಪಾತ್ರಗಳಲ್ಲಿ ರಕ್ಷಿತ್ ಶೆಟ್ಟಿ, ಸಿರಿ ರವಿ ಕುಮಾರ್, ಅರ್ಚರಾ ಕಿರ್ಕ್, ಪ್ರಕಾಶ್ ತುಮಿನಾಡು ಅಭಿನಯಿಸಲಿದ್ದಾರಂತೆ. ಈ ಕಾಮಿಡಿ ಜಾನರ್ ಕಥಾ ಹಂದರ ಹೊಂದಿರೋ ಚಿತ್ರಕ್ಕೆ ಬ್ಯಾಚುಲರ್ ಪಾರ್ಟಿ ಎಂದು ಟೈಟಲ್ ಇಟ್ಟಿದ್ದಾರೆ. ಈ ಬಗ್ಗೆ ನಟ ಕಮ್ ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಮ್ಮ ಪರಮ್ವಾ ಸ್ಟೂಡಿಯೋಸ್ ನಿರ್ಮಾಣ ಸಂಸ್ಥೆಯಡಿ ಮತ್ತೊಂದು ಹೊಸ ಚಿತ್ರ ಬ್ಯಾಚುಲರ್ ಪಾರ್ಟಿ ಬರುತ್ತಿದೆ. ಈ ನಮ್ಮ ಪ್ರಯಾಣವನ್ನು ನಿಮ್ಮ ಸಮ್ಮುಖದಿಂದ ಹರಸಿರಿ ಎಂದು ಚಿತ್ರದ ಟೈಟಲ್ ಅನೌನ್ಸ್ ಮೆಂಟ್ ಪೋಸ್ಟರ್ ವೀಡಿಯೋ ಶೇರ್ ಮಾಡಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಶೈನ್ ಆದಂತಹ ರಕ್ಷಿತ್ ಶೆಟ್ಟಿ ಅಂಡ್ ಗ್ಯಾಂಗ್ ಇದೀಗ ಬ್ಯಾಚುಲರ್ ಪಾರ್ಟಿ ಮಾಡೋಕ್ ಹೊರಟಿದ್ದಾರೆ.