‘ಶೇರ್’ ಆಗಿ ತೆರೆಯ ಮೇಲೆ ಮಿಂಚಲಿದ್ದಾರೆ ನಟ ಕಿರಣ್ ರಾಜ್ ಅವರು

ಕನ್ನಡ ಕಿರುತೆರೆಯ ಜನಪ್ರಿಯ ಕನ್ನಡತಿ ಧಾರಾವಾಹಿಯ ಮೂಲಕ ನಾಡಿನ ಮನೆ ಮನಗಳಲ್ಲಿ ಹೆಸರಾದ ನಟ ಕಿರಣ್ ರಾಜ್ ಅವರು ಬಡ್ಡೀಸ್ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸುವ ಬೆಳ್ಳಿ ಪರದೆಯಲ್ಲಿಯೂ ಮಿಂಚಿದ್ದಾರೆ. ಬಡ್ಡೀಸ್ ಚಿತ್ರದ ನಂತರ ಕಿರಣ್ ರಾಜ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬಿಝಿ಼ ಆಗಿದ್ದಾರೆ. ಈಗಾಗಲೇ ಭರ್ಜರಿ ಗಂಡು ಚಿತ್ರದಲ್ಲಿ ನಟಿಸಿರುವ ಕಿರಣ್ ರಾಜ್ ಅವರು ಈ ಸಿನಿಮಾ ರಿಲೀಸ್ ಆಗುವ ಮುನ್ನ ಮತ್ತೊಂದು ಚಿತ್ರಕ್ಕೆ ಸಿದ್ದರಾಗಿದ್ದಾರೆ. ಈ ಚಿತ್ರವನ್ನ ಭರ್ಜರಿ ಗಂಡು ಸಿನಿಮಾ ನಿರ್ದೇಶನ ಮಾಡಿರುವ ಪ್ರಸಿದ್ದ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಈ ಹೊಸ ಸಿನಿಮಾಗೆ ಶೇರ್ ಎಂದು ಟೈಟಲ್ ಇಟ್ಟು, ಇತ್ತೀಚೆಗೆ ಮುಹೂರ್ತ ಕೂಡ ನಡೆದಿದೆ. ಈ ಚಿತ್ರದಲ್ಲಿ ನಟ ಕಿರಣ್ ರಾಜ್ ಅವರನ್ನ ಎಂದೂ ಕೂಡ ನೋಡದ ಪಾತ್ರದಲ್ಲಿ ನೋಡಬಹುದಾಗಿದೆಯಂತೆ.

ಯಾಕಂದ್ರೆ ಇಷ್ಟು ದಿನ ಕಿರಣ್ ರಾಜ್ ಅವರನ್ನ ಕಿರುತೆರೆ ಮತ್ತು ಸಿನಿಮಾದಲ್ಲಿ ತುಂಬ ಸಾಫ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಶೇರ್ ಸಿನಿಮಾದಲ್ಲಿ ಕಿರಣ್ ರಾಜ್ ಅವರು ಮಾಸ್ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಕಿರಣ್ ರಾಜ್ ಅವರು ಮಾರ್ಷಲ್ ಆರ್ಟ್, ಕಿಕ್ ಬಾಕ್ಸಿಂಗ್ ಪ್ರಾಕ್ಟೀಸ್ ಮಾಡಿದ್ದಾರಂತೆ. ಇದೇ ಆಗಸ್ಟ್ ತಿಂಗಳ 22ರಿಂದ ಶೂಟಿಂಗ್ ಆರಂಭ ಆಗಲಿದೆ ಎಂದು ನಿರ್ದೇಶಕ ಪ್ರಸಿದ್ದ್ ಅವರು ತಿಳಿಸಿದ್ದಾರೆ. ಈ ಶೇರ್ ಸಿನಿಮಾ ಕಂಪ್ಲೀಟ್ ಥ್ರಿಲ್ಲರ್ ಸಸ್ಪೆನ್ಸ್ ಕಥಾ ಹಂದರ ಹೊಂದಿದೆಯಂತೆ. ಕಿರಣ್ ರಾಜ್ ಅವರಿಗೆ ಜೋಡಿಯಾಗಿ ಸುರೇಖಾ ಅವರು ನಟಿಸುತ್ತಿದ್ದು, ತನೀಶಾ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಬೀದರ್ ಸುದರ್ಶನ್ ಸುಂದರ್ ರಾಜ್ ಅವರು ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ.