ಶಂಕರ್ ನಾಗ್ ಅವರ ಸಮಾಧಿ ಯಾಕೆ ಎಲ್ಲೂ ಇಲ್ಲ! ಅಸಲಿ ಸತ್ಯ ಏನು ಗೊತ್ತಾ? ಆಗಿದ್ದೇನು ಗೊತ್ತಾ? ನೋಡಿ ಒಮ್ಮೆ

ಸ್ಯಾಂಡಲ್ ವುಡ್ ಕರಾಟೆಕಿಂಗ್ ಆಟೋರಾಜ ಖ್ಯಾತಿಯ ನಟ, ನಿರ್ದೇಶಕ ಶಂಕರ್ ನಾಗ್ ಅವರ ಸಮಾಧಿ ನಿರ್ಮಾಣ ಮಾಡಲು ಏಕೆ ಆಗಲಿಲ್ಲ ಎಂಬುದು ಇಂದಿಗೂ ಕೂಡ ಕನ್ನಡ ಚಿತ್ರ ರಸಿಕರ ಮನಸಲ್ಲಿ ಕಾಡುತ್ತಿದೆ. ಇಂತಹ ದೂರದೃಷ್ಟಿ ಆಲೋಚನೆವುಳ್ಳ ಕಲಾವಿದ ಧೀಮಂತ ನಟನ ಪುಣ್ಯಭೂಮಿ ನಿರ್ಮಿಸಿ ಅವರ ಸವಿ ನೆನಪಿನಾರ್ಥ ಪ್ರತಿಮೆಯನ್ನ ಕೂಡ ಯಾಕೆ ನಿರ್ಮಿಸಿಲ್ಲ ಎಂಬುದು ಅವರ ಅಸಂಖ್ಯಾತ ಅ‌ಭಿಮಾನಿಗಳ ನೋವು. ಹೌದು ಕನ್ನಡ ಚಿತ್ರರಂಗದ ದಿಗ್ಗಜ ನಟರ ಪೈಕಿ ನಟ ಶಂಕರ್ ನಾಗ್ ಕೂಡ ಒಬ್ಬರು. ಕೇವಲ ಸಿನಿಮಾದ ನಟನೆ ಮಾತ್ರ ಅಲ್ಲದೆ ರಂಗಭೂಮಿ ನಾಟಕದ ಬಗ್ಗೆ ಅಪಾರ ಒಲವು, ಸಾಮಾಜಿಕ ಕಳಕಳಿ, ಅಭಿವೃದ್ದಿಯ ಬಗ್ಗೆ ಇದ್ದಂತಹ ತಮ್ಮ ವಿಭಿನ್ನ ನೋಟ ಹೀಗೆ ತನ್ನ ಬಹುಮುಖ ವ್ಯಕ್ತಿತ್ವದ ಮೂಲಕ ನಾಡಿನಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿರುವ ನಟ ಶಂಕರ್ ನಾಗ್ ಅವರು ತಮ್ಮ ಕೇವಲ ಮೂವತ್ತಾರನೇ ವಯಸ್ಸಿನಲ್ಲಿಯೇ ಅಕಾಲಿಕ ಮರಣ ಹೊಂದಿದರು.

ಕನ್ನಡ ಚಿತ್ರರಂಗದ ಸುಪ್ರಸಿದ್ದ ನಟ, ನಿರ್ದೇಶಕರಾಗಿದ್ದ ಶಂಕರ್ ನಾಗ್ ಅವರು ಅಪಘಾತವಾಗಿ ನಿಧನರಾದ ನಂತರ ಅವರ ಸಮಾಧಿ ನಿರ್ಮಿಸಿ ಅದನ್ನ ಅವರ ಅಭಿಮಾನಿಗಳ ದರ್ಶನಕ್ಕೆ ಅವಕಾಶ ಆಗುವಂತಹ ವ್ಯವಸ್ಥೆಯನ್ನ ಅಂದಿನ ಸರ್ಕಾರ ಏಕೆ ಮಾಡಲಿಲ್ಲ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಆದರೆ ಅದಕ್ಕೆ ಅಸಲಿ ಕಥೆ ಬೇರೆಯದ್ದೇ ಇದೆ. ಅದನ್ನ ತಿಳಿಯುವ ಮುನ್ನ ಶಂಕರ್ ನಾಗ್ ಅವರ ಸಾಧನೆ ನೋಡೋಣ. ಶಂಕರ್ ನಾಗ್ ಅವರು ಜನಿಸಿದ್ದು ಹೊನ್ನಾವರದ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ. ವಿಧ್ಯಾಭ್ಯಾಸವಾದ ನಂತರ ಮುಂಬೈಗೆ ತೆರಳಿದ ಶಂಕರ್ ನಾಗರಕಟ್ಟೆ ಅವರು ರಂಗಭೂಮಿಯತ್ತ ಒಲವು ತೋರುತ್ತಾರೆ. ಮರಾಠಿ ರಂಗತಂಡವೊಂದಕ್ಕೆ ಸೇರಿದ ಶಂಕರ್ ನಾಗ್ ಅವರೊಟ್ಟಿಗೆ ಚಿತ್ರವೊಂದಕ್ಕೆ ಚಿತ್ರಕಥೆಯನ್ನ ಕೂಡ ಬರೆಯುತ್ತಾರೆ.

ಹೀಗೆ ರಂಗಭೂಮಿ ನಾಟಕಗಳಲ್ಲಿ ಅಭಿನಯಿಸುತ್ತಾ ಗಿರೀಶ್ ಕಾರ್ನಾಡ್ ಅವರ ಕಣ್ಣಿಗೆ ಬೀಳುತ್ತಾರೆ. ನಾಟಕ ಮುಗಿಸಿ ವೇದಿಕೆ ಮುಂಭಾಗದಲ್ಲಿದ್ದ ಶಂಕರ್ ಅವರನ್ನ ಕರೆದು ಚಿತ್ರದಲ್ಲಿ ಪಾತ್ರ ಮಾಡ್ತೀರಾ ಎಂದಿದ್ದೇ ತಡ ಶಂಕರ್ ನಾಗ್ ಅವರು ಒಂದಾನೊಂದು ಕಾಲದಲ್ಲಿ ಎಂಬ ಸಿನಿಮಾದ ಮೂಲಕ ಚಂದನವನಕ್ಕೆ ಎಂಟ್ರಿ ಕೊಡುತ್ತಾರೆ. ಅಂದು ಆರಂಭವಾದ ಇವರ ಸಿನಿಮಾದ ಬದುಕು 1990 ರವರೆಗೆ ಯಶಸ್ವಿಯಾಗಿ ಸಾಗುತ್ತದೆ. ಇವರ ನಟನೆಯ ಆಟೋರಾಜ, ಮೂಗನ ಸೇಡು, ಮುನಿಯದ ಮಾದರಿ, ಆಕ್ಸಿಡೆಂಟ್, ಮಿಂಚಿನ ಓಟ, ಗೀತಾ, ಜನ್ಮ ಜನ್ಮದ ಅನುಬಂಧ, ನೋಡಿ ಸ್ವಾಮಿ ನಾವಿರೋದೇ, ಹೊಸ ಜೀವನ, ಸಾಂಗ್ಲಿಯಾನ ಹೀಗೆ ಅನೇಕ ಸೂಪರ್ ಹಿಟ್ ಸಿನಿ‌ಮಾಗಳಲ್ಲಿ ನಟನೆ ಮಾಡಿದ್ದು ಮಾತ್ರ ಅಲ್ಲದೆ ಆಕ್ಸಿಡೆಂಟ್, ಮಿಂಚಿನ ಓಟ, ಒಂದು ಮುತ್ತಿನ ಕಥೆ ಅಂತಹ ಸಿನಿಮಾಗಳನ್ನ ಕೂಡ ನಿರ್ದೇಶನ ಮಾಡಿದ್ದಾರೆ.

ಇವರದ್ದು ಎಂತಹ ದೂರದೃಷ್ಟಿ ಇತ್ತು ಅಂದರೆ ಅಂದಿನ ದಿನಮಾನಗಳಲ್ಲೇ ನಂದಿಬೆಟ್ಟಕ್ಕೆ ರೋಪ್ ವೇ ಯೋಜನೆ, ಬೆಂಗಳೂರಿಗೆ ಮೆಟ್ರೋ ಯೋಜನೆ ತರುವ ಆಲೋಚನೆ ಮಾಡಿ ನಕ್ಷೆಯನ್ನ ಕೂಡ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದರು. ಇಂತಹ ಅದ್ಭುತ ವ್ಯಕ್ತಿ ನಟ ಶಂಕರ್ ನಾಗ್ ಅವರು ಜೋಕುಮಾರಸ್ವಾಮಿ ಚಿತ್ರದ ಶೂಟಿಂಗ್ ಮುಗಿಸಿ ಧಾರವಾಡದಿಂದ ದಾವಣಗೆರೆಯ ಅನಗೋಡು ಎಂಬ ಗ್ರಾಮದ ಮೂಲಕ ಹೋಗುತ್ತಿರುತ್ತಾರೆ. ಈ ಗ್ರಾಮದಲ್ಲಿ ಕಾರು ಅಪಘಾತವಾಗಿ ಶಂಕರ್ ನಾಗ್ ಅವರು ಅಕಾಲಿಕ ಮರಣ ಹೊಂದುತ್ತಾರೆ. ದಿಢೀರ್ ಅವರ ಸಾವಿಗೆ ಶಾಕ್ ಆದಂತಹ ಅವರ ಕುಟುಂಬ ಕೂಡ ಯಾವುದೇ ರೀತಿಯಾಗಿ ಸಮಾಧಿ ನಿರ್ಮಾಣ ಮಾಡುವ ಯೋಜನೆಗೆ ಕೈ ಹಾಕಲಿಲ್ಲ.

ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಅಂತಿಮ ವಿಧಿ ವಿಧಾನ ನಡೆಯಿತು. ಇನ್ನು ಶಂಕರ್ ನಾಗ್ ಅವರ ಕನಸಿನ ಕೂಸು ರಂಗಶಂಕರವನ್ನು ಅವರ ಪತ್ನಿ ಅರುಂಧತಿ ಶಂಕರ್ ನಾಗ್ ಅವರು ಮುನ್ನೆಡೆಸಿಕೊಂಡು ಬರುತ್ತಿದ್ದಾರೆ. ಇಂದಿಗೂ ನಟ ಶಂಕರ್ ನಾಗ್ ಅವರನ್ನ ಆಟೋರಾಜ ಎಂದೇ ಕರೆಯುತ್ತಾರೆ. ಆಟೋ ಡ್ರೈವರ್ಸ್ ತಮ್ಮ ಆಟೋದಲ್ಲಿ ಶಂಕರ್ ನಾಗ್ ಅವರ ಫೋಟೋವನ್ನು ಹಾಕಿಸಿಕೊಂಡು ತಮ್ಮ ಅಭಿಮಾನ ಮೆರೆಯುತ್ತಿದ್ದಾರೆ.

Leave a Reply

%d bloggers like this: