ಶಾರುಖಾನ್ ಟೈಮ್ ನೋಡುವ ವಾಚಿನ ಬೆಲೆ ಎಷ್ಟು ಗೊತ್ತೆ?

ಶಾರುಖ್​ ಖಾನ್​ ಅವರ ವಾಚ್​ ಭಾರಿ ಸುದ್ದಿಯಾಗುತ್ತಿದೆ. ಶಾರುಖ್​ ಖಾನ್​ ಧರಿಸಿರುವ ವಾಚಿನ ಬೆಲೆ ಎಷ್ಟು ಗೊತ್ತಾ? ಬಹುಶಃ ನೀವು ಊಹಿಸಲಿಕ್ಕೂ ಸಾಧ್ಯವಿಲ್ಲ. ಅವರ ವಾಚು ಎಲ್ಲರ ಗಮನಕ್ಕೆ ಬಂದುದು ಅವರು ಈಚೆಗೆ ಇಂಟರ್‌ನ್ಯಾಷನಲ್ ಲೀಗ್ ಟಿ20 ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದಾಗ. ಆಗ ಸುದ್ದಿಯಾಗಿದ್ದ ವಾಚಿನ ಬಗ್ಗೆ ಈಗ ಎಲ್ಲರ ಬಾಯಲ್ಲೂ ಮಾತೇ ಮಾತು. ಶಾರುಖ್ ಅವರ ದುಬಾರಿ ವಾಚ್‌ ಬೆಲೆ ತಿಳಿದ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಅದರ ಫೋಟೋ ಈಗ ಇಂಟರ್​ನೆಟ್​ ತುಂಬಾ ಓಡಾಡುತ್ತಿದೆ. ಈ ವಾಚ್ ತುಂಬಾ ಸುಂದರವಾಗಿದೆ.

ಅದರ ಬೆಲೆ ಕೇಳಿದ್ರೆ ನೀವು ತುಂಬಾ ಆಶ್ಚರ್ಯಪಡುತ್ತೀರಿ ಎನ್ನುವುದು ಸುಳ್ಳಲ್ಲ. ವಾಸ್ತವವಾಗಿ, ಬಾಲಿವುಡ್‌ನ ‘ಬಾದ್‌ಶಾ’ ಅಭಿಮಾನಿಯೊಬ್ಬ ನಟನ ವಿಶೇಷ ವಾಚ್‌ನ ಬೆಲೆಯನ್ನು ಹುಡುಕಿ ಟ್ವೀಟ್ ಮಾಡಿದ್ದಾರೆ. ಈ ವಾಚ್ ಆಡಮಾಸ್ ಪೀಗೆ ಬ್ರಾಂಡ್‌ನದ್ದಾಗಿದೆ.ಅಷ್ಟಕ್ಕೂ ಈ ವಾಚಿನ ಬೆಲೆಯನ್ನು ಖುದ್ದು ಶಾರುಖ್​ ಅವರೇನೂ ಹೇಳಿಲ್ಲ. ಆಡಮಾಸ್ ಪೀಗೆ (Audemars Piguet) ಬ್ರಾಂಡ್‌ನ ಈ ದುಬಾರಿ ವಾಚಿನ ಗುಟ್ಟನ್ನು ಅವರು ರಟ್ಟು ಮಾಡಿಯೂ ಇಲ್ಲ. ಆದರೆ ಅವರ ಫ್ಯಾನ್​ ಒಬ್ಬ ಈ ವಾಚ್‌ನ ಬೆಲೆಯನ್ನು ಹುಡುಕಿ ಟ್ವೀಟ್ ಮಾಡಿದ್ದಾರೆ.

ರಾಯಲ್ ಓಕ್ ಪರ್ಚುವಲ್ ಕ್ಯಾಲೆಂಡರ್ (Royal Oak Perchual Calendar) ಮಾಡೆಲ್​ನ ಈ ವಾಚಿನ ಬೆಲೆ ಮಾರುಕಟ್ಟೆ ದರದಲ್ಲಿ ಹೇಳುವುದಾದರೆ ಸುಮಾರು 4 ಕೋಟಿ 74 ಲಕ್ಷ 47 ಸಾವಿರ ರೂಪಾಯಿ ಎಂದು ಅವರು ಹೇಳಿದ್ದಾರೆ. ಐಷಾರಾಮಿ ವಾಚಿನ ಮೌಲ್ಯ ವಾಚ್ ಮೌಲ್ಯ 4,74,47,000. ಇದನ್ನು ಎಣಿಸಲು ಕಷ್ಟ ಆಗಬಹುದು, ಸುಲಭದಲ್ಲಿ ಹೇಳುವುದಾದರೆ ಇದರ ಮೌಲ್ಯ 4 ಕೋಟಿಯ 74 ಲಕ್ಷದ 47 ಸಾವಿರ ರೂಪಾಯಿಗಳು! ಜನಸಾಮಾನ್ಯನೊಬ್ಬ ಬಹುಶಃ ಜೀವನಪೂರ್ತಿ ನಿಯತ್ತಿನಿಂದ ದುಡಿದರೂ ಇಷ್ಟು ಮೊತ್ತವನ್ನು ನೋಡಿರಲು ಸಾಧ್ಯವಿಲ್ಲ. ಲಕ್ಷುರಿ ಲೈಫ್​ಸ್ಟೈಲ್​ಗೆ ಹೆಸರಾಗಿರುವ ಶಾರುಖ್​ ಅಷ್ಟು ದುಬಾರಿ ಬೆಲೆಯ ವಾಚನ್ನು ಧರಿಸಿದ್ದಾರೆ. ಇವರ ವಾಚೀಗ ಸಾಮಾಜಿಕ ಜಾಲತಾಣದಲ್ಲಿ (social media) ಸಕತ್​ ಸೌಂಡ್​ ಮಾಡುತ್ತಿದೆ.

Leave a Reply

%d bloggers like this: