ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ನಡೀತು ಒಂದು ಅಧ್ಬುತ ಘಟನೆ, ನಿಜಕ್ಕೂ ಆಗಿದ್ದೇನು ಗೊತ್ತಾ

ಕನ್ನಡ ಚಿತ್ರರಂಗದ ಧೃವತಾರೆ ಮಿನುಗುವ ನಕ್ಷತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಒಂದು ತಿಂಗಳು ಪೂರೈಸಿದೆ.ಆದರೂ ಕೂಡ ನಾಡಿನಾದ್ಯಂತ ಅಪಾರ ಅಭಿಮಾನಿಗಳು ಅವರ ಸಮಾಧಿಯತ್ತ ದಿನಂಪ್ರತಿ ನೂರಾರು ಸಂಖ್ಯೆಯಲ್ಲಿ ಬಂದು ದರ್ಶನ ಮಾಡುತ್ತಿದ್ದಾರೆ. ಇಂದಿಗೂ ಸಹ ಅಪ್ಪು ಇಲ್ಲ ಎಂಬುದನ್ನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರ ಅಪ್ಪು ಅವರ ಕಲಾ ಸೇವೆ ಮತ್ತು ಸಾಮಾಜಿಕ ಸೇವಾ ಕಾರ್ಯಗಳನ್ನು ಪರಿಗಣಿಸಿ ಪುನೀತ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಇದೆಲ್ಲ ಒಂದು ಕಡೆಯಾದರೆ ಅಪ್ಪು ಅವರ ಅಭಿಮಾನಿಯೊಬ್ಬರು ಅಯ್ಯಪ್ಪ ಸ್ವಾಮಿ ಮಾಲೆ ಹಾಕಿಸಿಕೊಂಡು ಶಬರಿಮಲೆಗೆ ಹೋಗುವಾಗ ನಡೀತು ಒಂದು ಘಟನೆ.

ಅಭಿಮಾನಿ ಒಬ್ಬರು ಇರುಮುಡಿ ಹೊತ್ತು ಪುನೀತ್ ರಾಜ್ ಕುಮಾರ್ ಅವರ ಪೋಟೋವೊಂದನ್ನು ಕುತ್ತಿಗೆಗೆ ಕಟ್ಟಿಕೊಂಡು ಶಬರಿ ಮಲೆಯ ಹನ್ನೊಂದು ಮೆಟ್ಟಿಲನ್ನ ಹತ್ತಿ ತಮ್ಮ ಜೊತೆಗೆ ಅಪ್ಪು ಅವರು ಕೂಡ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡುವಂತೆ ಮಾಡಿದ್ದಾರೆ. ಮೊದಲಿನಿಂದಾನೂ ಡಾ.ರಾಜ್ ಕುಮಾರ್ ಕುಟುಂಬ ಪ್ರತಿವರ್ಷ ಅಯ್ಯಪ್ಪ ಸ್ವಾಮಿ ಶಬರಿ ಮಲೆಗೆ ರಾಜ್ ಕುಮಾರ್,ಶಿವಣ್ಣ,ರಾಘಣ್ಣ,ಅಪ್ಪು ಸೇರಿದಂತೆ ಆಪ್ತಿಷ್ಟರೆಲ್ಲಾ ಸೇರಿ ಸ್ವಾಮಿ ಸೇವೆ ಮಾಡುತ್ತಿದ್ದರು. ರಾಜ್ ಅವರು ಕಾಲವಾದ ನಂತರ ಶಿವಣ್ಣ, ರಾಘಣ್ಣ, ಅಪ್ಪು ಅವರು ಆ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರು. ಪುನೀತ್ ರಾಜ್ ಕುಮಾರ್ ಅವರು ಆಹಾರ ಪ್ರಿಯರಾಗಿದ್ದ ಕಾರಣ ಸಸ್ಯಾಹಾರದ ಜೊತೆಗೆ ಮಾಂಸಹಾರ ಕೂಡ ಹೆಚ್ಚಾಗಿ ಸೇವಿಸುತ್ತಿದ್ದರು.

ಆದರೆ ಯಾವಾಗ ಶಬರಿ ಮಲೆ ಅಯ್ಯಪ್ಪ ಸ್ವಾಮಿ ಮಾಲೆ ಹಾಕಿಕೊಳ್ಳುವಂತಹ ಸಂಧರ್ಭಗಳಲ್ಲಿ ತಿಂಗಳುಗಟ್ಟಲೇ ಮಾಂಸಾಹಾರಿ ತ್ಯಜಿಸಿ ಶ್ರದ್ದಾಭಕ್ತಿಯಿಂದ ಸ್ವಾಮಿಯ ಸೇವೆಯನ್ನ ಮಾಡುತ್ತಿದ್ದರು. ಇದೀಗ ಅವರ ಸ್ವಾಮಿಯ ಮೇಲೆ ಇದ್ದಂತಹ ಭಕ್ತಿಯ ಪರಾಕಾಷ್ಟೆ ಯಂತೆ ಅಭಿಮಾನಿಯೊಬ್ಬರು ಅವರ ಫೋಟೋ ಹೊತ್ತು ಶಬರಿಮಲೆ ಗೆ ಹೋಗಿ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿದ್ದು ನಿಜಕ್ಕೂ ಕೂಡ ಅಪ್ಪು ಅವರ ಅಭಿಮಾನಿಗಳ ಹೃದಯ ಎಷ್ಟರ ಮಟ್ಟಿಗೆ ಅವರಿಗಾಗಿ ಮಿಡಿಯುತ್ತಿತ್ತು ಎಂಬುದನ್ನ ತಿಳಿಸುತ್ತದೆ.