ಶಬರಿಮಲೆ ಮಕರಜ್ಯೋತಿಯ ಈ ದೊಡ್ಡ ರಹಸ್ಯ ಇಂದಿಗೂ 99% ಜನರಿಗೆ ಗೊತ್ತೇ ಇಲ್ಲ.. ನೋಡಿ ಒಮ್ಮೆ

ವರ್ಷದ ಮೊದಲ ಹಬ್ಬವಾಗಿ ಬರುವ ಸಂಕ್ರಾಂತಿ ಹಬ್ಬ ಪ್ರತಿಯೊಬ್ಬರಿಗೂ ಕೂಡ ವಿಶೇಷವಾಗಿರುತ್ತದೆ. ಅದರಲ್ಲಿಯೂ ಹಿಂದೂ ದೇವಾಲಯಗಳಲ್ಲಿ ಈ ಸಂಕ್ರಾಂತಿ ಹಬ್ಬದಂದು ವಿಶೇಷ ಪೂಜಾ ಪುನಸ್ಕಾರಗಳು ನಡೆಯುತ್ತವೆ. ಅದರಲ್ಲಿಯೂ ಬೆಂಗಳೂರಿನ ದಕ್ಷಿಣಕಾಶಿ ಗವಿಗಂಗಾಧರೇಶ್ವರ ಸ್ವಾಮಿಯ ಮೇಲೆ ನಂದಿಯ ಕೊಂಬುಗಳ ನಡುವೆ ಸೂರ್ಯ ರಶ್ಮಿ ಹಾದು ಹೋಗಿ ಶಿವಲಿಂಗವನ್ನ ಸ್ಪರ್ಶಿಸುತ್ತದೆ. ಈ ಅದ್ಭುತ ಅಪೂರ್ವವಾದ ದೃಶ್ಯವನ್ನು ನೇರವಾಗಿ ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಕಾಯುತ್ತಿರುತ್ತಾರೆ. ಅದರಂತೆ ಮತ್ತೊಂದು ಜಗತ್ತಿನಾದ್ಯಂತ ಪ್ರಸಿದ್ದಿಯಾಗಿರುವ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯ ದಲ್ಲಿ ಕೂಡ ಪವಾಡ ದೃಶ್ಯವೊಂದು ನಡೆಯುತ್ತದೆ. ಅದೇ ಮಕರ ಜ್ಯೋತಿ. ಶಬರಿ ಮಲೆ ದೇವಾಲಯವು ದಕ್ಷಿಣ ಭಾರತದ ಪವಿತ್ರವಾದ ಕ್ಷೇತ್ರಗಳಲ್ಲಿ ಪ್ರಮುಖವಾಗಿದೆ.ಈ ಪುಣ್ಯ ಕ್ಷೇತ್ರಕ್ಕೆ ದೇಶದ ಮೂಲೆ ಮೂಲೆಗಳಿಂದ ಮಾತ್ರ ಅಲ್ಲದೇ ವಿದೇಶಗಳಿಂದ ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನ ಮಾಡಲು ಬರುತ್ತಾರೆ.

ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ಶಬರಿ ಮಲೆಗೆ ಪ್ರತಿ ವರ್ಷ ಸುಮಾರು 45ರಿಂದ 50 ಮಿಲಿಯನ್ ನಷ್ಟು ಭಕ್ತರು ಭೇಟಿ ನೀಡುತ್ತಾರಂತೆ. ಮಕರ ಸಂಕ್ರಮಣ ಸಂಕ್ರಾಂತಿ ಹಬ್ಬದಂದು ಶಬರಿ ಮಲೆಯಲ್ಲಿ ವಿಸ್ಮಯವೊಂದು ಗೋಚರಿಸುತ್ತದೆ. ಆ ವಿಸ್ಮಯವೇ ಮಕರಜ್ಯೋತಿ. ಈ ಮಕರ ಜ್ಯೋತಿಯನ್ನ ಕಣ್ತುಂಬಿ ಕೊಳ್ಳಲು ದೇಶ ವಿದೇಶಗಳಿಂದ ಅಪಾರ ಭಕ್ತಗಣ ಎದುರು ನೋಡುತ್ತಿರುತ್ತದೆ. ಮಕರ ಜ್ಯೋತಿ ದರ್ಶನ ಮಾಡಿ ಪುನೀತರಾಗುವ ಲಕ್ಷಾಂತರ ಮಂದಿ ಭಕ್ತರ ಜೀವನದಲ್ಲಿ ಮಹತ್ತರವಾದ ಬದಲಾವಣೆಯೊಂದು ನಡೆಯುತ್ತದೆ ಎಂಬ ನಂಬಿಕೆ ಕೂಡ ಇದೆ. ಆದರೆ ವಿಸ್ಮಯ ಎಂದು ಕರೆಯುವ ಮಕರ ಜ್ಯೋತಿಯ ಬಗ್ಗೆ ಅನೇಕರು ಒಂದೊಂದು ಅಭಿಪ್ರಾಯಗಳನ್ನ ಹೊಂದಿದ್ದಾರೆ. ಒಬ್ಬರು ಇದನ್ನು ವಿಸ್ಮಯ ಎಂದರೆ ಮತ್ತೇ ಕೆಲವರು ಇದೆಲ್ಲಾ ಮೋಸ ಎಂದು ವಾದಿಸುವುದು ಉಂಟು.

ಭಕ್ತರು ಮಕರ ಜ್ಯೋತಿಯನ್ನು ಅಯ್ಯಪ್ಪ ಸ್ವರೂಪವೆಂದೇ ಭಾವಿಸುವುದುಂಟು. ಆದರೆ ಕೆಲವರು ಮಾತ್ರ ಇದು ಮೂಢನಂಬಿಕೆ ಯಾರೂ ಮೋಸವಾಗಬಾರದು ಎಂದು ಹೇಳುತ್ತಾರೆ. ಅಯ್ಯಪ್ಪ ಸ್ವಾಮಿ ಜನಿಸಿದ ಮಕರ ಸಂಕ್ರಾಂತಿ ದಿನದಂದು ಅಯ್ಯಪ್ಪ ಸ್ವಾಮಿಯು ಜ್ಯೋತಿಯ ರೂಪದಲ್ಲಿ ದರ್ಶನ ನೀಡುತ್ತಾನೆ ಎಂದು ಭಕ್ತರು ನಂಬುತ್ತಾರೆ. ಆದರೆ ವೈಜ್ಞಾನಿಕವಾಗಿ ಕೆಲವರು ಹೇಳುವುದು ಏನೆಂದರೆ ದೇವಾಲಯದ ಪೂರ್ವದಿಕ್ಕಿನಲ್ಲಿರುವ ಒಂದು ಬೆಟ್ಟದ ಮೇಲೆ ಗಿರಿಜನರು ಹಬ್ಬವನ್ನು ಮಾಡಿಕೊಳ್ಳುತ್ತಾರೆ. ಅಯ್ಯಪ್ಪ ಸ್ವಾಮಿ ಮಹಿಷಿಯನ್ನ ಕೊಂದು ಹಾಕಿದಕ್ಕಾಗಿ, ಗಿರಿಜನರನ್ನು ಕಾಪಾಡಿದಕ್ಕಾಗಿ ಆ ಬೆಟ್ಟದ ಮೇಲೆ ದೊಡ್ಡದಾದ ಜ್ಯೋತಿಯನ್ನು ಬೆಳಗಿ ಆ ರಾತ್ರಿಯನ್ನು ಕಳೆಯುತ್ತಾರೆ ಅಷ್ಟೇ ಇದನ್ನ ಮಕರ ಜ್ಯೋತಿ ಎಂದು ಹೇಳಿ ಜನರ ಭಕ್ತಿಯನ್ನ ದುರ್ಬಳಕೆ ಮಾಡಿಕೊಂಡು ಈ ರೀತಿ ಮೂಢರನ್ನಾಗಿಸುತ್ತಿದ್ದಾರೆ ಎಂದು ಇನ್ನೊಂದಷ್ಟು ಮಂದಿ ಹೇಳುತ್ತಾರೆ.