ಸೀತಾಫಲದಿಂದ ಶರೀರಕ್ಕೆ ಎಷ್ಟೊಂದು ಲಾಭವಿದೆ ನೋಡಿ, ಬಾಳಷ್ಟು ಜನ ಇಷ್ಟಪಡುವುದು ಇದಕ್ಕೆ

ಆರೋಗ್ಯವೇ ಭಾಗ್ಯ ಎಂಬ ಮಾತೊಂದಿದೆ.ಆದರೆ ಇಂದಿನ ಆಧುನಿಕ ಜೀವನ ಶೈಲಿ,ಆಹಾರ ಕ್ರಮದಿಂದಾಗಿ ಉತ್ತಮ ಆರೋಗ್ಯವನ್ನು ಹೊಂದುವುದು ಕನಸೇ ಸರಿ ಎನ್ನಬಹುದು.ಹಿರಿಯರು ಹಿಂದೆ ತಮ್ಮ ಆಹಾರ ಕ್ರಮದಲ್ಲಿ ಹಣ್ಣು-ಹಂಪಲುಗಳನ್ನು ಹೆಚ್ಚೆಚ್ಚು ತಿನ್ನುತ್ತಿದ್ದರು.ಅವು ನೈಸರ್ಗಿಕವಾಗಿಯೂ ಕೂಡ ಇರುತ್ತಿದ್ದವು.ಅವುಗಳ ಪೌಷ್ಠಿಕಾಂಶಗಳಿಂದಾಗಿ ಆರೋಗ್ಯ ಕೂಡ ಉತ್ತಮವಾಗಿರುವುದರ ಜೊತೆಗೆ ಅವರ ಆಯುಷ್ಯ ಕೂಡ ಹೆಚ್ಚಾಗಿರುತ್ತಿತ್ತು.ಆದರೆ ಪ್ರಸ್ತುತ ದಿನಮಾನಗಳಲ್ಲಿ ಇದನ್ನ ಊಹಿಸಿಕೊಳ್ಳಲು ಸಹ ಸಾಧ್ಯವಾಗುವುದಿಲ್ಲ.ಇಂದಿಗೂ ನಮ್ಮ ಆರೋಗ್ಯ ಅಷ್ಟೋ ಇಷ್ಟೋ ಸುಧಾರಿಸಬೇಕು ಅನ್ನುವುದಾದರೆ ನಾವು ಜಂಕ್ ಫುಡ್ ಗಳನ್ನ ತ್ಯಜಿಸಿ ಸಿಗುವ ತರಕಾರಿ,ಹಣ್ಣು ಹಂಪಲುಗಳನ್ನ ಸೇವಿಸಲೇಬೇಕು.ಹಣ್ಣುಗಳಲ್ಲಿ ಹಲವಾರು ಪೌಷ್ಠಿಕಾಂಶ,ಪ್ರೋಟೀನ್ ಅಂಶಗಳಿರುತ್ತವೆ. ಅದರಂತೆ ಪ್ರಮುಖವಾಗಿ ಈ ಸೀತಾಫಲ ಹಣ್ಣಿನ ಪ್ರಯೋಜನ ಬಗ್ಗೆ ತಿಳಿಯುವುದಾದರೆ.

ಅಮೇರಿಕಾ ಮೂಲದ ಈ ಸೀತಾಫಲ ಹಣ್ಣನ್ನು ದೇಶದ ಗುಜರಾತ್,ಮಧ್ಯ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳ ಭಾಗದಲ್ಲಿ ಹೆಚ್ಚೆಚ್ಚು ಬೆಳೆಯುತ್ತಾರೆ.ಈ ಸೀತಾಫಲ ಹಣ್ಣನ್ನು ಕಸ್ಟರ್ಡ್ ಆಪಲ್, ಚೆರಿಮೋಯಾ,ಷರೀಫಾ,ಎಂಬ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.ಈ ಹಣ್ಣಿನಲ್ಲಿ ಹೆಚ್ಚು ನಾರಿನಾಂಶ,ವಿಟಮಿನ್ ಮತ್ತು ಮಿನರಲ್ ಅಂಶಗಳು ಹೆಚ್ಚಾಗಿರುತ್ತವೆ.ಇವುಗಳ ದೇಹದ ವಿವಿಧ ಅಂಗಗಳಿಗೆ ಉತ್ತಮವಾದ ಪ್ರಭಾವ ಬೀರುತ್ತವೆ.ಅವುಗಳಲ್ಲಿ ಪ್ರಮುಖವಾಗಿ ನೇತ್ರ ಮತ್ತು ಹೃದಯಕ್ಕೆ ಹೆಚ್ಚು ಉಪಯೋಗಕಾರಿಯಾಗಿರುತ್ತದೆ.ಇದರಲ್ಲಿ ವಿಟಮಿನ್ ಎ,ಸಿ ಮತ್ತು ಕ್ಯಾಲ್ಸಿಯಂ ಅಂಶ ಅಧಿಕವಾಗಿರುತ್ತದೆ.ಇವುಗಳು ದೇಹದ ಮೂಳೆಗಳು ಸಧೃಡವಾಗಲು ಸಹಾಯ ಮಾಡುತ್ತವೆ. ಜೊತೆಗೆ ಜಿಂಕ್ ಮತ್ತು ಮೆಗ್ನಿಷಿಯಂ ಅಂಶಗಳು ಹೆಚ್ಚಾಗಿರುತ್ತದೆ.ನಾರಿನಾಂಶವು ಮಲಬದ್ದತೆಯನ್ನ ಹೋಗಲಾಡಿಸುತ್ತದೆ.ಆಂಟಿ ಆಕ್ಸಿಡೆಂಟ್ ಗಳು ಚರ್ಮ ಕೋಮಲವಾಗಿ ಇರಲು ಸಹಾಯಕವಾಗಿರುತ್ತವೆ.

Leave a Reply

%d bloggers like this: