ಶಾಲೆಯಲ್ಲಿ ಎರಡೆರಡು ಬಾರಿ ಫೇಲಾದ ಹುಡುಗ 25 ಸಾವಿರ ಕೋಟಿಯ ಜೋಮೆಟೋ ಕಂಪನಿ ಕಟ್ಟಿದ ಕಥೆ, ಎಲ್ಲರಲ್ಲಿ ಸ್ಫೂರ್ತಿ ತರುವ ಕಥೆ

ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಎಲ್ಲವೂ ವೇಗವಾಗಿ ನಡೆಯುತ್ತದೆ.ಅದು ನಾವು ತಿನ್ನುವ ಆಹಾರದಿಂದ ಹಿಡಿದು ಪ್ರಯಾಣ ಮಾಡುವ ಸಾರಿಗೆ ವ್ಯವಸ್ಥೆ ವರೆಗೆ.ಅದರಂತೆ ಇಂದು ಆಹಾರದ ಕ್ಷೇತ್ರದಲ್ಲಿ ಭಾರಿ ಬದಲಾವಣೆ ಕಂಡಿದೆ.ಕೂತಲ್ಲೇ ನಾವು ಇಷ್ಟಪಟ್ಟ ಊಟವನ್ನ ಮನೆಗೆ ತರಿಸಿಕೊಂಡು ತಿನ್ನಬಹುದಾಗಿದೆ.ಅದಕ್ಕೆ ಪೂರೈಕೆ ಸೇವೆ ನೀಡುತ್ತಿರುವುದು ಫುಡ್ ಡೆಲಿವರಿ ಆಪ್ ಗಳಾದ ಜೋಮಾಟೋ,ಸ್ವಿಗ್ಗಿ ಅಂತಹ ಸಂಸ್ಥೆಗಳು.ಅದರಲ್ಲಿ ಜೋಮೋಟೋ ಡೆಲಿವರಿ ಕಂಪನಿ ಕೂಡ ಒಂದಾಗಿದ್ದು,ಈ ಸಂಸ್ಥೆಯನ್ನ ಕಟ್ಟಿ ಬೆಳೆಸಿದ ವ್ಯಕ್ತಿಯ ಬಗ್ಗೆ ಆತನ ವಿಧ್ಯಾಭ್ಯಾಸದ ಬಗ್ಗೆ ತಿಳಿದರೆ ನಿಜಕ್ಕೂ ಪ್ರೇರಣಾದಾಯಕ ಆಗುತ್ತಾರೆ.ಈ ಸಂಸ್ಥೆಯನ್ನ ಆರಂಭ ಮಾಡದ್ದು ದೀಪೆಂದರ್ ಗೋಯಲ್.ಇವರಿಗೆ ಓದಿನಲ್ಲಿ ಆಸಕ್ತಿ ಅಷ್ಟಕಷ್ಟೇ.ಆದರೆ ಸೃಜನಶೀಲ ಕೌಶಲ್ಯದ ಜ್ಞಾನ ಅಗಾಧವಾಗಿತ್ತು.ಹೀಗೆ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಸಂಧರ್ಭ.

ತನ್ನ ಸಹೋದ್ಯೋಗಿಗಳೊಂದಿಗೆ ಮಧ್ಯಾಹ್ನ ಊಟ ಮಾಡಲು ಕ್ಯಾಂಟೀನ್ ಬಳಿ ಹೋದಾಗ ಸರತಿ ಸಾಲಿತ್ತು.ಇದರಿಂದ ಸಮಯ ವ್ಯರ್ಥ ಎಂದರಿತ ದೀಪೆಂದರ್ ಗೋಯಲ್ ಆಗ ಅಲ್ಲಿದ್ದ ಫುಡ್ ಮೆನುಕಾರ್ಡ್ ಅನ್ನು ಸ್ಕ್ಯಾನ್ ಮಾಡಿ ತಮ್ಮ ವೆಬ್ಸೈಟ್ ಅಲ್ಲಿ ಹಾಕಿದರು.ಇದು ಹೊಸದೊಂದು ಐಡಿಯಾಗೆ ಸ್ಪೂರ್ತಿಯಾಯಿತು.ದೀಪೆಂದರ್ ಗೋಯಲ್ ಪ್ರೌಢ ಶಿಕ್ಷಣದಲ್ಲಿ ಅನುತ್ತೀರ್ಣರಾದವರು ಆದರೆ ತದ ನಂತರ ಅವರು ಐಐಟಿಯಲ್ಲಿ ಪದವಿ ಪಡೆದು ಮ್ಯಾನೆಜ್ಮೆಂಟ್ ಕನ್ಸಲ್ಟಿಂಗ್ ಆಫೀಸರ್ ಆದರು.ಅದೇ ಸಂಧರ್ಭದಲ್ಲಿ ಅವರಿಗೆ ತಾನೊಂದು ಉದ್ಯಮ ಮಾಡಬೇಕು ಎಂಬ ಯೋಚನೆ ಹೊಳೆಯುತ್ತದೆ.ಅಂದಿನ ದಿನಗಳಲ್ಲಿ ಫುಡ್ ಪೂರೈಕೆ ಸೇವೆ ಭಾರತದಲ್ಲಿ ಪ್ರವರ್ಧಮಾನಕ್ಕೆ ಬಂದಿರಲಿಲ್ಲ.ಇಂತಹ ಸಮಯದಲ್ಲಿ ತನ್ನ ಐಐಟಿ ಗೆಳೆಯ ಪಂಕಜ್ ಚಡ್ಡಾ ಕೈ ಜೋಡಿಸುತ್ತಾರೆ.

ಹಿಂದೆ ತಾವೊಂದು ವೆಬ್ಸೈಟ್ ಮಾಡಿ ಅದಕ್ಕೆ ಮೆನು ಕಾರ್ಡ್ ಸ್ಕ್ಯಾನ್ ಯೋಜನೆಯಂತೆ ಮುಂದುವರಿದು ಸಂಖ್ಯೆಗಳನ್ನ ಆಡ್ ಮಾಡಲು ಶುರು ಮಾಡಿ ಹೊಸ ರೂಪದಲ್ಲಿ ಫುಡ್ ಬೇ ಎಂಬ ಸ್ಟಾರ್ಟ್ ಅಪ್ ಆರಂಭ ಮಾಡುತ್ತಾರೆ. ನಂಬರ್ ಅಪ್ಲೋಡ್ ಮಾಡಲು ಪ್ರಾರಂಭಿಸಿದರು.ತದ ನಂತರ ಕೆಲವು ಕಾರಾಣಾಂತರಗಳಿಂದ ಫುಡ್ ಬೇ ಅನ್ನೋ ಟೈಟಲ್ ತೆಗೆದು 2008 ರಲ್ಲಿ ಜೊಮೋಟೋ ಎಂದು ಮರು ನಾಮಕರಣ ಮಾಡುತ್ತಾರೆ.ಇಂದು ಜೊಮೋಟೋ ಸಂಸ್ಥೆ ವಾರ್ಷಿಕ ಬರೋಬ್ಬರಿ 25,920 ಕೋಟಿ ರೂ.ವರಮಾನ ಹೊಂದಿದೆ.ದೀಪೇಂದರ್ ಗೋಯಲ್ ಶಿಸ್ತುಬದ್ದವಾದ ವ್ಯಕ್ತಿಯಾಗಿದ್ದು,ತಮ್ಮ ಕಛೇರಿಯಲ್ಲಿ ಸಮಯ ಪಾಲನೆಗೆ ಪ್ರಾಶಸ್ತ್ಯ ನೀಡುತ್ತಾರೆ.ದೇಶಾದ್ಯಂತ ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿರುವ ದೀಪೆಂದರ್ ಅವರೊಬ್ಬ ಶಾಲೆಯಲ್ಲಿ ಫೇಲ್ ಆಗಿದ್ದ ಹುಡುಗ ಜೀವನದಲ್ಲಿ ಅತ್ಯುತ್ತಮ ಬದುಕು ಕಟ್ಟಿಕೊಂಡ ಇವರು ನಡೆದು ಬಂದ ದಾರಿ ಇತರರಿಗೆ ಮಾದರಿಯಾಗಿದೆ.

Leave a Reply

%d bloggers like this: