ಸತತ ಸೋಲುಗಳಿಂದ ಕಂಗೆಟ್ಟಿರುವ ಬಾಲಿವುಡ್ಗೆ ಶಾರುಖ್ ಖಾನ್ ಅವರೇ ಈಗ ಆಸರೆ

ಬಾಲಿವುಡ್ ಕಿಂಗ್ ಖಾನ್ ಬಾದ್ ಶಾ ಶಾರುಖ್ ಖಾನ್ ನಟನೆಯ ಬಹು ನಿರೀಕ್ಷಿತ ಪಠಾಣ್ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಅದೂ ಕೂಡ ಸ್ವತಃ ನಟ ಶಾರುಖ್ ಖಾನ್ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಪಠಾಣ್ ಚಿತ್ರದಲ್ಲಿನ ಜಾನ್ ಅಬ್ರಾಹಂ ಅವರ ಪಾತ್ರದ ಪೋಸ್ಟರ್ ಅನ್ನ ರಿವೀಲ್ ಮಾಡಿದ್ದಾರೆ. ಪಠಾಣ್ ಸಿನಿಮಾದಲ್ಲಿ ಶಾರುಖ್ ಖಾನ್ ಜತೆ ಜಾನ್ ಅಬ್ರಾಹಂ ಕೂಡ ನಟಿಸಿದ್ದಾರೆ. ಇದೊಂದು ಮಲ್ಟಿ ಸ್ಟಾರರ್ ಸಿನಿಮಾ. ಶಾರುಖ್ ಖಾನ್ ಅವರು ಜಾನ್ ಅಬ್ರಾಹಂ ಪಾತ್ರದ ಪೋಸ್ಟರ್ ರಿವೀಲ್ ಮಾಡಿ ಅವನು ರಫ್ ಅಂಡ್ ಟಫ್ ಎಂದು ಬರೆದುಕೊಂಡಿದ್ದಾರೆ. ಪಠಾಣ್ ಸಿನಿಮಾ ಶಾರುಖ್ ಖಾನ್ ಅವರಿಗೆ ಗೆಲ್ಲಲೇಬೇಕಾಗಿರುವ ಸಿನಿಮಾ ಆಗಿದೆ. ಯಾಕಂದ್ರೆ ಶಾರುಖ್ ಖಾನ್ ಅವರ ಸಾಲು ಸಾಲು ಸಿನಿಮಾಗಳು ಸೋಲು ಕಂಡಿವೆ. ನಿರಂತರವಾಗಿ ಬ್ಯಾಕ್ ಟು ಬ್ಯಾಕ್ ಸೋರನ್ನ ಕಂಡ ಶಾರುಖ್ ಖಾನ್ ಅವರು ತುಂಬಾ ಆಲೋಚನೆ ಮಾಡಿ ಆಕ್ಷನ್ ಸಿನಿಮಾ ಆಗಿರೋ ಪಠಾಣ್ ಚಿತ್ರವನ್ನ ಒಪ್ಪಿಕೊಂಡು ನಟಿಸಿದ್ದಾರೆ.

ಈ ಚಿತ್ರದಲ್ಲಿ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಾಸ್ ಎಲಿಮೆಂಟ್ ಹೊಂದಿರುವ ಪಠಾಣ್ ಸಿನಿಮಾವನ್ನು ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಜನವರಿ ತಿಂಗಳಿನಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಶಾರುಖ್ ಖಾನ್ ಅವರ ಈ ಪಠಾಣ್ ಸಿನಿಮಾ ಬಿಡುಗಡೆ ಆಗಲು ಇನ್ನೂ ಐದು ತಿಂಗಳು ಇರೋವಾಗಲೇ ಶಾರುಖ್ ಅಭಿಮಾನಿಗಳು ಸಖತ್ ಕ್ರೇಜ಼್ ಹುಟ್ಟಿಸಿಕೊಂಡಿದ್ದಾರೆ. ಇನ್ನೊಂದೆಡೆ ಈ ಪಠಾಣ್ ಸಿನಿಮಾ ಬಾಲಿವುಡ್ ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ಆಗಿರೋ ಯಶ್ ರಾಜ್ ಫಿಲಂಸ್ ಬ್ಯಾನರಡಿಯಲ್ಲಿ ನಿರ್ಮಾಣ ಆಗಿದೆ. ಈ ಪಠಾಣ್ ಸಿನಿಮಾ ಯಶ್ ರಾಜ್ ಸಂಸ್ಥೆಯ 50ನೇ ಸಿನಿಮಾ ಆಗಿರೋದ್ರಿಂದ ಈ ಚಿತ್ರವನ್ನ ಭರ್ಜರಿ ಆಗಿ ಗೆಲ್ಲಿಸಬೇಕು ಎಂದು ನಿರ್ಮಾಣ ಸಂಸ್ಥೆ ಕೂಡ ಎಲ್ಲಾ ರೀತಿ ಸಕಲ ತಯಾರಿ ಮಾಡುತ್ತಿದೆ. ಒಟ್ಟಾರೆಯಾಗಿ ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿರೋ ಶಾರುಖ್ ಖಾನ್ ಅವರಿಗೆ ಪಠಾಣ್ ಅನ್ನೋ ಈ ಮಾಸ್ ಸಿನಿಮಾ ಗೆಲುವಿನ ಭರವಸೆ ಮೂಡಿಸಿದೆ.

Leave a Reply

%d bloggers like this: