‘ಸರ್ಕಾರೀ ಹಿರಿಯ ಫ್ರಾರ್ಥಮಿಕ ಶಾಲೆ’ ಸಿನಿಮಾದ ಪುಟಾಣಿ ಈಗ ಹೇಗಿದ್ದಾಳೆ ನೋಡಿದ್ರೆ ಬೇರಾಗ್ತೀರಾ

2018 ರಲ್ಲಿ ತೆರೆ ಕಂಡಂತಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ನಟಿಸಿದಂತಹ ಬಾಲ ನಟಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಾಗುತ್ತಿದ್ದಾರೆ. ಹೌದು ರಿಷಭ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಂತಹ‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ಅತ್ಯುತ್ತಮ ಮಕ್ಕಳ ಚಿತ್ರ ಎಂದು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕರ್ನಾಟಕ ಮತ್ತು ಕೇರಳ ಗಡಿಭಾಗದಲ್ಲಿರುವ ಕಾಸರಗೂಡು ಅಂತಹ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಮತ್ತು ಕನ್ನಡ ಭಾಷೆಯನ್ನು ಕಡೆಗಣಿಸುತ್ತಿರುವ ಧೋರಣೆಯ ಬಗ್ಗೆ ಹೆಣೆದಿದ್ದ ಸಾಮಾಜಿಕ ಕಥೆಯ ಈ ಸಿನಿಮಾ ಕಮರ್ಷಿಯಲ್ ಹಿಟ್ ಕೂಡ ಆಗಿತ್ತು. ನಟ ಅನಂತ್ ನಾಗ್,ಪ್ರಮೋದ್ ಶೆಟ್ಟಿ ಸೇರಿದಂತೆ,ಒಂದಷ್ಟು ಪುಟಾಣೆ ಮಕ್ಕಳು ಕೂಡ ನಟಿಸಿದ್ದರು.

ಅದರಲ್ಲಿ ಪ್ರವೀಣ ಎಂಬ ಪಾತ್ರ ಭಾರಿ ಜನಪ್ರಿಯ ವಾಗಿತ್ತು.ಜೊತೆಗೆ ಪ್ರಮೋದ್ ಶೆಟ್ಟಿ ರವರ ಮಗಳ ಪಾತ್ರದಲ್ಲಿ ನಟಿಸಿದ್ದಂತಹ ಸಪ್ತ ಪವೂರ್ ವಿಶೇಷವಾಗಿ ಗಮನ ಸೆಳೆದಿದ್ದರು.ಬಾಲ ನಟಿಯಾಗಿ ಸಪ್ತಾ ಪವೂರ್ ಅವರು ಕನ್ನಡ ಮತ್ತು ತುಳು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.ಇದರ ಜೊತೆಗೆ ಸೋಶಿಯಲ್ ಮೀಡಿಯಾಗಳಲ್ಲಿಯೂ ಕೂಡ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ನಟಿ ಸಪ್ತ ಪವೂರ್ ಫೋಟೋ ಶೂಟ್ ಮಾಡಿಸಿಕೊಂಡು ತಮ್ಮ ಒಂದಷ್ಟು ಪೋಟೋಗಳನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

ಈ ಪೋಟೋಗಳು ಸಾಕಷ್ಟು ಮೆಚ್ಚುಗೆ ಗಳಿಸಿದ್ದವು.ಇನ್ನು ನಟಿ ಸಪ್ತಾ ಪವೂರ್ ಕೇವಲ ನಟನೆಯಲ್ಲಿ ಮಾತ್ರ ಅಲ್ಲದೆ ನೃತ್ಯದಲ್ಲಿಯೂ ಕೂಡ ಪರಿಣಿತಿಯಾಗಿದ್ದಾರೆ.ಸದ್ಯಕ್ಕೆ ಸಿನಿಮಾದಲ್ಲಿನ ನಟನೆ ಮತ್ತು ನೃತ್ಯಕ್ಕೆ ಬ್ರೇಕ್ ಹಾಕಿ ವ್ಯಾಸಂಗದತ್ತ ಗಮನ ಹರಿಸಿದ್ದಾರೆ. ಸ್ನೇಹಿತರೆ ನಿಮಗೂ ಇಷ್ಟ ಆದ್ರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: