ಸರಿಯಾದ ಸಮಯಕ್ಕೆ ಸಂಭಾವನೆ ಏರಿಸಿಕೊಂಡ ನಟಿ ಪವಿತ್ರಾ ಲೋಕೇಶ್ ಅವರು, ಎಷ್ಟು ಏರಿಕೆ ಆಗಿದೆ ಗೊತ್ತೇ

ಈ ಬಣ್ಣದ ಲೋಕ ಎಲ್ಲರೂ ಬೇಗ ಆಕರ್ಷಿತರಾಗುವ ಜಗತ್ತು. ಸಿನಿಮಾ ನೋಡಿ ಅನೇಕ ಜನರು ಅನೇಕ ರೀತಿ ಬದಲಾವಣೆ ಆಗುತ್ತಾರೆ. ಅಷ್ಟರ ಮಟ್ಟಿಗೆ ಈ ಸಿನಿಮಾಗಳು ಜನರ ಮೇಲೆ ಪ್ರಭಾವ ಬೀರುತ್ತವೆ. ಹಾಗಾಗಿ ಸಿನಿಮಾದಲ್ಲಿ ನಟಿಸುವ ಕಲಾವಿದರು ತಮ್ಮ ಸ್ದಾನ ಮಾನ ಅರಿತು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಸಿನಿಮಾ ನಟನೆ ವೃತ್ತಿಯಾಗಿದ್ದರು ಕೂಡ ತಮ್ಮ ವೈಯಕ್ತಿಕ ಜೀವನದ ಮೇಲೂ ಕೂಡ ಜನರು ಕಣ್ಣಿಟ್ಟಿರುತ್ತಾರೆ. ಸಿನಿಮಾ ಸೆಲೆಬ್ರಿಟಿಗಳ ಎಲ್ಲಾ ಆಗು ಹೋಗುಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಆದರೆ ಕೆಲವು ಸಿನಿಮಾ ಸೆಲೆಬ್ರಿಟಿಗಳು ತಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಆದರೆ ತಮ್ಮ ವೈಯಕ್ತಿಕ ಜೀವನದಲ್ಲಿ ಎಡವಿ ಬಿಡುತ್ತಾರೆ. ಅಂತೆಯೇ ಸಿನಿಮಾ ವೃತ್ತಿಯಲ್ಲಿ ಯಶಸ್ವಿಯಾಗಿದ್ದರು ಕೂಡ ತಮ್ಮ ದಾಂಪತ್ಯ ಜೀವನದಲ್ಲಿ ಎಡವಟ್ಟು ಮಾಡಿಕೊಂಡ ಸಿನಿಮಾ ಸೆಲೆಬ್ರಿಟಿಗಳ ಪೈಕಿ ಪವಿತ್ರಾ ಲೋಕೇಶ್ ಕೂಡ ಇದೀಗ ಸೇರ್ಪಡೆಯಾಗಿದ್ದಾರೆ‌.

ಇತ್ತೀಚೆಗೆ ಭಾರಿ ಸುದ್ಥಿಯಾಗಿದ್ದು ಬಹುಭಾಷಾ ನಟಿ ಪವಿತ್ರಾ ಲೋಕೇಶ್. ನಟಿ ಪವಿತ್ರಾ ಲೋಕೇಶ್ ಅವರು ಕನ್ನಡದ ಖ್ಯಾತ ಹಿರಿಯ ನಟ ಮೈಸೂರ್ ಲೋಕೇಶ್ ಪುತ್ರಿ. ತನ್ನ ತಂದೆಯಂತೆ ತಾನು ಕೂಡ ಬಣ್ಣದ ಲೋಕದಲ್ಲಿ ಹೆಸರು ಮಾಡಿರುವ ಪವಿತ್ರಾ ಲೋಕೇಶ್ ಕನ್ನಡದ ನಟ ಸುಚೇಂದ್ರ ಪ್ರಸಾದ್ ಅವರೊಟ್ಟಿಗೆ ಲಿವಿಂಗ್ ಟುಗೇದರ್ ಇದ್ದರು. ತದ ನಂತರ ವೈಯಕ್ತಿಕ ಕಾರಣಗಳಿಂದ ತಮ್ಮಿಬ್ಬರ ಸಂಬಂಧವನ್ನ ಮುರಿದುಕೊಂಡು ತೆಲುಗು ನಟ ನರೇಶ್ ಅವರೊಟ್ಟಿಗೆ ಇದ್ದಾರೆ. ಇದರ ನಡುವೆ ನರೇಶ್ ಅವರ ಪತ್ನಿ ಬೆಂಗಳೂರಿಗೆ ಬಂದು ನಟಿ ಪವಿತ್ರಾ ಲೋಕೇಶ್ ತಮ್ಮ ಸಂಸಾರವನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರು ನೀಡಿ ರಾದ್ದಾಂತ ಮಾಡುತ್ತಾರೆ. ಇದು ಮಾಧ್ಯಮ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಸುದ್ದಿಯಾಗುತ್ತದೆ. ನಟಿ ಪವಿತ್ರಾ ಲೋಕೇಶ್ ಅವರು ಕನ್ನಡ ಮಾತ್ರ ಅಲ್ಲದೆ ತೆಲುಗಿನಲ್ಲಿಯೂ ಕೂಡ ಅಪಾರ ಜನಪ್ರಿಯತೆ ಪಡೆದಿದ್ದಾರೆ.

ಇದೇ ಅಲ್ಲು ನಟ ನರೇಶ್ ಅವರೊಟ್ಟಿಗೆ ಸಿನಿಮಾಗಳಲ್ಲಿ ತಂಗಿ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಸಿನಿಮಾಗಳ ಮುಖೇನ ಪರಿಚಯವಾಗಿ ನಂತರ ಇದು ಸ್ನೇಹವಾಗಿ ಬೆಳೆದ ಅವರೊಟ್ಟಿಗೆ ಭಾಂಧವ್ಯ ಮೂಡಿದೆ. ಇತ್ತ ಸುಚೇಂದ್ರ ಪ್ರಸಾದ್ ಅವರನ್ನ ಮದುವೆ ಆಗಿಲ್ಲ. ಅವರ ಜೊತೆ ನಾನು ಹಾಗೇ ಪರಸ್ಪರ ಒಪ್ಪಿಗೆ ಮೇರೆಗೆ ಇದ್ದೇವು ಅಂತೆಲ್ಲಾ ಹೇಳಿ ನಟಿ ಪವಿತ್ರಾ ಲೋಕೇಶ್ ವಿವಾದ ಸೃಷ್ಟಿಸಿಕೊಂಡಿದ್ದರು. ಇದಾದ ಬಳಿಕ ನಟಿ ಪವಿತ್ರಾ ಲೋಕೇಶ್ ಅವರಿಗೆ ಇನ್ನು ಅವಕಾಶ ಸಿಗುವುದಿಲ್ಲ. ಅವರ ಬಣ್ಣದ ವೃತ್ತಿ ಜೀವನ ಮುಗಿದೇ ಹೋಯ್ತು ಅಂತ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಹೊಸ ಸುದ್ದಿ ಏನಪ್ಪಾ ಅಂದರೆ ನಟಿ ಪವಿತ್ರಾ ಲೋಕೇಶ್ ಅವರು ಮೊದಲಿಗಿಂತ ಹೆಚ್ಚು ಬಿಝಿಯಾಗಿದ್ದು, ಒಂದು ದಿನದ ಸಂಭಾವನೆಯಲ್ಲಿ ಬರೋಬ್ಬರಿ ನಲವತ್ತು ಸಾವಿರ ರೂಗಳನ್ನು ಹೆಚ್ಚು ಮಾಡಿಕೊಂಡಿದ್ದಾರೆ. ಹೌದು ನಟಿ ಪವಿತ್ರಾ ಲೋಕೇಶ್ ಅವರು ಮೊದಲು ಒಂದು ದಿನಕ್ಕೆ ಅರವತ್ತು ಸಾವಿರ ಸಂಭಾವನೆ ಪಡೆಯುತ್ತಿದ್ದರಂತೆ. ವಿವಾದ ಆದ ನಂತರ ಈಗ ಒಂದು ದಿನಕ್ಕೆ ಬರೋಬ್ಬರಿ ಒಂದು ಲಕ್ಷ ರೂಗಳನ್ನ ಸಂಭಾವನೆಯಾಗಿ ಪಡೆಯುತ್ತಿದ್ದಾರಂತೆ.

Leave a Reply

%d bloggers like this: