ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ಅಮೀರ್ ಖಾನ್ ಮಗಳು, ಹುಡುಗ ಯಾರು

ಸಾಮಾನ್ಯವಾಗಿ ಸಿನಿಮಾ ಸೆಲೆಬ್ರಿಟಿಗಳು ಸಿನಿಮಾ ಮತ್ತು ಅವರ ವೈಯಕ್ತಿಕ ಜೀವನ ಶೈಲಿ ಇನ್ನಿತರ ವಿಚಾರಗಳ ಬಗ್ಗೆ ಸುದ್ದಿ ಆಗ್ತಾನೆ ಇರ್ತಾರೆ. ಅವುಗಳಲ್ಲಿ ಬಾಲಿವುಡ್ ನಟ ನಟಿಯರ ಗಾಸಿಪ್ ಗಳೇ ಹೆಚ್ಚಾಗಿರ್ತವೆ. ಲವ್ ಬ್ರೇಕಪ್ ರಿಲೇಶನ್ಶಿಪ್ ಸೇರಿದಂತೆ ಒಂದಷ್ಟು ಕಾಂಟ್ರವರ್ಸಿ ಮಾಡ್ಕೊಳೋದು ಕಾಮನ್ ಆಗ್ಬಿಟ್ಟಿದೆ. ಆದ್ರೇ ಇದೀಗ ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ನಟ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಸುದ್ದಿ ಆಗಿದ್ದಾರೆ. ಅದೂ ಕೂಡ ಲವ್ ವಿಚಾರವಾಗಿ ಅನ್ನೋದು ಹಲವರಿಗೆ ಅಚ್ಚರಿ ಆಗಿದೆ. ಹೌದು ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಜಿಮ್ ಟ್ರೈನರ್ ನೂಪರ್ ಶಿಖರೆ ಅವರನ್ನ ಲವ್ ಮಾಡ್ತಿದ್ದಾರೆ. ನೂಪರ್ ಶಿಖರೆ ಸೆಲೆಬ್ರಿಟಿಗಳಿಗೆ ಫಿಟ್ನೆಸ್ ತರಬೇತಿ ನೀಡುತ್ತಿದ್ದಾರೆ. ಅದರ ನಡುವೆ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಎರಡು ವರ್ಷಗಳಿಂದ ನೂಪರ್ ಶಿಖರೆ ಅವರನ್ನ ಪ್ರೀತಿಸುತ್ತಿದ್ದಾರೆ.

ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಖತ್ ಆಕ್ಟೀವ್ ಆಗಿರೋ ಇರಾ ಖಾನ್ ಇತ್ತೀಚೆಗೆ ಒಂದು ವೀಡಿಯೋ ಪೋಸ್ಟ್ ಮಾಡಿದ್ದಾರೆ. ಹೌದು ಇರಾ ಖಾನ್ ಮತ್ತು ನೂಪರ್ ಶಿಖರೆ ಇಬ್ಬರು ಕೆಲವು ದಿನಗಳ ಹಿಂದೆ ಸೈಕ್ಲಿಂಗ್ ಫಂಕ್ಷನ್ ನಲ್ಲಿ ಭಾಗವಹಿಸಿರುತ್ತಾರೆ. ಈ ಸಂಧರ್ಭದಲ್ಲಿ ಇರಾ ಖಾನ್ ಅವರ ಎದುರಿಗೆ ನೂಪರ್ ಶಿಖರೆ ಮಂಡಿಯೂರಿ ಪ್ರೇಮ ನಿವೇದನೆ ಮಾಡಿ ನನ್ನನ್ನ ಮದುವೆ ಆಗ್ತುತ್ತೀಯಾ ಎಂದು ಪ್ರಪೋಸ್ ಮಾಡ್ತಾರೆ. ಇದಕ್ಕೆ ಇರಾಖಾನ್ ಎಸ್ ಎಂದು ಒಪ್ಪಿಕೊಂಡು ನೂಪರ್ ಶಿಖರೆ ಅವರನ್ನ ಅಪ್ಪಿಕೊಂಡು ಮುತ್ತಿಟ್ಟಿದ್ದಾರೆ. ಈ ದೃಶ್ಯ ವೀಡಿಯೋವನ್ನ ಇರಾ ಖಾನ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಮೀರ್ ಖಾನ್ ಪುತ್ರಿ ಈ ರೀತಿಯಾಗಿ ತಮ್ಮ ಲವ್ ವಿಚಾರವನ್ನ ಸಾರ್ವಜನಿಕವಾಗಿ ಶೇರ್ ಮಾಡಿಕೊಂಡಿರೋದನ್ನ ಕಂಡು ನೆಟ್ಟಗರು ಅಚ್ಚರಿ ಜೊತೆಗೆ ಇರಾ ಖಾನ್ ಅವರ ಬೋಲ್ಡ್ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Leave a Reply

%d bloggers like this: