ಸಂತೋಷದಿಂದ ಎಂಗೇಜ್ಮೆಂಟ್ ಫೋಟೋವನ್ನು ಹಂಚಿಕೊಂಡ ನಟಿ, ಸಂಸದೆ ಸುಮಲತಾ ಅಂಬರೀಶ್..! ಹುಡುಗಿ ಯಾರು ಗೊತ್ತಾ

ಅಭಿಷೇಕ್ ಇನ್ನೂ ಕೂಡ ಚಿಕ್ಕ ಹುಡುಗ ಎಂದು ಎಂಗೇಜ್ಮೆಂಟ್ ಫೋಟೋವನ್ನು ಹಂಚಿಕೊಂಡ ನಟಿ, ಸಂಸದೆ ಸುಮಲತಾ ಅಂಬರೀಶ್..! ಕಲಿಯುಗ ಕರ್ಣ ರೆಬಲ್ ಸ್ಟಾರ್ ಅಂಬರೀಶ್ ಅವರು ವಿಧಿವಶರಾದ ಬಳಿಕ ಅವರ ಧರ್ಮಪತ್ನಿ ನಟಿ ಸುಮಲತಾ ಅವರು ಅಂಬರೀಷ್ ಅವರಿಗೆ ಪರ್ಯಾಯವಾಗಿ ರಾಜಕಾರಣಕ್ಕೆ ಪಾದಾರ್ಪಣೆ ಮಾಡುತ್ತಾರೆ. ಅಂತೆಯೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಲಕ್ಷಾಂತರ ಮತಗಳ ಅಂತರದಿಂದ ವಿಜಯ ಶಾಲಿಯಾಗಿ ಮಂಡ್ಯ ಜಿಲ್ಲಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದಾರೆ. ರಾಜಕೀಯದ ಜೊತೆಗೆ ಸಿನಿಮಾಗಳಲ್ಲಿಯೂ ಕೂಡ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಎರಡೂ ಕ್ಷೇತ್ರಗಳನ್ನು ಕೂಡ ಸಮರ್ಪಕವಾಗಿ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ ಸುಮಲತಾ ಅಂಬರೀಶ್. ಸುಮಲತಾ ಅಂಬರೀಷ್ ಅವರು ಲೋಕಸಭೆಯಲ್ಲಿ ರಾಜ್ಯದಲ್ಲಿರುವ ಅನೇಕ ಸಮಸ್ಯೆಗಳ ಬಗ್ಗೆ ದ್ವನಿ ಎತ್ತುವ ಮೂಲಕ ರಾಜ್ಯದ ಜನರಿಂದ ಪ್ರಶಂಸೆಗಳಿಸಿದ್ದಾರೆ‌.

ಅದರಲ್ಲೂ ಮಂಡ್ಯ ಭಾಗದ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆಯನ್ನು ತೆರೆಸುವ ಬಗ್ಗೆ, ಅಲ್ಲಿ ರೈತರಿಗೆ ಇರುವಂತಹ ಅನೇಕ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಗಮನ ಸೆಳೆದಿದ್ದಾರೆ. ಸಂಸದೆಯಾಗಿ ತಮ್ಮ ಕೆಲಸ ಕಾರ್ಯವೈಖರಿ ಮತ್ತು ಅವರ ವ್ಯಕ್ತಿತ್ವದ ಮೂಲಕ ಮಂಡ್ಯ ಕ್ಷೇತ್ರದಲ್ಲಿ ತಮ್ಮ ಮೇಲಿಟ್ಟಿದ್ದಂತಹ ಪ್ರೀತಿ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಸಫವರಾಗಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಕಾಮಗಾರಿ ಪೂಜೆ ಗಳಲ್ಲಿಯೂ ಕೂಡ ನಟಿ ಸುಮಲತಾ ಅಂಬರೀಷ್ ಅವರು ಪಾಲ್ಗೊಂಡು ಅಲ್ಲಿನ ಜನರ ಕುಂದುಕೊರತೆಗಳಿಗೆ ಸ್ಪಂದಿಸುತ್ತಿದ್ದಾರೆ. ಇದರ ನಡುವೆ ಸುಮಲತಾ ಅವರು ತಮ್ಮ ಸೋದರ ಅಳಿಯನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದರ ಒಂದಷ್ಟು ಸಂಭ್ರಮ ಕ್ಷಣದ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡ ಸೋದರಳಿಯನ ಪೋಟೋ ಹಂಚಿಕೊಂಡು ನಾನು ಎತ್ತಿ ಆಡಿಸಿದ ಮಗು ಈಗ ಮದುವೆ ಆಗುತ್ತಿರುವುದನ್ನ ನೋಡಿದರೆ ಸಂತೋಷವಾಗುತ್ತದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್ ನೋಡಿದ ನೆಟ್ಟಿಗರು ನಿಮ್ಮ ಮಗ ಅಭಿಷೇಕ್ ಅಂಬರೀಷ್ ಅವರಿಗೂ ಕೂಡ ಮದುವೆ ಮಾಡಿ ಎಂದು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುಮಲತಾ ಅವರು ಅವನಿಗೆ ಇನ್ನು 28 ವರ್ಷ. ಈಗ ಅವನಿಗೆ ಇನ್ನು ಚಿಕ್ಕ ವಯಸ್ಸು ಎಂದು ತಿಳಿಸಿದ್ದಾರೆ. ಇತ್ತ ಅಭಿಷೇಕ್ ಅಂಬರೀಶ್ ಕೂಡ ರಾಜಕೀಯಕ್ಕೆ ಬರುವಂತಹ ಮುನ್ಸೂಚನೆಯನ್ನು ನೀಡಿದ್ದಾರೆ. ಸದ್ಯಕ್ಕೆ ಅಭಿಷೇಕ್ ಅಂಬರೀಶ್ ಸೂರಿಯವರ ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ನಡೆಸುತ್ತಿದ್ದು ಇದರ ಜೊತೆಗೆ ಇನ್ನೊಂದೆರಡು ಚಿತ್ರಗಳಲ್ಲಿ ಸಹಿ ಮಾಡಿದ್ದಾರೆ ಎಂದು ಕೇಳಿ ಬರುತ್ತಿವೆ. ಇದೆಲ್ಲದರ ನಡುವೆ ಅಂಬರೀಶ್ ಅವರ ಅಭಿಮಾನಿ ಬಳಗ ನಡೆಸುವಂತಹ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಭಿಷೇಕ್ ಅವರು ತಮ್ಮ ತಂದೆಯಂತೆ ಸಿನಿಮಾ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಾಗಬಹುದು ಎಂದೇಳಲಾಗುತ್ತಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಕೂಡ ಹೇಳಲಾಗುತ್ತದೆ.

Leave a Reply

%d bloggers like this: