ಸಂಕ್ರಾಂತಿಗೆ ಯಾವ ದೊಡ್ಡ ಕನ್ನಡ ಚಿತ್ರವೂ ಬಿಡುಗಡೆ ಇಲ್ಲ, ಎಂದಿನಂತೆ ಹಬ್ಬದ ಸಮಯದಲ್ಲಿ ಪರಭಾಷಾ ಚಿತ್ರಗಳಿಗೆ ಥಿಯೇಟರ್ ಬಿಟ್ಟು ಕೊಡುತ್ತಿರುವ ಕನ್ನಡ ಚಿತ್ರರಂಗ

ಮುಂದಿನ ವರ್ಷ 2023ಕ್ಕೆ ಶೈನ್ ಆಗ್ತಿರೋ ಕನ್ನಡ ಚಿತ್ರರಂಗಕ್ಕೆ ಸೆಡ್ಡು ಹೊಡೆಯಲು ಸಜ್ಜಾಗುತ್ತಿದೆ ಟಾಲಿವುಡ್. ಹೌದು ಕಳೆದ ಎರಡು ವರ್ಷದಿಂದ ಭಾರತೀಯ ಚಿತ್ರರಂಗದಲ್ಲಿ ಯಶಸ್ಸಿನಲ್ಲಿ ಅತ್ಯುನ್ನತ ಶಿಖರ ಏರಿರೋ ಸಿನಿಮಾರಂಗ ಅಂದರೆ ಅದು ಒನ್ ಅಂಡ್ ಓನ್ಲಿ ಸ್ಯಾಂಡಲ್ ವುಡ್ ಕನ್ನಡ ಚಿತ್ರರಂಗ. ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಿತ್ರದಿಂದ ಶುರುವಾದ ಪ್ಯಾನ್ ಇಂಡಿಯಾ ಎರಾ ಈಗ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದವರೆಗೆ ಬಂದು ನಿಂತಿದೆ. ಕನ್ನಡದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ರಿಲೀಸ್ ಆದ ಕೆಜಿಎಫ್, ಕೆಜಿಎಫ್2, ಜೇಮ್ಸ್, 777 ಚಾರ್ಲಿ, ವಿಕ್ರಾಂತ್ ರೋಣ ಆದ ನಂತರ ಈಗ ಕಾಂತಾರ ಸಿನಿಮಾ ಕೂಡ ವರ್ಲ್ಡ್ ವೈಡ್ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಸಖತ್ ಶೈನ್ ಆಗಿದ್ದು ಅಂದರೆ ಅದು ಅತೀ ಹೆಚ್ಚು ಕನ್ನಡ ಸಿನಿಮಾಗಳೇ.

ಪರಭಾಷೆಯಲ್ಲಿ ಬಂದ ಅದೆಷ್ಟೋ ಸಿನಿಮಾಗಳು ಕನ್ನಡ ಸಿನಿಮಾದ ಎದುರು ಮಂಡಿಯೂರಿದ್ದಾವೆ. ಹಾಗಾಗಿ ಇದೀಗ ಕನ್ನಡ ಚಿತ್ರರಂಗಕ್ಕೆ ಸೆಡ್ಡು ಹೊಡೆಯೋದಕ್ಕೆ ಅಂತಾನೇ ರೆಡಿಯಾಗಿದೆ. ಹೌದು ಮುಂದಿನ ವರ್ಷ ತೆಲುಗಿನಲ್ಲಿ ಸ್ಟಾರ್ ನಟರ ಸಿನಿಮಾಗಳು ಒಂದರ ಹಿಂದೆ ಒಂದು ಸಾಲಾಗಿ ರಿಲೀಸ್ ಆಗಲು ಸಿದ್ದವಾಗಿ ನಿಂತಿವೆ. ಯಾವ್ಯಾವ ಸಿನಿಮಾಗಳು ಅನ್ನೋದನ್ನ ತಿಳಿಯೋದಾದ್ರೆ ಬಾಲಯ್ಯ ಅವರ ವೀರ ಸಿಂಹ ರೆಡ್ಡಿ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಈ ಚಿತ್ರ ಮುಂದಿನ ವರ್ಷ ಜನವರಿ ಸಂಕ್ರಾಂತಿ ಹಬ್ಬಕ್ಕೆ ಬರಲು ಸಜ್ಜಾಗಿದೆ. ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಕೂಡ ಖಳ ನಟರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಮೆಗಾಸ್ಟಾರ್ ಚಿರಂಜೀವಿ ಅವರ 154ನೇ ಚಿತ್ರ ವಾಲ್ಟರ್ ವೀರಯ್ಯ ಚಿತ್ರ ಸಹ ಭರದಿಂದ ಚಿತ್ರೀಕರಣ ನಡೆಯುತ್ತಿದ್ದು, ಈ ವರ್ಷದ ಅಂತ್ಯದಲ್ಲಿ ಈ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿ ಮುಂದಿನ ವರ್ಷ ಸಂಕ್ರಾಂತಿ ಹಬ್ಬ ಇರೋ ತಿಂಗಳಿನಲ್ಲಿಯೇ ಬಿಡುಗಡೆ ಆಗುವ ಸಾಧ್ಯತೆ ಇದೆ.

ಅದೇ ರೀತಿಯಾಗಿ ಪ್ರಭಾಸ್ ಅವರ ಬಹು ನಿರೀಕ್ಷಿತ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಆದಿಪುರುಷ್ ಸಿನಿಮಾ ಸಹ ಮುಂದಿನ ವರ್ಷದ ಆರಂಭದಲ್ಲೇ ಬಿಡುಗಡೆ ಆಗುವ ಸಾಧ್ಯತೆ ಇರುತ್ತದೆ. ಇನ್ನು ಈಗಾಗಲೇ ಆದಿಪುರುಷ್ ಸಿನಿಮಾದ ಪೋಸ್ಟರ್, ಟ್ರೇಲರ್ ರಿಲೀಸ್ ಆಗಿದ್ದು, ಟ್ರೇಲರ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರು ಕೂಡಾ ಸಿನಿಮಾದ ಬಗ್ಗೆ ಪ್ರಭಾಸ್ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು ಮುಂದಿನ ವರ್ಷ ಕನ್ನಡ ಸಿನಿಮಾರಂಗವನ್ನ ಸೈಡ್ ಲೈನ್ ಮಾಡಲು ತಮಿಳಿನ ಸುಪ್ರಸಿದ್ದ ನಟ ದಳಪತಿ ವಿಜಯ್ ಅವರ ವಾರಸುಡು ಚಿತ್ರ ಕೂಡ ಮುಂದಿನ ವರ್ಷ ಬಿಡುಗಡೆಗೆ ಸಿದ್ಥವಾಗಿದೆ. ಒಟ್ಟಾರೆಯಾಗಿ 2022 ರಲ್ಲಿ ಕನ್ನಡ ಸಿನಿಮಾ ಜಗತ್ತಿನಾದ್ಯಂತ ಸೌಂಡ್ ಮಾಡಿದ ಹಿನ್ನೆಲೆ 2023 ವರ್ಷದಲ್ಲಿ ಕನ್ನಡ ಸಿನಿಮಾಗಳಿಗಿಂತ ಹೆಚ್ಚು ಸದ್ದು ಮಾಡಲು ಪರಭಾಷಾ ನಟರ ಸಿನಿಮಾಗಳು ಭಾರಿ ಪೈಪೋಟಿ ಮಾಡಲು ಸಜ್ಜಾಗಿವೆ. ಆದರೆ ಎಂದಿನಂತೆ ಸಂಕ್ರಾಂತಿಗೆ ಕನ್ನಡದಲ್ಲಿ ಯಾವ ದೊಡ್ಡ ನಟರ ಚಿತ್ರಗಳು ಬರದೆ ಚಿತ್ರಮಂದಿರಗಳು ಪರಭಾಷಾ ಚಿತ್ರಗಳ ಪಾಲಾಗುತ್ತಿರುವುದು ಬೇಸರದ ಸಂಗತಿಯೇ ಸರಿ.

Leave a Reply

%d bloggers like this: