ಸಂಖ್ಯಾಶಾಸ್ತ್ರದ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಇವರಿಗೆ ನಿರೀಕ್ಷೆಗೂ ಮೀರಿ ಲಾಭ

ನಮ್ಮಲ್ಲಿ ದೇವರನ್ನ ನಂಬುವ ಜಾತಕ ರಾಶಿ ನಕ್ಷತ್ರಗಳ ಫಲಾಪಲಗಳನ್ನ ನಂಬುವ ಜನರು ಅನೇಕರಿದ್ದಾರೆ. ಇದನ್ನ ನಂಬದ ಜನರು ಕೂಡ ಇದ್ದಾರೆ. ನಂಬಿಕೆ ಅನ್ನೋದು ಅವರವರ ವೈಯಕ್ತಿಕ ವಿಚಾರ ಮತ್ತು ಅದು ಅವರ ವಿವೇಚನೆಗೆ ಬಿಟ್ಟದ್ದು. ಆದರೆ ಬಹುತೇಕ ನಾಸ್ತಿಕರು ತಮಗೆ ಕೆಟ್ಟ ಅನುಭವಗಳು ಆದಾಗ ಸಂಕಟ ಬಂದಾಗ ವೆಂಕಟರಮಣ ಎಂಬಂತೆ ತಮಗೆ ನಷ್ಟ ಕಷ್ಟ ಎದುರಾದಾಗ ದೇವರನ್ನ ನಂಬುತ್ತಾರೆ. ಬೇಡಿಕೆ ಇಡುತ್ತಾರೆ. ಪೂಜೆ ಪುನಸ್ಕಾರ ಮಾಡುತ್ತಾರೆ. ಅದೇ ರೀತಿ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವಿಧ ಆಯಾಮಗಳಿವೆ. ಅವುಗಳಲ್ಲಿ ಅಂಕಿ ಸಂಖ್ಯೆಗಳ ಮೂಲಕ ಭವಿಷ್ಯ ಹೇಳೋ ಸಂಖ್ಯಾ ಶಾಸ್ತ್ರ್ರ ಕೂಡ ಪ್ರಮುಖವಾದದ್ದು. ಹಾಗಾದರೆ ಈ ಸೆಪ್ಟೆಂಬರ್ ತಿಂಗಳಿನಲ್ಲಿ ಯಾವ್ಯಾವ ಸಂಖ್ಯೆಯ ಭವಿಷ್ಯ ಯಾವ ರೀತಿ ಇರಲಿದೆ ಅನ್ನೋದನ್ನ ತಿಳಿಯೋಣ.

ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ನಿಮ್ಮ ಸಂಖ್ಯೆಯನ್ನ ತಿಳಿಯಬಹುದಾಗಿದೆ. ಅದು ಹೇಗಪ್ಪಾ ಅಂತೀರಾ. ಉದಾಹರಣೆಗೆ ನೀವು ಜನಿಸಿದ್ದು 15 ಜನವರಿ 1996 ಅಂತ ಇಟ್ಕೊಳಿ. 1+5+1+1+9+9+6 = ಈ ರೀತಿ ನಿಮ್ಮ ಸಂಖ್ಯೆಯನ್ನ ವಿಭಾಗಿಸಿಕೊಳ್ಳಿ. ನಂತರ ಇದರ ಒಟ್ಟು ಮೊತ್ತ 32 = 3+2 = 5 ಐದು ನಿಮ್ಮ ಈ ಜನ್ಮ ದಿನಾಂಕದ ಸಂಖ್ಯೆ ಆಗಿರುತ್ತೆ. ಇದೇ ರೀತಿ ನಿಮ್ಮ ಜನ್ಮ ದಿನಾಂಕದ ಸಂಖ್ಯೆಗಳ ಆಧಾರದ ಮೇಲೆ ಸೆಪ್ಟೆಂಬರ್ ತಿಂಗಳು ನಿಮ್ಮ ಈ ಭವಿಷ್ಯ ಹೇಗಿರಲಿದೆ ಅನ್ನೋದನ್ನ ತಿಳಿಯಬಹುದು. ನಿಮ್ಮ ಸಂಖ್ಯೆ 1 ಬಂದರೆ ಈ ತಿಂಗಳು ನೀವು ನಿರ್ಧಾರ ಮಾಡಿ ಯೋಜನೆ ಹಾಕಿದ ಎಲ್ಲಾ ಕೆಲಸ ಕಾರ್ಯಗಳು ಕೈಗೂಡಲಿದೆ. ನೀವೇನಾದರು ಸೌಂದರ್ಯ ವರ್ಧಕ ಮತ್ತು ಬಟ್ಟೆ ವ್ಯಾಪಾರಸ್ಥರಾಗಿದ್ದರೆ ನಿಮಗೆ ಈ ತಿಂಗಳು ನಿರೀಕ್ಷೆಗೂ ಮೀರಿ ಲಾಭದಾಯಕವಾಗಿರಲಿದೆ.

ವಿಧ್ಯಾರ್ಥಿಗಳಿಗೆ ಒಂದಷ್ಟು ಶುಭ ಸುದ್ದಿ ತಿಳಿದು ಬರಲಿದೆ. ಆದರೆ ಆರೋಗ್ಯ ವಿಚಾರವಾಗಿ ಕೊಂಚ ಜಾಗೃತರಾಗಿರಬೇಕಾಗಿರುತ್ತದೆ. ನಿಮ್ಮ ಅದೃಷ್ಟ ಸಂಖ್ಯೆ ಎರಡಾಗಿದ್ದರೆ ನಿಮಗೆ ಈ ತಿಂಗಳು ಆಧ್ಯಾತ್ಮಿಕವಾಗಿ ಹೆಚ್ಚು ಗಮನ ಸೆಳೆಯಲಿದೆ. ಕುಟುಂಬಸ್ಥರೊಟ್ಟಿಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಅವಕಾಶ ಇರುತ್ತದೆ. ನಿಮ್ಮ ವ್ಯಾಪಾರಗಳಲ್ಲಿ ಉತ್ತಮ ವಹಿವಾಟು ಆಗಲಿದ್ದು, ಆರ್ಥಿಕವಾಗಿ ಸುಗುಮ ದಾರಿಯಲ್ಲಿ ಸಾಗುವಿರಿ. ಉದ್ಯೋಗಸ್ಥರಿಗೆ ಬಡ್ತಿ ಯೋಗವಿದ್ದು, ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುತ್ತದೆ. ಇನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಅದೃಷ್ಟ ಸಂಖ್ಯೆ 3 ಹೊಂದಿರೋರಿಗೆ ಈ ಬಾರಿ ಅದೃಷ್ಟವೊಂದು ಒದಗಿ ಬರಲಿದೆ. ನಿರೀಕ್ಷೆ ಮಾಡದಂತಹ ಯಶಸ್ಸು ಯುವಕರಿಗೆ ಸಿಗಲಿದೆ. ತಾಳ್ಮೆ ಸಂಯಮ ಇದ್ರೆ ಇವರಿಗೆ ಜೀವನದಲ್ಲಿ ಬಹುದೊಡ್ಡ ತಿರುವು ಸಿಗಲಿದೆ. ಒಂದು ರೀತಿಯಾಗಿ ಬಂಪರ್ ಆಫರ್ ಇವರಿಗೆ ದೊರೆಯಲಿದೆ ಎಂದು ಹೇಳಲಾಗ್ತದೆ.

ಇನ್ನು ನಿಮ್ಮ ಸಂಖ್ಯೆ ನಾಲ್ಕಾಗಿದ್ದರೆ ನಿಮ್ಮ ಕುಟುಂಬದಲ್ಲಿ ಸಕರಾತ್ಮಕ ವಾತಾವರಣ ಇರಲಿದ್ದು, ನಿಮ್ಮ ಕುಟುಂಬದಲ್ಲಿ ಆದಾಯದ ಮೂಲಗಳು ಹೆಚ್ಚಾಗಲಿದೆ. ಆರೋಗ್ಯದಲ್ಲಿ ಎಚ್ಚರ ಇರಲಿ. ನಿಮ್ಮ ಸಂಖ್ಯೆ 5 ಆಗಿದ್ದರೆ ವಿಧ್ಯಾರ್ಥಿಗಳಿಗೆ ಅಧ್ಯಾಯನದಲ್ಲಿ ಉತ್ತಮ ಅವಕಾಶ ಸಿಗಲಿದೆ. ಸರ್ಕಾರಿ ನೌಕರಿ ಪಡೆಯಲು ಶ್ರಮ ಪಡುತ್ತಿರೋ ಅಭ್ಯರ್ಥಿಗಳಿಗೆ ಒಂದೊಳ್ಳೆ ಫಲಿತಾಂಶ ಕಾಣಬಹುದಾಗಿದೆ. ಇನ್ನು ನಿಮ್ಮ ಸಂಖ್ಯೆ 6 ಆಗಿದ್ದರೆ ನಿಮಗೆ ಈ ತಿಂಗಳು ಆರಾಮಾದಾಯಕವಾಗಿರಲಿದೆ. ಆದರೆ ಸ್ನೇಹಿತರ ವಿಚಾರದಲ್ಲಿ ಆರ್ಥಿಕವಾಗಿ ತಲೆ ಹಾಕದಿರಿ. ನಿಮ್ಮಲ್ಲಿ ಈ ತಿಂಗಳು ಸಕರಾತ್ಮಕ ಚಿಂತನೆಗಳು ಆರಂಭವಾಗಲಿದೆ. ಇನ್ನು ಮುಂದಿನ ಸಂಖ್ಯೆಗಳ ಬಗ್ಗೆ ಮುಂದಿನ ಲೇಖನದಲ್ಲಿ ತಿಳಿಸಲಾಗುತ್ತದೆ. ಆ ಲೇಖನಕ್ಕಾಗಿ ಸಂಖ್ಯೆ 8,9,10 ಶುಭ ಅಶುಭ ದಿನಗಳು ಹೇಗಿರಲಿದೆ ಅನ್ನೋದನ್ನ ತಿಳಿಸಲಾಗುತ್ತದೆ.

Leave a Reply

%d bloggers like this: