ಸ್ಯಾಂಡಲ್‌ ವುಡ್ ಸ್ಟಾರ್ ನಟಿಯರನ್ನು ಹಿಂದಿಕ್ಕಲು ಎಂಟ್ರಿ ಕೊಡಲಿದ್ದಾರೆ ಉಪೇಂದ್ರ ಅವರ ಮಗಳು

ಉಪೇಂದ್ರ ಅವರ ಮುದ್ದಾದ ಕುಟುಂಬದ ಬಗ್ಗೆ ನಿಮಗೆ ಗೊತ್ತೇ ಇದೆ.ಉಪೇಂದ್ರ ಪ್ರಿಯಾಂಕಾ ಜೋಡಿಗೆ ಐಶ್ವರ್ಯ ಅನ್ನುವ ಮುದ್ದಾದ ಮಗಳಿದ್ದಾಳೆ.ಐಶ್ವರ್ಯ ಅಮ್ಮನ ಸಿನಿಮಾದಲ್ಲಿ ದೇವಕಿ ಚಿತ್ರದಲ್ಲಿ ನಟಿಸುವ ಮೂಲಕ ಬಾಲನಟಿಯಾಗಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದಾಳೆ.ಈಗ ಬ್ರಿಡ್ಜ್ ಎಂಬ ಹಾರರ್ ಸಿನಿಮಾದಲ್ಲಿ ಅಮ್ಮನ ಜೊತೆಗೆ ಇನ್ನೊಂದು ಚಿತ್ರದಲ್ಲಿ ಅಭಿನಯಿಸಿದ್ದಾಳೆ ಐಶ್ವರ್ಯ.

ಮುಂದೆಯೂ ನಾಯಕಿಯಾಗಿ ಚಿತ್ರರಂಗಕ್ಕೆ ಬರುತ್ತೀರಾ ಅಂತ ಕೇಳಿದರೆ ಅಪ್ಪ ಅಮ್ಮನ ಅದ್ಭುತ ಸಿನಿಮಾಗಳನ್ನ ನೋಡಿ ನನಗೂ ನಟಿಯಾಗಬೇಕು ಅನಿಸುತ್ತೆ ಅಂದರು.ನಿಮಗೆ ಅಭಿನಯ ಕಲಿಸಕ್ಕೆ ಅಪ್ಪ ಅಮ್ಮ ಏನು ಹೇಳಿಕೊಟ್ಟರು ಅಂತ ಕೇಳಿದ್ರೆ ನೀನು ಸಿನಿಮಾಗೆ ನಟನೆ ಮಾಡ್ತಿದ್ದೀಯ ಅನ್ಕೊಂಡು ಮಾಡಬೇಡ.ನಿಜವಾಗಿಯೂ ನಿನ್ನ ಎದುರಿಗೆ ಇರುವವರ ಜೊತೆಗೆ ನಿಜವಾಗಿಯೂ ಮಾತಾಡ್ತಿದ್ದೀಯ ಅನ್ಕೊಂಡು ಮಾತಾಡು ಅಂದರು.

ಶಾಲೆಗೆ ರಜ ಇದ್ದಾಗೆಲ್ಲ ನನಗೆ ನಟನೆ ಬಗ್ಗೆ ಹೇಳಿಕೊಡುತ್ತಿದ್ದರು.ನನ್ನ ಓದುಬರಹಕ್ಕೂ ಸಹಾಯ ಮಾಡುತ್ತಿದ್ದರು ಅಂತ ತನ್ನ ತಂದೆತಾಯಿಯ ಬಗ್ಗೆ ಪ್ರೀತಿಪೂರ್ವಕವಾಗಿ ಹೇಳಿದ್ದಾಳೆ.ಏನೇ ಇರಲಿ ಇದೇ ಉತ್ಸಾಹ ದೊಡ್ಡವಳಾದ ಮೇಲೂ ಇರುತ್ತದಾ ತಂದೆತಾಯಿಯಂತೆ ತಾನೂ ಚಿತ್ರರಂಗವನ್ನೇ ಉಸಿರಾಗಿಸಿಕೊಳ್ಳುತ್ತಾಳಾ ಅಂತ ಕಾದು ನೋಡೋಣ‌.ತಂದೆ ತಾಯಿಗಿಂತ ದೊಡ್ಡ ಸಾಧನೆ ಮಾಡಲಿ ಎಂದು ಹಾರೈಸೋಣ.

Leave a Reply

%d bloggers like this: