ಸ್ಯಾಂಡಲ್ ವುಡ್ ಸ್ಟಾರ್ ನಟಿಗೆ ಒಲಿದು ಬಂತು ಅಂತರಾಷ್ಟ್ರೀಯ ಪ್ರಶಸ್ತಿ ಗರಿ

ಕನ್ನಡ ಚಿತ್ರರಂಗ ಇತ್ತೀಚೆಗೆ ರಾಷ್ಟ್ರ ಅಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಸಿನಿಮಾಗಳನ್ನ ಮಾಡುತ್ತಿದೆ. ಅದರಂತೆ ನಮ್ಮ ಕನ್ನಡದ ಕಲಾವಿದರು ಕೂಡ ತಮ್ಮ ನಟನಾ ಪ್ರತಿಭಾ ಸಾಮರ್ಥ್ಯದಿಂದಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನ ಪಡೆದುಕೊಳ್ಳುತ್ತಿದ್ದಾರೆ. ಅದೇ ರೀತಿಯಾಗಿ ಇದೀಗ ಬಹುಭಾಷಾ ನಟಿ ಕನ್ನಡತಿ ನಟಿ ಮೇಘನರಾಜ್ ಅವರು ಕೂಡ ಅಂತರಾಷ್ಟ್ರೀಯ ಪ್ರಶಸ್ತಿಯೊಂದಕ್ಕೆ ಭಾಜನರಾಗಿದ್ದಾರೆ. ಹೌದು ಚಿರಂಜೀವಿ ಸರ್ಜಾ ಅವರ ನಿಧನದ ನಂತರ ನಟಿ ಮೇಘನಾರಾಜ್ ಅವರು ತುಂಬ ನೋವನ್ನ ಅನುಭವಿಸಿ ಇದೀಗ ಚೇತರಿಕೆ ಕಾಣುತ್ತಿದ್ದಾರೆ. ಕೊಂಚ ತಿಂಗಳ ಮಟ್ಟಿಗಿ ಸಿನಿಮಾಗಳಿಂದ ದೂರ ಇದ್ದ ನಟಿ ಮೇಘನಾ ರಾಜ್ ಪುನಃ ಬಣ್ಣದ ಜಗತ್ತಿಗೆ ತೆರೆದುಕೊಂಡದ್ದು ಕನ್ನಡ ಕಿರುತೆರೆ ರಿಯಾಲಿಟಿ ಶೋ ಮೂಲಕ.

ಇದಾದ ನಂತರ ಈಗ ಸಿನಿಮಾ ,ಜಾಹೀರಾತು ಅಂತ ಬಿಝಿಯಾಗಿರುವ ನಟಿ ಮೇಘಾನಾ ರಾಜ್ ಅವರಿಗೆ ಫಾಗ್ ಹೀರೋ ಪ್ರಶಸ್ತಿ ಲಭಿಸಿದೆ. ಈ ವಿಚಾರ ಮೇಘನಾ ಅವರಿಗೆ ತಿಳಿದಿರಲಿಲ್ಲವಂತೆ. ಅವರಿಗೆ ಅವರ ತಂದೆ ಹಿರಿಯ ನಟ ಸುಂದರ್ ರಾಜ್ ಅವರು ತಿಳಿಸಿದರಂತೆ. ಕ್ಯಾಲಿಪೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಫೆಡರೇಷನ್ ಆಫ್ ಇಂಡೋ ಅಮೇರಿಕನ್ಸ್ ಆಫ್ ನಾರ್ತೆನ್ ಕ್ಯಾಲಿಫೋರ್ನಿಯಾ ಅವರು ಆಯೋಜನೆ ಮಾಡಿರುವ ಫೆಸ್ಟಿವಲ್ ಆಫ್ ಗ್ಲೋಬ್ ಸಮಾರಂಭ ಕಳೆದ ನಲವತ್ತು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆಯಂತೆ. ಕೋವಿಡ್ ಕಾರಣದಿಂದಾಗಿ ಈ ಎರಡು ವರ್ಷಗಳಿಂದ ಈ ಕಾರ್ಯಕ್ರಮ ನಡೆದಿರಲಿಲ್ಲ. ಈ ಬಾರಿ ಆಗಸ್ಟ್ 19, 20 ಮತ್ತು 21 ಈ ಮೂರು ದಿನಗಳ ಈ ಫಾಗ್ ಹೀರೋ ಪ್ರಶಸ್ತಿ ಸಮಾರಂಭ ನಡೆಯಲಿದೆ.

ಈ ಪ್ರಶಸ್ತಿಯನ್ನ ಭಾರತೀಯ ಸಿನಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ. ಈ ವರ್ಷದ ಫಾಗ್ ಹೀರೋ ಪ್ರಶಸ್ತಿಗೆ ಮೇಘನಾ ರಾಜ್ ಅವರು ಆಯ್ಕೆ ಆಗಿದ್ದಾರೆ. ಈ ಹಿಂದೆ ಈ ಫಾಗ್ ಹೀರೋ ಪ್ರಶಸ್ತಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಆಶಾ ಪರೇಕ್, ಧರ್ಮೇಂದ್ರ, ವಿನೋದ್ ಖನ್ನಾ ರಂತಹ ದಿಗ್ಗಜ ನಟರಿಗೆ ಲಭಿಸಿದೆ. ಈ ಬಾರಿ ದಕ್ಷಿಣ ಭಾರತ ಚಿತ್ರರಂಗದಿಂದ ಕಲಾವಿದರ ಆಯ್ಕೆಯಲ್ಲಿ ಕನ್ನಡತಿ ನಟಿ ಮೇಘನಾ ರಾಜ್ ಅವರನ್ನ ಆಯ್ಕೆ ಮಾಡಲಾಗಿದೆ. ಇದರಿಂದ ಸಂತಸ ವ್ಯಕ್ತಪಡಿಸಿರುವ ನಟಿ ಮೇಘನಾ ರಾಜ್ ಬಾಲಿವುಡ್ ದಿಗ್ಗಜ ನಟರು ಪಡೆದಿರುವ ಪ್ರಶಸ್ತಿಗೆ ನಾನು ಕೂಡ ಒಬ್ಬಳಾಗಿರುವುದಕ್ಕೆ ನನಗೆ ಖುಷಿ ಇದೆ. ಆಗಸ್ಟ್ 21ರಂದು ನಡೆಯಲಿರುವ ಅದ್ದೂರಿ ಕಾರ್ಯಕ್ರಮದಲ್ಲಿ ಫಾಗ್ ಹೀರೋ ಪ್ರಶಸ್ತಿ ಸ್ವೀಕರಿಸಲಿದ್ದೇನೆ ಎಂದು ತಿಳಿಸಿದ್ದಾರೆ.