ಸ್ಯಾಂಡಲ್ ವುಡ್ ಜಿಂಕೆ ಮರಿ ರೇಖಾ ಇದ್ದಕಿದ್ದಂತೆ ಸಿನಿಮಾ ಲೋಕದಿಂದ ಮರೆಯಾಗಿದ್ದು ಏಕೆ ಗೊತ್ತಾ…! ಈಗ ಏನ್ ಮಾಡುತ್ತಿದ್ದಾಳೆ ಗೊತ್ತಾ

ಸ್ಯಾಂಡಲ್ ವುಡ್ ಜಿಂಕೆ ಮರಿ ರೇಖಾ ಇದ್ದಕಿದ್ದಂತೆ ಸಿನಿಮಾ ಲೋಕದಿಂದ ಮರೆಯಾಗಿದ್ದು ಏಕೆ ಗೊತ್ತಾ…! ಬಣ್ಣದ ಲೋಕದಲ್ಲಿ ಕಲಾವಿದರು ಒಂದು ರೀತಿಯಾಗಿ ಹರಿಯುವ ನೀರಿನಂತೆ. ಹಳೆ ನೀರು ಹೋದ ನಂತರ ಹೊಸ ನೀರು ಬರಬೇಕು ಎಂಬಂತೆ ಒಂದು ಅವಧಿಯೊಳಗೆ ಮಿಂಚುವ ಅನೇಕ ಸ್ಟಾರ್ ನಟ-ನಟಿಯರು ಜನಪ್ರಿಯತೆಯ ಉತ್ತುಂಗದಲ್ಲಿ ಇರಬೇಕಾದಾಗಲೇ ಸಿನಿಮಾ ಕ್ಷೇತ್ರದಿಂದ ಹೊರ ಬಂದು ಬಿಡುತ್ತಾರೆ. ಇದು ಕೆಲವು ನಟ-ನಟಿಯರು ತೆಗೆದುಕೊಳ್ಳುವ ನಿರ್ಣಯವಾದರೆ, ಇನ್ನೂ ಕೆಲವರಿಗೆ ಮಾಡಿದ ಸಿನಿಮಾಗಳು ಸೂಪರ್ ಹಿಟ್ ಆಗಿ ಒಳ್ಳೆಯ ಹೆಸರಿದ್ದರು ಕೂಡ ದುರಂತ ಎಂಬಂತೆ ಅವಕಾಶಗಳ ಕೊರತೆ ಅವರನ್ನ ಕುಗ್ಗಿಸಿ ಬಿಡುತ್ತದೆ. ಅದೇ ರೀತಿಯಾಗಿ ಅನೇಕ ನಟಿಯರು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುವ ಮೂಲಕ ಒಂದಷ್ಟು ನಟಿಯರು ಬಣ್ಣದ ಲೋಕದಿಂದ ಅಂತರ ಕಾಯ್ದುಕೊಳ್ಳುತ್ತಾರೆ.

ಆದರೆ ಕನ್ನಡದ ಈ ನಟಿ ನಟಿಸಿದ ಸಿನಿಮಾಗಳು ಯಶಸ್ವಿಯಾಗಿ ಜನಪ್ರಿಯತೆಯ ಉತ್ತುಂಗದಲ್ಲಿದ್ದರು ಕೂಡ ಅವಕಾಶಗಳ ಕೊರತೆಯಿಂದ ಸಿನಿಮಾರಂಗದಿಂದಲೇ ದೂರ ಉಳಿದು ಬಿಟ್ಟಿದ್ದಾರೆ. ಹಾಗಾದರೆ ಯಾರು ಆ ನಟಿ ಎಂಬುದನ್ನ ತಿಳಿಯೋಣ. ಕನ್ನಡದ ಚಿತ್ರ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದ ನಟಿ ರೇಖಾ ವೇದವ್ಯಾಸ್ ಅವರೇ ಇದೀಗ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಇವರನ್ನ ಫುಲ್ ಫೇಮಸ್ ಮಾಡಿದ್ದು ಈ ಚಿತ್ರ ಸಿನಿಮಾದಲ್ಲಿ ಜಿಂಕೆ ಮರಿ ಓಡ್ತೈತೇ ನೋಡ್ಲಾ ಮಗ ಎಂಬ ಹಾಡು. ಈ ಹಾಡಿನ ಮೂಲಕ ರೇಖಾ ಅವರು ಅಪಾರ ಜನಪ್ರಿಯತೆ ಗಳಿಸಿದರು. ನಟಿ ರೇಖಾ ವೇದವ್ಯಾಸ್ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ.

ಮದ್ರಾಸ್ ಯೂನಿವರ್ಸಿಟಿಯಲ್ಲಿ ಬಿಬಿಎ ಪದವಿ ವ್ಯಾಸಂಗ ಮಾಡುತ್ತಿರುವಾಗಲೇ ಮಾಡೆಲಿಂಗ್ ಕ್ಷೇತ್ರದತ್ತ ಒಲವು ಮೂಡಿಸಿಕೊಂಡಿದ್ದ ರೇಖಾ ಅವರಿಗೆ ಜಯಶ್ರೀ ದೇವಿ ಅವರು ನಿರ್ಮಾಣದ ಚಿತ್ರ ಸಿನಿಮಾದಲ್ಲಿ ಅವಕಾಶ ಸಿಗುತ್ತದೆ. ಈ ಸಿನಿಮಾದಲ್ಲಿ ನಟಿ ರೇಖಾ ಸಖತ್ ಬೋಲ್ಡ್ ಆಗಿ ನಟಿಸಿರುತ್ತಾರೆ. ಚಿತ್ರ ಸಿನಿಮಾ ಸೂಪರ್ ಹಿಟ್ ಆಗುತ್ತದೆ. ಇದಾದ ಬಳಿಕ ಅದೃಷ್ಟ ಎಂಬಂತೆ ಸುದೀಪ್ ಅಭಿನಯದ ಹುಚ್ಚ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಾರೆ. ಈ ಹುಚ್ಚ ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತದೆ. ಹೀಗೆ ಕನ್ನಡ ಸಿನಿಮಾರಂಗದಲ್ಲಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಳ್ಳುವ ಸಮಯಕ್ಕೆ ಟಾಲಿವುಡ್ ಗೂ ಕೂಡ ಎಂಟ್ರಿ ಕೊಡುತ್ತಾರೆ.

ಶ್ರೀನು ವೈಟ್ಲು ಅವರ ಆನಂದಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೂ ಪ್ರವೇಶ ಪಡೆದ ನಟಿ ರೇಖಾ ತಮಿಳಿನ ಮೂರು ಗುಲಾಬಿ ಎಂಬ ಚಿತ್ರದ ಮೂಲಕ ಕಾಲಿವುಡ್ ಗೂ ಎಂಟ್ರಿ ಕೊಡುತ್ತಾರೆ. ಅಷ್ಟೇ ಅಲ್ಲದೆ ಹಿಂದಿಯ ಮುದ್ದ ಎಂಬ ಸಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿ ಬಾಲಿವುಡ್ ನಲ್ಲಿಯೂ ಕೂಡ ಗಮನ ಸೆಳೆಯುತ್ತಾರೆ. ಹೀಗೆ ಮೊನಾಲಿಸಾ, ಸೈ, ಚೆಲ್ಲಾಟ, ಹುಡುಗಾಟ, ಗುಣವಂತ, ಅಪ್ಪು ಪಪ್ಪು, ಮಸ್ತ್ ಮಜಾ ಮಾಡಿ, ಬಾಸ್, ಗೋವಿಂದಾಯ ನಮಃ, ಪರಮ ಶಿವ ಹೀಗೆ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿರುವ ನಟಿ ರೇಖಾ ವೇದವ್ಯಾಸ್ ಇದೀಗ ಅವಕಾಶಗಳಿಲ್ಲದೆ ಸಿನಿಮಾ ಲೋಕದಿಂದ ದೂರ ಉಳಿದಿದ್ದಾರೆ.

ಇದರ ಬಗ್ಗೆ ಗಾಂಧಿನಗರದ ಒಂದಷ್ಟು ಮಂದಿ ಹೇಳುವುದು ಏನಪ್ಪಾ ಅಂದರೆ ನಟಿ ರೇಖಾ ವೇದವ್ಯಾಸ್ ಅವರು ಪೀಕ್ ಅಲ್ಲಿದ್ದಾಗ ಅನೇಕ ನಿರ್ಮಾಪಕರಿಗೆ ಕಾಲ್ ಶೀಟ್ ನೀಡಿರಲಿಲ್ಲ. ಅದಲ್ಲದೆ ಕನ್ನಡ ಭಾಷೆಗಿಂತ ಇತರೆ ಭಾಷೆಗಳ ಸಿನಿಮಾದಲ್ಲಿಯೇ ಬಿಝಿಯಾದ್ದರಿಂದ ಕನ್ನಡದ ನಿರ್ಮಾಪಕರು ಕೂಡ ನಟಿ ರೇಖಾ ಅವರಿಗೆ ತಮ್ಮ ಸಿನಿಮಾಗಳಲ್ಲಿ ಅವಕಾಶ ನೀಡುವುದಕ್ಕೆ ಹಿಂದೇಟು ಹಾಕಿದ್ದರು. ಇದೆಲ್ಲದರ ಪರಿಣಾಮ ನಟಿ ರೇಖಾ ಅವರಿಗೆ ಕನ್ನಡದಲ್ಲಿ ಅವಕಾಶಗಳ ಕೊರತೆ ಉಂಟಾಗಿ ಕನ್ನಡ ಸಿನಿಮಾ ರಂಗದಿಂದ ದೂರವಾಗಿದ್ದಾರಂತೆ.