ಸ್ಯಾಂಡಲ್ ವುಡ್ ನ ಖ್ಯಾತ ನಟಿ ‘ಪ್ರೇಮ’ ಮಗಳು ಈಗ ಹೇಗಿದ್ದಾರೆ ಗೊತ್ತಾ? ನೋಡಿ ಒಮ್ಮೆ

ಸ್ಯಾಂಡಲ್ ವುಡ್ ಸವ್ಯಸಾಚಿ ನಟಿ ಪ್ರೇಮಾ ಇದೀಗ ಏನು ಮಾಡುತ್ತಿದ್ದಾರೆ. ಅವರ ವೈವಾಹಿಕ ಬದುಕಿಗೆ ಸಂಬಂಧಿಸಿದಂತೆ ಊಹಾಪೋಹ ಸುದ್ದಿ ಹರಡಿದ್ದಾದ್ದರು ಯಾರು ಎಂಬೆಲ್ಲಾ ಪ್ರಶ್ನೆಗಳಿಗೆ ಅವರೇ ಸ್ವತಃ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ.ನಟಿ ಪ್ರೇಮಾ ಮೂಲತಃ ಕೊಡುಗಿನವರು. 1977 ರ ಜನವರಿ 6 ರಂದು ಜನಿಸಿದ ಪ್ರೇಮಾ ಬಾಲ್ಯದಿಂದಾನೂ ಸಖತ್ ಆಕ್ಟಿವ್ ಆಗಿರುತ್ತಾರೆ. ಪ್ರೇಮಾ ಅವರು ಶಾಲಾ ದಿನಗಳಲ್ಲಿಯೇ ಕ್ರೀಡೆಯ ಬಗ್ಗೆ ಅಪಾರ ಒಲವು ಹೊಂದಿರುತ್ತಾರೆ. ಅದರಂತೆ ಶಾಲೆಯಲ್ಲಿ ಹೈ ಜಂಪ್ ಮತ್ತು ವಾಲಿಬಾಲ್ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುತ್ತಾರೆ.ತದ ನಂತರ ಪ್ರೇಮಾ ಅವರಿಗೆ ಬಣ್ಣದ ಲೋಕದತ್ತ ದಾರಿ ಕಾಣುತ್ತದೆ. 1995 ರಲ್ಲಿ ಎಂ.ಎಸ್ ರಾಜಶೇಖರ್ ನಿರ್ದೇಶನದಲ್ಲಿ ಮೂಡಿಬಂದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಸವ್ಯಸಾಚಿ ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಪ್ರವೇಶ ಪಡೆಯುತ್ತಾರೆ.

ತದ ನಂತರ ನಟಿ ಪ್ರೇಮಾ 1996 ರಲ್ಲಿ ತೆರೆಕಂಡಂತಹ ಉಪೇಂದ್ರ ನಿರ್ದೇಶನದಲ್ಲಿ ಮತ್ತೆ ಶಿವರಾಜ್ ಕುಮಾರ್ ಅವರಿಗೆ ಜೋಡಿಯಾಗುವುದು ನಟನೆಯ ಓಂ ಸಿನಿಮಾಗೆ. ಓಂ ಸಿನಿಮಾ ಮೂಲಕ ಇಡೀ ಭಾರತೀಯ ಚಿತ್ರರಂಗದಾದ್ಯಂತ ಅಪಾರ ಜನಪ್ರಿಯತೆ ಗಳಿಸಿ 90 ರ ದಶಕದಲ್ಲಿ ಬಹು ಬೇಡಿಕೆಯ ನಟಯಾಗಿ ಹೊರ ಹೊಮ್ಮುತ್ತಾರೆ. ಇದೇ ಸಂಧರ್ಭದಲ್ಲಿ ತಮಿಳು,ತೆಲುಗು ಮತ್ತು ಮಲೆಯಾಳಂ ಚಿತ್ರಗಳಲ್ಲಿಯೂ ಕೂಡ ಓಂ ಚಿತ್ರದಲ್ಲಿನ ಪ್ರೇಮಾ ಅವರ ನಟನೆಗೆ ಕಾಲಿವುಡ್ ಖ್ಯಾತ ನಿರ್ದೇಶಕ ಸುರೇಶ್ ಕೃಷ್ಣ ಫಿದಾ ಆಗಿ ತಮ್ಮ ನಿರ್ದೇಶನದ ಮಲೆಯಾಳಂ ಚಿತ್ರ ಪ್ರಿನ್ಸ್ ನಲ್ಲಿ ನಟಿಸಲು ಅವಕಾಶ ನೀಡಿದರು.ಈ ಚಿತ್ರದಲ್ಲಿ ನಟ ಮೋಹನ್ ಲಾಲ್ ಅವರ ಜೊತೆ ನಟಿ ಪ್ರೇಮಾ ನಟಿಸಿದರು.

ನಟಿ ಪ್ರೇಮಾ ಇದುವರೆಗೆ ಕನ್ನಡದಲ್ಲಿ ಶಿವರಾಜ್ ಕುಮಾರ್,ಉಪೇಂದ್ರ,ರವಿಚಂದ್ರನ್,ವಿಷ್ಣುವರ್ಧನ್ ರಮೇಶ್ ಅರವಿಂದ್ ಅಂತಹ ದಿಗ್ಗಜ ನಟರೊಂದಿಗೆ ಎಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಾರೆ. ಅದಲ್ಲದೆ ತೆಲುಗಿನಲ್ಲಿ ಇಪ್ಪತ್ತೆಂಟಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಅವರು ಪ್ರೇಮಾ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ 2006 ರಲ್ಲಿ ಜೀವನ್ ಅಪ್ಪಚ್ಚು ಎಂಬುವರೊಟ್ಟಿಗೆ ವೈವಾಹಿಕ ಜೀವನಕ್ಕೆ ಹೆಜ್ಜೆ ಇಟ್ಟ ನಟಿ ಪ್ರೇಮಾ ತದನಂತರ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡರು. ಮದುವೆಯಾದ ಮರು ವರ್ಷವೇ ತಮ್ಮ ಪತಿ ಮದುವೆ ಮಾಡಿಕೊಳ್ಳುವ ಮುನ್ನ ಇಲ್ಲ ಸಲ್ಲದ ಸುಳ್ಳುಗಳನ್ನು ಹೇಳಿ ಮದುವೆ ಆಗಿರುತ್ತಾನೆ ಎಂಬುದನ್ನ ತಿಳಿದು ದಾಂಪತ್ಯ ಜೀವನದಲ್ಲಿ ವೈಮನಸ್ಸುವುಂಟಾಗಿ ಪ್ರೇಮಾ ಅವರು ವಿಚ್ಚೇದನ ಪಡೆಯುತ್ತಾರೆ.

ಇದೇ ಸಂಧರ್ಭದಲ್ಲಿ ಅವರಿಗೆ ಮಗುವಾಗಿತ್ತು ಎಂದು ಗಾಳಿ ಸುದ್ಥಿ ಹರಿದಾಡುತ್ತದೆ. ಆದರೆ ಇದು ಸತ್ಯಕ್ಕೆ ದೂರವಾದ ಮಾತು ಎಂದು ಪ್ರೇಮಾ ಸ್ಪಷ್ಟನೆ ನೀಡುತ್ತಾರೆ. ಕಹಿ ಘಟನೆಗಳಿಂದ ಹೊರ ಬರಲು ಪ್ರೇಮಾ ಭಾರತ ಬಿಟ್ಟು ಒಂದಷ್ಟು ವರ್ಷಗಳ ಕಾಲ ವಿದೇಶದಲ್ಲಿ ನೆಲೆಸಿದ್ದರು. ತದನಂತರ ಮತ್ತೆ ಶಿಶಿರ ಚಿತ್ರದ ಮೂಲಕ ಸಿನಿಮಾ ಜಗತ್ತಿಗೆ ಮರಳಿದ ಪ್ರೇಮಾ ಅವರಿಗೆ ಅವರ ಆರೋಗ್ಯ ಸರಿಯಿಲ್ಲ ಎಂಬ ಸುದ್ದಿ ಅವರ ಮನಸ್ಸಿಗೆ ಅಪಾರ ನೋವನ್ನುಂಟು ಮಾಡಿ,ಮತ್ತೆ ನಟನೆಯಿಂದ ವಿರಾಮ ತೆಗೆದುಕೊಂಡರು.ಆದರೆ ಅವರು ಯಾವುದೇ ರೀತಿಯ ಅನಾರೋಗ್ಯಕ್ಕೆ ತುತ್ತಾಗಿರಲಿಲ್ಲ.ಶಿಶಿರ ಚಿತ್ರದಲ್ಲಿನ ಪಾತ್ರಕ್ಕಾಗಿ ವಿಭಿನ್ನವಾಗಿ ಹೇರ್ ಕಟ್ ಮಾಡಿಸಿಕೊಂಡಿದ್ದರು ಅಷ್ಟೇ.

ಇದನ್ನೇ ಕೆಲವು ಮಂದಿ ನಟಿ ಪ್ರೇಮಾ ಅವರು ಕ್ಯಾನ್ಸರ್ ಗೆ ಒಳಗಾಗಿದ್ದಾರೆ ಎಂದು ಸುದ್ದಿ ಮಾಡಿದ್ದರು.
ತದ ನಂತರ 2017 ರಲ್ಲಿ ತೆರೆಕಂಡ ಉಪೇಂದ್ರ ಮತ್ತೆ ಬಂದ ಚಿತ್ರದ ಮೂಲಕ ಮತ್ತೆ ಬಂದ ಪ್ರೇಮಾ ಚಿತ್ರ ಯಶಸ್ಸು ಕಾಣದ ಹಿನ್ನೆಲೆ ಹೆಚ್ಚು ಅವಕಾಶ ಪಡೆಯಲಾಗಲಿಲ್ಲ.ಇದೀಗ ನಟಿ ಪ್ರೇಮ ಅವರು ವಿಕ್ರಂ ಪ್ರಭು ನಿರ್ದೇಶನದ ವೆಡ್ಡಿಂಗ್ ಗಿಫ್ಟ್ ಚಿತ್ರದ ಮೂಲಕ ಮರಳಿ ನಟನೆಯತ್ತ ಮುಖ ಮಾಡಿದ್ದಾರೆ.ಈ ವೆಡ್ಡಿಂಗ್ ಗಿಫ್ಟ್ ಚಿತ್ರದಲ್ಲಿ ನಟಿ ಪ್ರೇಮ ವಕೀಲೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ನಟಿ ಸೋನುಗೌಡ ಮತ್ತು ನಿಶಾಂತ್ ನಾಣಯ್ಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಒಟ್ಟಾರೆಯಾಗಿ ಚಂದನವನದ ಯಜಮಾನಿಯಾಗಿ ಮಿಂಚಿದ್ದ ನಟಿ ಪ್ರೇಮಾ ಅವರು ಬದುಕು ಹಲವು ಏಳು- ಬೀಳುಗಳ ಮೂಲಕ ಇದೀಗ ಮತ್ತೆ ಬಣ್ಣದ ಲೋಕದಲ್ಲಿ ದಾರಿ ಕಂಡುಕೊಳ್ಳುತ್ತಿದ್ದಾರೆ.

Leave a Reply

%d bloggers like this: