ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ ಖ್ಯಾತ ರಾಜಕಾರಣಿ ಜನಾರ್ಧನ್ ರೆಡ್ಡಿ ಮಗ ..! ನೋಡಿ ಒಮ್ಮೆ ಹೇಗಿದ್ದಾರೆ

ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ ಕರ್ನಾಟಕದ ಖ್ಯಾತ ರಾಜಕಾರಣಿಯ ಪುತ್ರ…! ಇತ್ತೀಚೆಗೆ ಚಂದನವನಕ್ಕೆ ಹಿರಿಯ ನಟ-ನಟಿಯರ ಮಕ್ಕಳು ಬಣ್ಣದ ಲೋಕದತ್ತ ಹೆಜ್ಜೆ ಇಡುತ್ತಿದ್ದಾರೆ. ಈ ಸಿನಿಮಾ ಮತ್ತು ರಾಜಕೀಯ ಎರಡು ಕ್ಷೇತ್ರಗಳಿಗೂ ಕೂಡ ಅವಿನಾಭಾವ ಸಂಬಂಧ ಇದೆ ಎಂದು ಹೇಳಬಹುದು. ಸಿನಿಮಾದಲ್ಲಿ ಯಶಸ್ಸು ಜನಪ್ರಿಯತೆ ಗಳಿಸಿದ ನಂತರ ಕಲಾವಿದರು ರಾಜಕೀಯ ರಂಗದತ್ತ ಮುಖ ಮಾಡುತ್ತಾರೆ. ಇದು ಸಾಮಾನ್ಯವಾಗಿಯೂ ಕೂಡ ಆಗಿದೆ. ಅದರಂತೆ ರಾಜಕೀಯ ಹಿನ್ನೆಲೆಯುಳ್ಳ ಅನೇಕ ಪ್ರತಿಭೆಗಳು ಬಣ್ಣದ ಲೋಕಕ್ಕೆ ಎಂಟ್ರಿ ಆಗಿದ್ದಾರೆ. ಈಗಾಗಲೇ ರಾಜ್ಯದ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಜಾಗ್ವಾರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಆಗಿದ್ದಾರೆ. ಜೊತೆಗೆ ಹೆಚ್.ಎಂ. ರೇವಣ್ಣ ಅವರ ಪುತ್ರ ಅನೂಪ್ ರೇವಣ್ಣ ಲಕ್ಷ್ಮಣ ಚಿತ್ರದ ಮೂಲಕ, ಚೆಲುವರಾಯಸ್ವಾಮಿ ಅವರ ಪುತ್ರ ಸಚಿನ್ ಹ್ಯಾಪಿ ಬರ್ತ್ ಡೇ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಇದೀಗ ಅವರ ಸಾಲಿಗೆ ಬಳ್ಳಾರಿ ಗಣಿ ಧಣಿ ಎಂದೇ ಹೆಸರಾದ ರಾಜಕಾರಣಿ ಕಮ್ ಕೈಗಾರಿಕೋದ್ಯಮಿ ಗಾಲಿ ಜನಾರ್ಧನ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿ ಕೂಡ ಸೇರ್ಪಡೆಗೊಳ್ಳುತ್ತಿದ್ದಾರೆ. ಹೌದು ಜನಾರ್ದನ ರೆಡ್ಡಿ ಅವರಿಗೆ ಇಬ್ಬರು ಮಕ್ಕಳು. ಇತ್ತೀಚೆಗೆ ಕೆಲವು ವರ್ಷಗಳಿಂದೀಚೆಗಷ್ಟೇ ಬ್ರಾಹ್ಮಿಣಿ ರೆಡ್ಡಿ ಅವರಿಗೆ ಅದ್ದೂರಿಯಾಗಿ ಬರೋಬ್ಬರಿ ಐನೂರು ಕೋಟಿ ವೆಚ್ಚದಲ್ಲಿ ಮದುವೆ ಮಾಡಿ ಭಾರಿ ಸುದ್ದಿಯಾಗಿದ್ದರು. ಇದೀಗ ತಮ್ಮ ಪುತ್ರ ಕಿರೀಟಿ ರೆಡ್ಡಿ ಅವರನ್ನ ಅದ್ದೂರಿಯಾಗಿ ಸ್ಯಾಂಡಲ್ ವುಡ್ ಗೆ ಲಾಂಚ್ ಮಾಡುವ ತಯಾರಿ ನಡೆಸುತ್ತಿದ್ದಾರೆ ಜನಾರ್ದನ ರೆಡ್ಡಿ. ಕಿರೀಟಿ ರೆಡ್ಡಿ ಅವರಿಗೆ ಸಿನಿಮಾ ಲೋಕದಲ್ಲಿ ಮಿಂಚಬೇಕು ಎಂಬ ಆಸೆ ಬಾಲ್ಯದಿಂದಾನೂ ಇತ್ತಂತೆ. ಅದಕ್ಕಾಗಿ ಎಲ್ಲಾ ರೀತಿಯ ಸಿದ್ದತೆ ಕೂಡ ನಡೆಸಿದ್ದಾರಂತೆ.

ಇನ್ನು ಟಾಲಿವುಡ್ ಸೂಪರ್ ಹಿಟ್ ಸಿನಿಮಾ ಈಗ ಚಿತ್ರ ನಿರ್ಮಾಣ ಮಾಡಿದ್ದ ನಿರ್ಮಾಪಕ ಸಾಯಿ ಕೊರ್ರಪತಿ ಅವರು ಈ ಹೊಸ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರಂತೆ. ಇನ್ನು ಕಿರೀಟಿ ರೆಡ್ಡಿ ಅವರ ಚೊಚ್ಚಲ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಮಾಯಾ ಬಜಾ಼ರ್ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ರಾಧಾಕೃಷ್ಣ. ಚಿತ್ರದ ಪ್ರೀ ಪ್ರೋಡಕ್ಷನ್ ಕೆಲಸ ಕಾರ್ಯಗಳು ಸಿದ್ದವಾಗಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆಯಂತೆ. ಇನ್ನು ಈ ಸಿನಿಮಾ ಕೇವಲ ಕನ್ನಡದಲ್ಲಿ ಮಾತ್ರ ತಯಾರಿಲಾಗುತ್ತದೆಯೇ ಅಥವಾ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿಯೂ ತೆರೆಕಾಣಲಿದೆಯೇ ಎಂಬುದನ್ನ ಚಿತ್ರತಂಡ ಮುಂದಿನ ದಿನಗಳಲ್ಲಿ ತಿಳಿಸಲಿದೆ. ಚಿತ್ರದ ಶೀರ್ಷಿಕೆ ಬಗ್ಗೆ ಚರ್ಚೆ ನಡೆದಿದ್ದು ಟೈಟಲ್ ಲಾಂಚ್ ಕಾರ್ಯಕ್ರಮವನ್ನು ಕೂಡ ಅದ್ದೂರಿಯಾಗಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ‌.

Leave a Reply

%d bloggers like this: