ಸ್ಯಾಂಡಲ್ ವುಡ್ ಬೆಲ್ ಬಾಟಮ್ ಬೊಂಬೆ ಹೊಸ ಫೋಟೋ ಶೂಟ್, ಇದೀಗ ಹಳ್ಳಿ ರೆಂಬೆಯಾಗಿ ಮಿಂಚುತ್ತಿದ್ದಾರೆ

ಸ್ಯಾಂಡಲ್ ವುಡ್ ಬೆಲ್ ಬಾಟಮ್ ಬೊಂಬೆ ಇದೀಗ ಹಳ್ಳಿ ರೆಂಬೆಯಾಗಿ ಮಿಂಚುತ್ತಿದ್ದಾರೆ.ಚಂದನವನದ ಅನೇಕ ನಟಿಯರು ಇತ್ತೀಚೆಗೆ ವಿಭಿನ್ನ ಬಗೆಯ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಕೆಲವು ಸ್ಟಾರ್ ನಟಿಯರು ತಮ್ಮ ಮುಂದಿನ ಚಿತ್ರದ ಪ್ರಮೋಶನ್ ಗಾಗಿ ಫೋಟೋಶೂಟ್ ಮಾಡಿಸಿದರೆ,ಇನ್ನೂ ಕೆಲವು ನಟಿಯರು ಅನೇಕ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಅಂತೆಯೇ ಕನ್ನಡದ ಜನಪ್ರಿಯ ಬೇಡಿಕೆಯ ನಟಿಯಾಗಿರುವ ಹರಿಪ್ರಿಯಾ ಕೂಡ ಆಭರಣವೊಂದರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಹೌದು ನಟಿ ಹರಿಪ್ರಿಯಾ ಸದ್ಯಕ್ಕೆ ಕನ್ನಡದ ಬೇಡಿಕೆಯ ನಟಿಯಾಗಿದ್ದಾರೆ. ಸೂಪರ್ ಸ್ಟಾರ್ ಉಪೇಂದ್ರ ಅವರ ಲಗಾಮ್,ನೀನಾಸಂ ಸತೀಶ್ ಅಭಿನಯದ ಪೆಟ್ರೋಮ್ಯಾಕ್ಸ್,ರಿಷಭ್ ಶೆಟ್ಟಿ ಜೊತೆ ಮತ್ತೆ ಬೆಲ್ ಬಾಟಮ್ 2.,ನಂದೇ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇದರ ನಡುವೆ ಹರಿ ಪ್ರಿಯಾ ವಿಭನ್ನವಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅದೂ ಕೂಡ ಪಕ್ಕಾ ಹಳ್ಳಿ ಹುಡುಗಿಯಾಗಿ. ಒಂದಷ್ಟು ಆಕರ್ಷಕ ಆಭರಣ,ಚಿನ್ನದ ಬಳೆ,ಲಂಗ ದಾವಣಿ ತೊಟ್ಟು ಗದ್ದೆ ನಡುವೆ ಎತ್ತಿನ ಗಾಡಿಯಲ್ಲಿ ಕೂತು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.ಈ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋ ಗಳನ್ನ ಹಂಚಿಕೊಂಡು, ಪ್ರಕೃತಿಯ ಪ್ರೀತಿ ಒಂದು ಸಾಮಾನ್ಯ ಭಾಷೆಯಾಗಿದೆ ಮತ್ತು ನೀವು ಅದರ ಪರಿಚಯವಾದ ನಂತರ ಎಲ್ಲರೂ ಅರ್ಥಮಾಡಿಕೊಳ್ಳಬಹುದು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಇನ್ನು ಈ ಲಂಗ ದಾವಣಿಯ ಉಡುಗೆಯಲ್ಲಿ ಹರಿಪ್ರಿಯಾ ಮುದ್ದಾಗಿ ಕಾಣುತ್ತಿದ್ದು,ಅವರ ಅಭಿಮಾನಿಗಳು ಈ ಫೋಟೋಗೆ ಸಖತ್ ಫಿದಾ ಆಗಿದ್ದಾರೆ.ಇತ್ತೀಚೆಗೆ ತಾನೇ ನಟಿ ಹರಿಪ್ರಿಯಾ ನಿರ್ದೇಶಕ ಕೆ.ಮಾದೇಶ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಲಗಾಮ್ ಚಿತ್ರದ ಫೋಟೋಶೂಟ್ ನಲ್ಲಿ ಉಪೇಂದ್ರ ಅವರೊಟ್ಟಿಗೆ ನಿಂತು ಪೋಸ್ ಕೊಟ್ಟಿರುವ ಫೋಟೋಗಳು ವೈರಲ್ ಆಗಿದ್ದವು. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: