ಸ್ಯಾಂಡಲ್ ವುಡ್ ಬಹು ನಿರೀಕ್ಷಿತ ಸಿನಿಮಾ ಲವ್ ಮಾಕ್ಟೇಲ್ 2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಬಾಚಿದ್ದು ಎಷ್ಟು ಗೊತ್ತಾ…!

ಸ್ಯಾಂಡಲ್ ವುಡ್ ಬಹು ನಿರೀಕ್ಷಿತ ಸಿನಿಮಾ ಲವ್ ಮಾಕ್ಟೇಲ್ 2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಬಾಚಿದ್ದು ಎಷ್ಟು ಗೊತ್ತಾ…! ಹೌದು ಇತ್ತೀಚೆಗೆ ತಾನೇ ಕಳೆದ ಶುಕ್ರವಾರ ಫೆಬ್ರವರಿ 11 ರಂದು ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮಾಕ್ಟೇಲ್ 2 ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. ರಿಲೀಸ್ ಗೂ ಮುನ್ನ ಟ್ರೇಲರ್ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು ಲವ್ ಮಾಕ್ಟೇಲ್ 2 ಸಿನಿಮಾ. ಕಳೆದ ವರ್ಷ ಲವ್ ಮಾಕ್ಟೆಲ್ ಭಾಗ 1 ಸಿನಿಮಾ ರಿಲೀಸ್ ಆಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಮೆಚ್ಚುಗೆ ಗಳಿಸಿದರು ಕೂಡ ಕೋವಿಡ್ ಅಲೆಯ ಹಿನ್ನೆಲೆಯಲ್ಲಿ ಚಿತ್ರ ಮಂದಿರಗಳು ಕ್ಲೋಸ್ ಆಗಿ ಚಿತ್ರ ಗಳಿಕೆಗೆ ಕೊಂಚ ಹೊಡೆತ ಬಿತ್ತು ಎನ್ನಬಹುದು. ಆದರೆ ನಂತರ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಮತ್ತೆ ರಿಲೀಸ್ ಆಗಿ ಲವ್ ಮಾಕ್ಟೇಲ್ ಸಿನಿಮಾ ಅಪಾರ ಜನಪ್ರಿಯತೆ ಪಡೆದುಕೊಂಡಿತು. ಸಿನಿಮಾ ನೋಡಿದ ಪ್ರೇಕ್ಷಕರು ಆದಿ ಮತ್ತು ನಿಧಿಮಾ ಪಾತ್ರವನ್ನು ತುಂಬ ಇಷ್ಟಪಟ್ಟರು.

ಆದರೆ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಕಥಾ ನಾಯಕಿ ನಿಧಿಮಾ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ ಸಾವನ್ನಪ್ಪುವ ಕಾರಣ ಪ್ರೇಕ್ಷಕರಿಗೆ ಕೊಂಚ ಭಾವನಾತ್ಮಕವಾಗಿ ಕಾಡುತ್ತಾರೆ. ಈ ಚಿತ್ರದ ಕ್ಲೈಮ್ಯಾಕ್ಸ್ ನೋಡಿದ ಪ್ರತಿಯೊಬ್ಬರಿಗೂ ಲವ್ ಮಾಕ್ಟೇಲ್ ಸಿನಿಮಾದ ಮುಂದುವರಿದ ಭಾಗವಾಗಿ ಪಾರ್ಟ್ 2 ಬರುತ್ತದೆ ಎಂದು ನಿರೀಕ್ಷೆ ಇಟ್ಟಿದ್ದರು. ಅದರಂತೆ ತಮ್ಮ ಚೊಚ್ಚಲ ನಿರ್ದೇಶನದ ಮೂಲಕವೇ ಗೆದ್ದಂತಹ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರು ಲವ್ ಮಾಕ್ಟೇಲ್ ಪಾರ್ಟ್ 2 ಸಿನಿಮಾ ಮಾಡಿದ್ದಾರೆ. ಲವ್ ಮಾಕ್ಟೇಲ್ 2.ಚಿತ್ರಕ್ಕೂ ನಟಿ ಮಿಲನಾ ನಾಗರಾಜ್ ಅವರೇ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಬಗ್ಗೆ ಸಖತ್ ಪ್ರಮೋಶನ್ ಮಾಡಿದ ಲವ್ ಮಾಕ್ಟೇಲ್ 2.ಚಿತ್ರತಂಡ ಕಳೆದ ವಾರ ಚಿತ್ರ ರಿಲೀಸ್ ಮಾಡಿದ್ದಾರೆ.

ನಿರೀಕ್ಷೆಯಂತೆ ಲವ್ ಮಾಕ್ಟೇಲ್ ಸಿನಿಮಾ ಕೂಡ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ಪಡೆದುಕೊಂಡಿದೆ. ಈ ಲವ್ ಮಾಕ್ಟೇಲ್ 2 ಚಿತ್ರದಲ್ಲಿ ಐವರು ನಾಯಕಿಯರು ಎಂದು ಹೇಳಬಹುದು. ನಟಿ ಅಮೃತಾ ಅಯ್ಯಂಗಾರ್, ಹೆಂಗೆ ನಾವು ಡೈಲಾಗ್ ಖ್ಯಾತಿಯ ರಚನಾ, ಸುಷ್ಮಿತಾ, ರಾಚೆಲ್, ಮಿಲನಾ ಈ ಸಿನಿಮಾದಲ್ಲಿಯೂ ಕೂಡ ರಿವರ್ಸ್ ಸ್ಕ್ರೀನ್ ಪ್ಲೇ ಸ್ಟೋರಿಯಲ್ಲಿ ಬಂದೋಗುತ್ತಿರುತ್ತಾರೆ. ಇನ್ನು ಇದೀಗ ಲವ್ ಮಾಕ್ಟೇಲ್ ಚಿತ್ರದ ಎರಡು ದಿನದ ಕಲೆಕ್ಷನ್ ನೋಡಿ ಚಿತ್ರತಂಡ ಸಖತ್ ಖುಷಿಯಲ್ಲಿದೆ. ಹೌದು ಲವ್ ಮಾಕ್ಟೇಲ್ 2 ಚಿತ್ರ ಎರಡೇ ದಿನದಲ್ಲಿ ಬರೋಬ್ಬರಿ ಹತ್ತು ಕೋಟಿ ಗಳಿಕೆ ಮಾಡಿದೆಯಂತೆ. ಇದರಿಂದ ನಿರ್ಮಾಪಕರಾದ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಸಂತಸದಲ್ಲಿದ್ದಾರೆ.