ಸ್ಯಾಂಡಲ್ ವುಡ್ ಜೋಡೆತ್ತುಗಳು ಒಂದೇ ರೀತಿಯ ದುಬಾರಿ ಕಾರ್ ಖರೀದಿ ಮಾಡಿ ಸುದ್ದಿಯಾಗಿದ್ದಾರೆ. ಕಾರಿನ ಬೆಲೆ ಎಷ್ಟು ಗೊತ್ತಾ?

ಕನ್ನಡ ಚಿತ್ರರಂಗದ ಖ್ಯಾತ ನಟರಿಬ್ಬರು ಒಂದೇ ರೀತಿಯ ದುಬಾರಿ ಕಾರ್ ಖರೀದಿ ಮಾಡಿ ಸುದ್ದಿಯಾಗಿದ್ದಾರೆ. ಒಬ್ಬ ಸ್ಟಾರ್ ನಟನ ಸಿನಿಮಾ ಮತ್ತೊಬ್ಬ ಸ್ಟಾರ್ ಸಿನಿಮಾಗೆ ಪೈಪೋಟಿ ನೀಡುತ್ತವೆ. ಆದರೆ ಲೈಫ್ ಸ್ಟೈಲ್ ನಲ್ಲಿಯೂ ಕೂಡ ಒಬ್ಬರಗಿಂತ ಒಬ್ಬರು ಕಾರ್ ಖರೀದಿಸುವ ಮೂಲಕ ಪೈಪೋಟಿ ನಡೆಸುತ್ತಿದ್ದಾರೆ ಎನ್ನಬಹುದು. ಆಗಂತ ಇದು ವಾರ್ ಅಲ್ಲ. ಆರೋಗ್ಯಕರ ಅಭಿವೃದ್ದಿ ಬೆಳವಣಿಗೆ ಎನ್ನಬಹುದು. ಹೌದು ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್
ಚಾಲೇಂಜಿಂಗ್ ಸ್ಟಾರ್ ದರ್ಶನ್ ಬಹು ಬೇಡಿಕೆಯ ನಟರಾಗಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆ ದರ್ಶನ್ ಅವರು ಹೊಸ ಕಾರ್ ವೊಂದನ್ನು ಖರೀದಿ ಮಾಡಿ ಸುದ್ದಿಯಾಗಿದ್ದರು. ನಟ ದರ್ಶನ್ ಅವರಿಗೆ ಕಾರ್ ಕ್ರೇಜ಼್ ಬಹಳಾನೇ ಇದೆ. ಕೆಜಿಎಫ್ ಚಿತ್ರದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ರಾಕಿಂಗ್ ಸ್ಟಾರ್ ಯಶ್ ಕೂಡ ಕೋಟಿ ಕೋಟಿ ಮೌಲ್ಯದ ಕಾರ್ ಗಳನ್ನು ಖರೀದಿ ಮಾಡಿದ್ದಾರೆ.

ನಟ ದರ್ಶನ್ ಅವರಿಗೆ ಮೊದಲಿನಿಂದಾನೇ ಕಾರ್ ಕ್ರೇಜ಼್ ಸಖತ್ತಾಗೇ ಇದೆ. ಅವರ ಬಳಿ ಜಾಗ್ವಾರ್, ರೇಂಜ್ ರೋವರ್,ಆಡಿ ಕ್ಯೂ 7 , ಲ್ಯಾಂಬೋರ್ಗೀನಿ ಉರುಸ್ ಅಂತಹ ಐಷಾರಾಮಿಗಳಿವೆ.ಇದೀಗ ಚಾಲೇಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಹೊಸ ಬಿಳಿ ಬಣ್ಣದ ಟಯೋಟ ವೆಲ್ ಫೈರ್ ಕಾರ್ ಖರೀದಿ ಮಾಡಿದ್ದಾರೆ. ಈ ಅಡ್ವಾನ್ಸ್ಡ್ ಐಷಾರಾಮಿ ಟಯೋಟ್ ವೆಲ್ ಫೈರ್ ಕಾರಿನ ಬೆಲೆ ಬರೋಬ್ಬರಿ ತೊಂಭತ್ತು ಲಕ್ಷ ರೂ.ಗಳಾಗಿದ್ದು ಈ ಕಾರಿಗೆ ಹೆಚ್ಚುವರಿ ಫಿಟ್ಟಿಂಗ್ ಮೂವತ್ತು ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದಾರೆ ನಟ ದರ್ಶನ್.ಒಟ್ಟಾರೆಯಾಗಿ ನಟ ದರ್ಶನ್ ಅವರು ಈ ಕಾರಿಗಾಗಿ ಬರೋಬ್ಬರಿ ಒಂದು ಕೋಟಿ ಇಪ್ಪತ್ತು ಲಕ್ಷ ರೂ.ಗಳನ್ನು ವಿನಿಯೋಗಿಸಿ ಸುದ್ದಿಯಾಗಿದ್ದಾರೆ. ಇತ್ತ ರಾಕಿಂಗ್ ಸ್ಟಾರ್ ಯಶ್ ಕೂಡ ಹೊಸ ಪ್ರಾಪರ್ಟಿ ಮತ್ತು ದುಬಾರಿ ಕಾರ್ ಗಳನ್ನು ಕೊಂಡುಕೊಂಡಿದ್ದಾರೆ.

ಇತ್ತೀಚೆಗೆ ನಟ ಯಶ್ ಅವರು ಕೂಡ ಕಪ್ಪು ಬಣ್ಣದ ಟಯೋಟ ವೆಲ್ ಫೈರ್ ಕಾರನ್ನು ತಮ್ಮ ತಾಯಿ ಪುಷ್ಪಾ ಅವರಿಗೆ ಉಡುಗೊರೆಯಾಗಿ ನೀಡಿದರು. ಇದರ ಮೌಲ್ಯ ಬರೋಬ್ಬರಿ ಒಂದು ಕೋಟಿ ಆರು ಲಕ್ಷ ರೂ ದ್ದಾಗಿದೆ. ಇನ್ನು ಈ ಟಯೋಟ ವೆಲ್ ಫೈರ್ ಹೈ ಬ್ರೀಡ್ ಕಾರಿನ ಫೀಚರ್ ಗಳನ್ನು ನೋಡುವುದಾದರೆ ಇದರಲ್ಲಿ ಏಳು ಏರ್ ಬ್ಯಾಗ್ ವ್ಯವಸ್ಥೆ ಇದ್ದು, 16.35 ಕಿ.ಮೀ ಮೈಲೇಜ್ ನೀಡುತ್ತದೆ. ಪೆಟ್ರೋಲ್ ಇಂಜಿನ್ ಆಧಾರಿತವಾಗಿದ್ದು, ನಾಲ್ಕು ಸಿಲಿಂಡರ್ ಗಳನ್ನು ಹೊಂದಿದ್ದು, 32 ಬಿ ಎಚ್ ಪಿ 4700 ಆರ್ ಪಿ ಎಮ್ ವ್ಯವಸ್ಥೆಯನ್ನು ಹೊಂದಿದೆ. 58 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊಂದಿದೆ. ಒಟ್ಟಾರೆಯಾಗಿ ಕನ್ನಡ ಚಿತ್ರರಂಗದ ಸ್ಟಾರ್ ನಟ-ನಟಿಯರು ಮಾತ್ರವಲ್ಲದೆ, ಕನ್ನಡ ಕಿರುತೆರೆಯ ಅನೇಕ ಯುವ ಕಲಾವಿದರು ಕೂಡ ದುಬಾರಿ ಬೆಲೆಯ ಕಾರ್ ಗಳನ್ನು ಖರೀದಿ ಮಾಡಿ ಭಾರಿ ಸುದ್ದಿಯಾಗಿದ್ದರು.

Leave a Reply

%d bloggers like this: