ಸ್ಯಾಂಡಲ್ ವುಡ್ ಬಾದ್ ಶಾ ಕಿಚ್ಚ ಸುದೀಪ್ ತನ್ನ ಬಾಡಿಗಾರ್ಡ್ ಗೆ ಕೊಡುವ ಸಂಬಳ ಎಷ್ಟು ಗೊತ್ತಾ…! ವೈರಲ್ ಆದ ಸುದ್ದಿ.. ನೋಡಿ ಒಮ್ಮೆ

ಸ್ಯಾಂಡಲ್ ವುಡ್ ಬಾದ್ ಶಾ ಕಿಚ್ಚ ಸುದೀಪ್ ತನ್ನ ಬಾಡಿಗಾರ್ಡ್ ಗೆ ಕೊಡುವ ಸಂಬಳ ಎಷ್ಟು ಗೊತ್ತಾ…! ಸಾಮಾನ್ಯವಾಗಿ ಸಮಾಜದಲ್ಲಿರುವ ಬಹುತೇಕ ಗಣ್ಯ ವ್ಯಕ್ತಿಗಳು ತಮ್ಮ ರಕ್ಷಣೆಗಾಗಿ ಅಂಗ ರಕ್ಷಕರನ್ನ ನೇಮಿಸಿಕೊಂಡಿರುತ್ತಾರೆ. ಇದಕ್ಕೆ ಸಿನಿಮಾ ಸೆಲೆಬ್ರಿಟಿಗಳು ಕೂಡ ಹೊರತಾಗಿಲ್ಲ. ಸ್ಯಾಂಡಲ್ ವುಡ್ ನಲ್ಲಿ ಎಲ್ಲಾ ಸ್ಟಾರ್ ನಟ-ನಟಿಯರಿಗೂ ಬಾಡಿ ಗಾರ್ಡ್ ಇದ್ದೇ ಇರುತ್ತಾರೆ. ಅಂತೆಯೇ ಕಿಚ್ಚ ಸುದೀಪ್ ಅವರು ಸಹ ಬಾಡಿಗಾರ್ಡ್ ಒಬ್ಬರನ್ನ ನೇಮಿಸಿಕೊಂಡಿದ್ದಾರೆ. ಅವರ ಹೆಸರು ಸಾಯಿ ಕಿರಣ್. ಸಾಯಿ ಕಿರಣ್ ಅವರು ತಮ್ಮ ಕಿಚ್ಚ ಸುದೀಪ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರ ಹೆಸರಿನ ಮುಂದೆ ಕಿಚ್ಚ ಎಂದು ಸೇರಿಸಿಕೊಂಡು ಕಿಚ್ಚ ಸಾಯಿ ಕಿರಣ್ ಎಂದು ತಮ್ಮ ಹೆಸರನ್ನ ಮಾಡಿಕೊಂಡಿದ್ದಾರೆ.

ಅನೇಕ ಗಣ್ಯ ವ್ಯಕ್ತಿಗಳು ತಮ್ಮ ಸಿಬ್ಬಂದಿಗಳನ್ನು ಇತಿ-ಮಿತಿಯಲ್ಲಿಟ್ಟುಕೊಂಡು ಕೆಲಸದವರಂತೆ ನೋಡಿಕೊಂಡಿರುತ್ತಾರೆ. ಆದರೆ ನಟ ಕಿಚ್ಚ ಸುದೀಪ್ ಅವರು ದಶಕಗಳಿಂದ ತನ್ನ ಸೇವೆ ಮಾಡುತ್ತಿರುನ ಕಿಚ್ಚ ಸಾಯಿ ಕಿರಣ್ ಅವರನ್ನ ತಮ್ಮ ಕುಟುಂಬದ ಸದಸ್ಯರೊಬ್ಬರಂತೆ ನೋಡಿಕೊಳ್ಳುತ್ತಿದ್ದಾರೆ. ಸುದೀಪ್ ಅವರು ಅಷ್ಟರ ಮಟ್ಟಿಗೆ ಸಾಯಿ ಕಿರಣ್ ಅವರ ಮೇಲೆ ಪ್ರೀತಿ,ವಿಶ್ವಾಸ ನಂಬಿಕೆ ಇಟ್ಟಿದ್ದಾರೆ. ಸಾಯಿ ಕಿರಣ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕಿಚ್ಚ ಸುದೀಪ್ ಅವರು ಬುಲೆಟ್ ಬೈಕ್ ವೊಂದನ್ನು ಖರೀದಿಸಿ ಉಡುಗೊರೆಯಾಗಿ ನೀಡಿದ್ದರು. ಅಷ್ಟೇ ಅಲ್ಲದೆ ಸುದೀಪ್ ಅವರು ತನ್ನ ನೆಚ್ಚಿನ ಬಂಟನಿಗೆ ತಾವೇ ಸ್ವತಃ ಬಿರಿಯಾನಿ ಮಾಡಿ ಪ್ರೀತಿಯಿಂದ ಉಣ ಬಡಿಸಿದ್ದರು.

ಸುದೀಪ್ ಮಾತ್ರ ಅಲ್ಲದೆ ಸುದೀಪ್ ಅವರ ಪತ್ನಿ ಪ್ರಿಯಾ, ಸುದೀಪ್ ಅವರ ತಾಯಿ ಮತ್ತು ಸೋದರಿಯರು ಕೂಡ ಸಾಯಿ ಕಿರಣ್ ಅವರ ಹುಟ್ಟು ಹಬ್ಬದ ಪ್ರಯುಕ್ತ ತಾವಿದ್ದ ಸ್ಥಳದಿಂದಾನೇ ಕೇಕ್ ಕಟ್ ಮಾಡಿ ಸಾಯಿ ಕಿರಣ್ ಅವರಿಗೆ ವಿಶ್ ಮಾಡಿದ್ದರು. ಇನ್ನು ಸುದೀಪ್ ತಮ್ಮ ಅಂಗ ರಕ್ಷಕ ಕಿಚ್ಚ ಸಾಯಿ ಕಿರಣ್ ಅವರಿಗೆ ಮೂವತ್ತರಿಂದ ನಲವತ್ತು ಸಾವಿರ ರೂ.ವರೆಗೆ ವೇತನ ನೀಡುತ್ತಾರೆ. ಜೊತೆಗೆ ಅವರ ಕುಟುಂಬಕ್ಕೂ ಕೂಡ ತಮ್ಮಿಂದ ಸಾದ್ಯವಾದಷ್ಟು ನೆರವು ನೀಡುತ್ತಾರೆ ಸುದೀಪ್. ಇನ್ನು ಸದ್ಯಕ್ಕೆ ಕಿಚ್ಚ ಸುದೀಪ್ ಅವರು ತಮ್ಮ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಚಿತ್ರದ ಪ್ರಮೋಶನ್ ಕಾರ್ಯ ದಲ್ಲಿ ಬಿಝಿ಼ಯಾಗಿದ್ದಾರೆ.

Leave a Reply

%d bloggers like this: