ಸಂಪತ್ತಿನಲ್ಲಿ ಇಂಗ್ಲೆಂಡ್ ರಾಣಿಯನ್ನೇ ಮೀರಿಸಿದ್ದಾರೆ ಇನ್ಫೋಸಿಸ್ ಒಡೆಯ ನಾರಾಯಣ ಮೂರ್ತಿ ಅವರ ಮಗಳು

ಭಾರತ ದೇಶದ ಪ್ರತಿಷ್ಟಿತ ಐಟಿ ಕಂಪನಿಗಳಲ್ಲಿ ಒಂದಾಗಿರುವ ಕರ್ನಾಟಕದ ಇನ್ಫೋಸಿಸ್ ಕಂಪನಿಯ ಮಾಲೀಕರಾದ ನಾರಾಯಣ್ ಮೂರ್ತಿ ಮತ್ತು ಸುಧಾಮೂರ್ತಿ ಅವರು ಶೂನ್ಯದಿಂದ ಬಿಲಿಯನರ್ ಆಗಿ ಬೆಳೆದು ನಿಂತಿರುವ ಆದರ್ಶ ದಂಪತಿಗಳು.ಕೇವಲ ತಮ್ಮ ಉದ್ಯಮ ಸಂಸ್ಥೆ ಶ್ರೀಮಂತಿಕೆಯಿಂದ ನಾರಾಯಣ್ ಮೂರ್ತಿ ಅವರಾಗಲಿ,ಸುಧಾಮೂರ್ತಿ ಅವರಾಗಲಿ ಪ್ರಸಿದ್ದರಾಗಿಲ್ಲ.ಅವರಲ್ಲಿರುವ ಮಾನವೀಯ ಅಂತಃಕರಣ ಗುಣ,ಸಹಾಯ ಮಾಡುವ ಉದಾರತೆಯ ಗುಣ ಅವರನ್ನ ಇಂದು ಉನ್ನತ ಸ್ಥಾನದಲ್ಲಿ ಕಾಣುವಂತಾಗಿದೆ.ಈ ಆದರ್ಶ ಸಾಧಕ ದಂಪತಿಗಳಿಗೆ ಆರ್ಥಿಗೊಬ್ಬ ಕೀರ್ತಿಗೊಬ್ಬಳು ಎಂಬಂತೆ ಅಕ್ಷತಾ ಮತ್ತು ರೋಹನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಪುತ್ರಿ ಅಕ್ಷತಾ ಅವರನ್ನ ರಿಷಿ ಸುಣಕ್ ಎಂಬುವರೊಂದಿಗೆ ಮದುವೆ ಮಾಡಿದ್ದಾರೆ. ಅಕ್ಷತಾ ಅವರ ಪತಿ ಇಂಗ್ಲೆಂಡ್ ದೇಶದ ಫಿನಾನ್ಶಿಯಲ್ ಮಿನಿಸ್ಟರ್ ಆಗಿದ್ದಾರೆ.ಅಳಿಯ ಮಗಳು ಇಬ್ಬರು ಸದ್ಯಕ್ಕೆ ಇಂಗ್ಲೆಂಡ್ ನಲ್ಲಿ ನೆಲೆಸಿದ್ದು,ಆಗಾಗ ಬೆಂಗಳೂರಿಗೆ ಆಗಮಿಸುತ್ತಾರೆ.ಅಳಿಯ ರಿಶಿ ಸುಣಕ್ ಅವರು ಇಂಗ್ಲೆಂಡ್ ದೇಶದ ಫಿನಾನ್ಶಿಯಲ್ ಮಿನಿಸ್ಟರ್ ಆಗಿ ಉತ್ತಮ ಕೆಲಸ ಕಾರ್ಯಗಳನ್ನ ಮಾಡುತ್ತಿದ್ದಾರೆ.

ಅವರ ನೀಡಿದ ಮೊದಲ ಬಜೆಟ್ ಇಂಗ್ಲೆಂಡ್ ದೇಶಾದ್ಯಂತ ಅಪಾರ ಮೆಚ್ಚುಗೆಗೆ ಕಾರಣವಾಗಿತ್ತು.ಇತ್ತೀಚೆಗೆ ರಿಷಿ ಸುಣಕ್ ಮತ್ತು ಪತ್ನಿ ಅಕ್ಷತಾ ಅವರಿಗೆ ಕಾನೂನಿನ ತೊಡಕುವುಂಟಾಗಿದೆ.ಏಕೆಂದರೆ ಇಂಗ್ಲೆಂಡ್ ದೇಶದ ಕಾನೂನಿನ ಪ್ರಕಾರ ಸಚಿವರುಗಳು ತಮ್ಮ ಇಡೀ ಕುಟುಂಬದ ಸದಸ್ಯರ ಆಸ್ತಿ,ಆದಾಯದ ಮೂಲಗಳ ಬಗ್ಗೆ ಮಾಹಿತಿ ನೀಡಬೇಕು ಎಂಬ ನಿಯಮವಿದೆ.ಆದರೆ ರಿಷಿ ಪತ್ನಿ ಅಕ್ಷತಾ ತಮ್ಮ ಆಸ್ತಿ ಆದಾಯದ ಮಾಹಿತಿಗಳನ್ನ ಸಮರ್ಪಕವಾಗಿ ನೀಡದ ಕಾರಣ ಇದೀಗ ಹಣಕಾಸು ಸಚಿವರಾದ ರಿಷಿ ಅವರಿಗೆ ಕಾನೂನಿನ ಕ್ರಮ ಎದುರಿಸುವ ಸಂಧರ್ಭ ಒದಗಿ ಬಂದಿದೆ. ಅಕ್ಷತಾ ಅವರು ತಮ್ಮ ಆಸ್ತಿಯನ್ನ ಸೂಕ್ತವಾಗಿ ಇಲಾಖೆಗೆ ಮಾಹಿತಿ ನೀಡದೆ ಕೋಟ್ಯಾಂತರ ರೂ.ಗಳನ್ನ ರಹಸ್ಯವಾಗಿ ಇರಿಸಿದ್ದಾರೆ ಎಂದು ಇಂಗ್ಲೆಂಡ್ ದೇಶದ ಪ್ರಮುಖ ದಿನ ಪತ್ರಿಕೆ ಆಗಿರುವ ದಿ ಗಾರ್ಡಿಯನ್ ಮಾಧ್ಯಮ ನಡೆಸಿರುವ ಅಧ್ಯಾಯನ ತನಿಖೆಯೊಂದರಲ್ಲಿ ಈ ಮಾಹಿತಿ ಹೊರಬಿದ್ದಿದ್ದು,ವರದಿ ಬಿತ್ತರಿಸಿದೆ.

ಇದು ರಿಷಿ ಅವರಿಗೆ ಇರಿಸು ಮುರಿಸು ತರಿಸುವಂತಾಗಿದೆ.ಏಕೆಂದರೆ ಇನ್ಫೋಸಿಸ್ ಮಾಲೀಕರ ಪುತ್ರಿ ಅಕ್ಷತಾ ಅವರ ಬಳಿ ಬರೋಬ್ಬರಿ 4200 ಕೋಟಿಗೂ ಅಧಿಕ ಶೇರು ಹೂಡಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.ಈ ಮಟ್ಟದ ಆಸ್ತಿ ಸ್ವತಃ ಇಂಗ್ಲೆಂಡ್ ದೇಶದ ರಾಣಿ ಎಲಿಜಿಬತ್ ಅವರ ಬಳಿಯೂ ಕೂಡ ಈ ಪರಿಯ ಆಸ್ತಿ ಇಲ್ಲ ಎಂದು ತಿಳಿದುಬಂದಿದೆ‌.ಇಂಗ್ಲೆಂಡ್ ದೇಶದ ರಾಣಿ ಎಲಿಜಿಬತ್ ಬರೋಬ್ಬರಿ ಹದಿನೈದು ಕಾಮನ್ ವೆಲ್ಥ್ ದೇಶಗಳಿಗೆ ರಾಣಿಯಾಗಿರುವ ಎಲಿಜಿಬತ್ ಅವರ ಬಳಿ 3400 ಕೋಟಿ ಆಸ್ತಿ ಹೊಂದಿದ್ದಾರೆ.ಆದರೆ ನಾರಾಯಣ್ ಮೂರ್ತಿ ಮತ್ತು ಸುಧಾಮೂರ್ತಿ ಅವರ ದಂಪತಿಗಳ ಪುತ್ರಿ ಅಕ್ಷತಾ ಅವರ ಆಸ್ತಿಯು ಇಂಗ್ಲೆಂಡ್ ರಾಣಿಗಿಂತಲೂ ನೂರು ಕೋಟಿ ಹೆಚ್ಚು ಆಸ್ತಿ ಹೊಂದುವ ಮೂಲಕ ಅಕ್ಷತಾ ಇಂಗ್ಲೆಂಡ್ ರಾಣಿ ಎಲಿಜಿಬಿತ್ ಅವರನ್ನ ಮೀರಿಸಿದ್ದಾರೆ.

Leave a Reply

%d bloggers like this: