ಸಾಮಾನ್ಯರಂತೆ ಮುಂಬೈನ ರಸ್ತೆಗಳಲ್ಲಿ ಸ್ಕೂಟರ್ ಓಡಿಸಿಕೊಂಡು ಹೋದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ

ಕ್ರಿಕೆಟ್ ಲೋಕದಲ್ಲಿ ಯಶಸ್ವಿ ಕ್ಯೂಟ್ ಜೋಡಿ ಅಂಡ್ ಆದರ್ಶ ದಂಪತಿಗಳಾಗಿ ಗುರುತಿಸಿಕೊಂಡಿರೋದು ಅಂದ್ರೆ ಅದು ಒನ್ ಅಂಡ್ ಓನ್ಲಿ ವಿರುಷ್ಕಾ ಜೋಡಿ. ಬಾಲಿವುಡ್ ಬೇಡಿಕೆಯ, ಜನಪ್ರಿಯ ನಟಿಯಾಗಿ ಮಿಂಚಿದ ಅನುಷ್ಕಾ ಶರ್ಮಾ ಕ್ರಿಕೆಟಿಗ ಟೀಮ್ ಇಂಡಿಯಾ ನಾಯಕರಾಗಿದ್ದ ವಿರಾಟ್ ಕೊಹ್ಲಿ ಅವರನ್ನ ಪ್ರೀತಿಸಿ ಮದುವೆ ಆಗಿದ್ದಾರೆ. ಒಂದಷ್ಟು ವರ್ಷಗಳ ಕಾಲ ಡೇಟಿಂಗ್ ನಡೆಸಿದ ಈ ಜೋಡಿ 2017ರಲ್ಲಿ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಾರೆ. ಸದ್ಯಕ್ಕೆ ಇದೀಗ ಒಂದು ಹೆಣ್ಣು ಮಗುವಿಗೆ ಪೋಷಕರಾಗಿರುವ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಮಗಳೊಟ್ಟಿಗೆ ಉತ್ತಮ ಕಾಲ ಕಳೆಯುತ್ತಿದ್ದಾರೆ. ಮಗುವಾದ ನಂತರ ಅನುಷ್ಕಾ ಶರ್ಮಾ ಬಣ್ಣದ ಲೋಕದಿಂದ ಕೊಂಚ ಅಂತರ ಕಾಯ್ದುಕೊಂಡು ತಮ್ಮ ಮಗಳಿನ ಆರೈಕೆ ಕಡೆ ಗಮನ ಕೊಡುತ್ತಾ ತಾಯ್ತನವನ್ನು ಸಂತೋಷದಿಂದ ಅನುಭವಿಸಿದ್ದಾರೆ. ಇತ್ತ ವಿರಾಟ್ ಕೊಹ್ಲಿ ಬಿಡುವಿದ್ದಾಗಲೆಲ್ಲಾ ತಮ್ಮ ಮಗಳು ವಮಿಕಾ ಜೊತೆ ಕಾಲ ಕಳೆಯುತ್ತಾ ಒಂದಷ್ಟು ಸುಮಧುರ ಕ್ಷಣಗಳ ವೀಡಿಯೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಕೂಡ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಯಾಕೋ ಏನೋ ವಿರಾಟ್ ಕೊಹ್ಲಿ ಅವರು ಕ್ಯಾಪ್ಟನ್ ಶಿಪ್ ಹೋದಾಗಿನಿಂದ ಫಾರ್ಮ್ ನಲ್ಲಿ ಕೊಂಚ ಹಿಡಿತ ಕಳೆದುಕೊಂಡಿದ್ದಾರೆ. ಕಳೆದೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಿಂದಾನೂ ಕಳಪೆ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ ಅವರು ತಮ್ಮ ಬಗ್ಗೆ ನಿರೀಕ್ಷೆ ಕಳೆದುಕೊಂಡಿದ್ದಾರೆ. ಸದ್ಯಕ್ಕೆ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಕ್ಕೆ ಆಯ್ಕೆ ಆಗಿರೋ ವಿರಾಟ್ ಕೊಹ್ಲಿ ಅವರು ಸದ್ಯಕ್ಕೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದರ ನಡುವೆ ವಿರಾಟ್ ಕೊಹ್ಲಿ ತಮ್ಮ ಪ್ರೀತಿಯ ಮಡದಿ ಅನುಷ್ಕಾ ಶರ್ಮಾ ಅವರನ್ನ ಅವರ ಬೇಡಿಕೆಯ ಇಚ್ಚೆಯನುಸಾರ ಮುಂಬೈನ ರಸ್ತೆ ರಸ್ತೆಗಳಲ್ಲಿ ಸ್ಕೂಟರ್ ನಲ್ಲಿ ರೌಂಡ್ ಹೊಡೆಸುತ್ತಿದ್ದಾರೆ. ತಮ್ಮ ಗುರುತು ಯಾರಿಗೂ ಕಾಣಬಾರದು ಅಂತ ದಂಪತಿಗಳಿಬ್ಬರು ಹೆಲ್ಮೆಟ್ ಧರಿಸಿಕೊಂಡು ಮುಂಬೈನ ಒಂದಷ್ಟು ಫೇಮಸ್ ರೋಡ್ ರೋಡ್ ಸುತ್ತಾಡಿದ್ದಾರೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರು ಸ್ಕೂಟರ್ ನಲ್ಲಿ ರೈಡ್ ಮಾಡಿರೋ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಅವರ ಅಭಿಮಾನಿಗಳು ಎಕ್ಸೈಟ್ ಆಗಿ ಇವ್ರು ಕೊಹ್ಲಿನಾ ಎಂದು ಅಚ್ಚರಿ ಪಡಿಸಿ ಈ ವೀಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

%d bloggers like this: