ಸಮಂತಾಗೆ ವಿಚ್ಚೇದನ ಕೊಟ್ಟ ನಂತರ ನಾಗಚೈತನ್ಯ ಮದುವೆಯಾಗಲಿರುವ ಹುಡುಗಿ ಇವರೇ

ಟಾಲಿವುಡ್ ಸ್ಟಾರ್ ದಂಪತಿಗಳಾಗಿದ್ದ ನಟಿ ಸಮಂತಾ ಮತ್ತು ನಟ ನಾಗ ಚೈತನ್ಯ ಇದೀಗ ತಮ್ಮ ದಾಂಪತ್ಯ ಜೀವನದ ಪಯಣಕ್ಕೆ ಪೂರ್ಣ ವಿರಾಮ ಹಾಕಿದ್ದಾರೆ. ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಲ್ಲಿದ್ದ ಈ ದಂಪತಿಗಳು ವಿಚ್ಚೇದನ ಪಡೆಯುವ ನಿರ್ಧಾರ ತೆಗೆದುಕೊಂಡು ಪರಸ್ಪರ ಬೇರೆಯಾಗಿದ್ದಾರೆ.ಜನಪ್ರಿಯ ವೆಬ್ ಸೀರಿಸ್ ಆದ ಫ್ಯಾಮಿಲಿ ಮ್ಯಾನ್ 2 ನಲ್ಲಿ ನಟಿ ಸಮಂತಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.ಈ ಪಾತ್ರದಲ್ಲಿ ನಟಿಸಿದಕ್ಕಾಗಿ ಅವರ ಅಭಿಮಾನಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದರು.ಇದೇ ವಿಚಾರ ನಾಗ ಚೈತನ್ಯ ಮತ್ತು ಸಮಂತಾ ಅವರಿಬ್ಬರ ನಡುವೆ ವೈಮನಸ್ಸಿಗೆ ಕಾರಣವಾಗಿರಬಹುದು ಎಂಬುದ ಹಲವರ ಅನಿಸಿಕೆ ಅಭಿಪ್ರಾಯ.ಇನ್ನೊಂದೆಡೆ ನಟಿ ಸಮಂತಾ ದಿಢೀರ್ ಆಗಿ ತಮ್ಮ ಇನ್ಸ್ಟಾದಲ್ಲಿ ನಾಗ ಚೈತನ್ಯ ಅವರ ಸರ್ ನೇಮ್ ಅಗಿದ್ದ ಅಕ್ಕಿನೇನಿ ಎಂಬುದನ್ನ ತೆಗೆದಾಕಿದ್ದರು.

ಇದು ಇವರಿಬ್ಫರ ದಾಂಪತ್ಯದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದಕ್ಕೆ ಎಡೆ ಮಾಡಿಕೊಟ್ಟಿತ್ತು.ಇದಾದ ಬಳಿಕ ನಟಿ ಸಮಂತಾ ಮತ್ತು ನಾಗ ಚೈತನ್ಯ ಅವರಿಬ್ಬರ ನಡುವೆ ಈ ಬಗ್ಗೆ ಮಾತುಕತೆ ಕೂಡ ನಡೆದಿವೆ ಎನ್ನಲಾಗುತ್ತಿದೆ.ನಾಗ ಚೈತನ್ಯ ಅವರ ತಂದೆ ನಟ ನಾಗಾರ್ಜುನ್ ಅವರ ಹುಟ್ಟುಹಬ್ಬದ ಪಾರ್ಟಿ ಸೇರಿದಂತೆ ಇತರೆ ನಾಗ ಚೈತನ್ಯ ಅವರ ಯಾವುದೇ ಕುಟುಂಬದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದ ನಟಿ ಸಮಂತಾ ಹೈದರಾಬಾದ್ ನಲ್ಲಿರುವ ತಮ್ಮ ಮನೆಯಲ್ಲಿದ್ದಾರೆ.ಇತ್ತ ನಾಗ ಚೈತನ್ಯ ಮತ್ತು ನಟಿ ಸಾಯಿ ಪಲ್ಲವಿ ಅಭಿನಯದ ಲವ್ ಸ್ಟೋರಿ ಸಿನಿಮಾ ತೆರೆಕಂಡಿದ್ದು,ಸಿನಿ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ಪಡೆದುಕೊಂಡಿದೆ.

ಈ ಲವ್ ಸ್ಟೋರಿ ಚಿತ್ರ ನೋಡಿದ ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ನಾಗ ಚೈತನ್ಯ ಅವರಿಗೆ ನೀವು ಸಾಯಿ ಪಲ್ಲವಿ ಅವರನ್ನೇ ಮದುವೆ ಆಗಿ ನಿಮ್ಮಿಬ್ಬರ ಜೋಡಿ ಚೆನ್ನಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.ನೆಟ್ಟಿಗನೊಬ್ಬನ ಈ ಕಮೆಂಟಿಗೆ ಹಲವರು ಲೈಕ್ ಒತ್ತಿದ್ದಾರೆ.ಒಂದೆಡೆ ದಾಂಪತ್ಯ ಜೀವನದಲ್ಲಾದ ಎಡವಟ್ಟಿನಿಂದ ಕಂಗೆಟ್ಟಿರುವ ಈ ಜೋಡಿ ನೋವಿನಲ್ಲಿದ್ದರೆ ಕೆಲವರ ಈ ರೀತಿಯ ಕಮೆಂಟುಗಳು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

Leave a Reply

%d bloggers like this: