ಸಮಂತಾ, ತಮನ್ನಾ ರೀತಿ ನೀವು ಕೂಡಾ ಎಲ್ಲವನ್ನು ತೋರಿಸುತ್ತೀರಾ ಎಂದು ಕೇಳಿದ ನಿರ್ಮಾಪಕನಿಗೆ ಸಾಯಿ ಪಲ್ಲವಿ ಕೊಟ್ಟ ಖಡಕ್ ಉತ್ತರ.. ಕೇಳಿದ್ರೆ ಮೈರೋಮ ಎದ್ದು ನಿಲ್ಲುತ್ತದೆ

ನೀವು ಆ ರೀತಿ ನಟಿಸಿದರೆ ನೀವು ಕೇಳಿದಷ್ಟು ದುಡ್ಡು ಕೊಡುತ್ತೇವೆ ಎಂದ ನಿರ್ಮಾಪಕನಿಗೆ ಈ ಡೀಸೆಂಟ್ ನಟಿ ರಿಯಾಕ್ಷನ್ ಏನು ಗೊತ್ತಾ..! ಬಣ್ಣದ ಲೋಕದಲ್ಲಿ ಕಣ್ಣಿಗೆ ಕಾಣುವಷ್ಟು ಸುಂದರವಾದ ಜನರು ಇರುವುದಿಲ್ಲ. ಹಾಗಂತ ಸಿನಿಮಾದಲ್ಲಿ ಎಲ್ಲಾರು ಕೂಡ ಕೆಟ್ಟವರೇ ಅಂತೇನಿಲ್ಲ. ಅಲ್ಲಿಯೂ ಕೂಡ ಹೃದಯವಂತರು ಮತ್ತು ಸೌಜನ್ಯ ಸಭ್ಯತೆಯ ವ್ಯಕ್ತಿಗಳು ಇರುತ್ತಾರೆ. ಆದರೆ ಯಾರೋ ಒಬ್ಬರು ಮಾಡುವ ದುರ್ವರ್ತನೆ ಇಡೀ ಚಿತ್ರರಂಗವೇ ಕೆಟ್ಟದು ಎಂಬ ಅಭಿಪ್ರಾಯ ಮೂಡಿ ಬಂದು ಬಿಡುತ್ತದೆ. ಕಲಾವಿದರು ಅಂದ ಮೇಲೆ ತಮ್ಮನ್ನು ಹರಸಿ ಬರುವ ಪಾತ್ರಗಳಿಗೆ ಜೀವ ತುಂಬಿ ನಟಿಸಬೇಕಾಗುತ್ತದೆ. ಹಾಗಾದ್ದಲ್ಲಿ ಕಲಾವಿದರಿಗೆ ತಕ್ಕ ಬಹುದಾದ ಗೌರವ ಸಮ್ಮನಗಳು ಲಭಿಸುತ್ತವೆ. ಆದರೆ ಕಲಾವಿದರು ಅಂದ ಮಾತ್ರಕ್ಕೆ ಅದರಲ್ಲಿಯೂ ನಟಿಯರು ಅಂದ ಮೇಲೆ ತಮ್ಮ ಮೈಮಾಟ ತೋರಿಸಿ ನಟಿಸಬೇಕು ಅಂದೇನೀಲ್ಲ.

ತಮ್ಮ ನಟನಾ ಸಾಮರ್ಥ್ಯದಿಂದ ಗೆಲ್ಲಬಹುದು. ಅದೂ ಈಗಾಗಲೇ ನಟಿಯರಿಂದ ನಿರೂಪಿತವಾಗಿದೆ. ಅವರ ಸಾಲಿಗೆ ದಕ್ಷಿಣ ಭಾರತದ ಸುಪ್ರಸಿದ್ದ ನಟಿ ಸಾಯಿ ಪಲ್ಲವಿ ಕೂಡ ಸೇರ್ಪಡೆಯಾಗುತ್ತಾರೆ. ತಮ್ಮ ಸಹಜ ನಟನೆ, ನೃತ್ಯ, ಭಾವನೆಗಳನ್ನ ಸೆಳೆಯುವಂತಹ ನಟನೆಯಿಂದ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ನಟಿ ಸಾಯಿ ಪಲ್ಲವಿ ನಟಿಸಿರುವ ಬಹುತೇಕ ಸಿನಿಮಾಗಳು ಕೌಟಂಬಿಕ, ಪ್ರೀತಿ ಪ್ರೇಮಾಧಾರಿತ ಚಿತ್ರಗಳು. ಹೆಚ್ಚು ಟ್ರೆಡೀಶನಲ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ಸಾಯಿ ಪಲ್ಲವಿ ಅವರು ಬೋಲ್ಡ್ ಆಗಿ ಕಾಣಿಸಿಕೊಂಡಿಲ್ಲ.

ಇತ್ತೀಚೆಗೆ ನಟಿ ಸಾಯಿ ಪಲ್ಲವಿ ಅವರು ಬಾಲಿವುಡ್ ಗೆ ಎಂಟ್ರಿ ನೀಡಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ನಟಿ ಸಾಯಿ ಪಲ್ಲವಿ ಅವರು ತೆಲುಗು, ತಮಿಳು ಮತ್ತು ಮಲೆಯಾಳಂ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ ನಟನೆಯ ಜೊತೆಗೆ ತಮ್ಮ ನೃತ್ಯದಿಂದಾನು ಕೂಡ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ತಮ್ಮ ಸಹಜ ನಟನೆ, ನೃತ್ಯ ಎಲ್ಲದಕ್ಕಿಂತ ಮಿಗಿಲಾಗಿ ತಮ್ಮ ವ್ಯಕ್ತಿತ್ವದ ಮೂಲಕ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ ನಟಿ ಸಾಯಿಪಲ್ಲವಿ.

ಸಾಯಿ ಪಲ್ಲವಿ ದಕ್ಷಿಣ ಭಾರತದ ಸುಪ್ರಸಿದ್ದ ನಟಿಯಾಗಿ ಮಿಂಚುತ್ತಿದ್ದಾರೆ. ಇವರು ಮೂವತ್ತು ವರ್ಷದೊಳಗಿನ ಜನಪ್ರಿಯ ವ್ಯಕ್ತಿಗಳ 2020ರ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಎಂ.ಬಿ.ಬಿ.ಎಸ್. ಪದವೀಧರರಾಗಿರುವ ಸಾಯಿ ಪಲ್ಲವಿ ಅವರು 2015ರಲ್ಲಿ ಮಲೆಯಾಳಂನ ಪ್ರೇಮಂ ಎಂಬ ಚಿತ್ರದಲ್ಲಿ ಮಲಾರ್ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟರು. ಇದಾದ ಬಳಿಕ 2016 ರಲ್ಲಿ ತೆಲುಗಿನ ಕಾಲಿ ಚಿತ್ರದಲ್ಲಿ ನಟಿಸುವ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು ಸಾಯಿ ಪಲ್ಲವಿ. ಇತ್ತೀಚೆಗೆ ನಟಿ ಸಾಯಿ ಪಲ್ಲವಿ ಅವರು ನಾಗಚೈತನ್ಯ ಅವರೊಟ್ಟಿಗೆ ನಟಿಸಿದ ಲವ್ ಸ್ಟೋರಿ ಎಂಬ ಸಿನಿಮಾ ಯಶಸ್ವಿಯಾಯಿತು.

ಇನ್ನು ನಟಿ ಸಾಯಿ ಪಲ್ಲವಿ ಅವರು ಸಿನಿಮಾದ ಕಥೆ ಮತ್ತು ತಮ್ಮ ಪಾತ್ರದ ಬಗ್ಗೆ ಅಪಾರ ಕಾಳಜಿ ವಹಿಸುತ್ತಾರೆ. ಹಾಗಾಗಿ ತನಗೆ ಬೋಲ್ಡ್ ಪಾತ್ರ ಮಾಡಲು ಹೇಳಿದ ನಿರ್ಮಾಪಕನಿಗೆ ಸಾಯಿ ಪಲ್ಲವಿ ನನಗೆ ಸಿನಿಮಾದ ಕಥೆ ಗಟ್ಟಿಯಾಗಿರಬೇಕು. ಅದರಲ್ಲಿ ವಿಷಯ ವಸ್ತು ಉತ್ತಮವಾಗಿದ್ದು, ನನ್ನ ಪಾತ್ರ ಪ್ರಾಮುಖ್ಯ ಹೊಂದಿದ್ದರೆ ನಾನು ನಟಿಸುತ್ತೇನೆ ಅದನ್ನ ಹೊರತು ಪಡಿಸಿ ಕೇವಲ ಮೈಮಾಟ ತೋರಿಸುವಂತಹ ಪಾತ್ರಗಳಲ್ಲಿ ನಟಿಸು ಅಗತ್ಯ ನನಗಿಲ್ಲ ಎಂದು ಉತ್ತರ ನೀಡಿದ್ದಾರಂತೆ.

Leave a Reply

%d bloggers like this: