ಸಮಂತಾ ಮತ್ತು ನಾಗಚೈತನ್ಯ ದಾಂಪತ್ಯ ಜೀವನದಲ್ಲಿ ಬಿರಕು

ದಕ್ಷಿಣ ಭಾರತದ ಖ್ಯಾತ ನಟಿ ತಮ್ಮ ಸಿನಿಮಾಗಳಿಂದ ಮಾತ್ರ ಸುದ್ದಿಯಾಗದೇ, ತಮ್ಮ ವೈಯಕ್ತಿಕ ಬದುಕಿನ ವಿಚಾರವಾಗಿಯೂ ಕೂಡ ಭಾರಿ ಸುದ್ದಿಯಾಗುತ್ತಿದ್ದಾರೆ.ಸಿನಿಮಾ ಸೆಲೆಬ್ರಿಟಿಗಳು ಅಂದಾಕ್ಷಣ ಅವರ ಸಿನಿಮಾಗಳಷ್ಟೇ,ಅವರ ವೈಯಕ್ತಿಕ ಬದುಕಿನ ಬಗ್ಗೆಯೂ ಕೂಡ ಅವರ ಅಭಿಮಾನಿಗಳಿಗೆ ಕುತೂಹಲ ಇರುತ್ತದೆ.ಸ್ಟಾರ್ಸ್ ಬದುಕಿನಲ್ಲಿ ಕೊಂಚ ಏರು ಪೇರಾದರು ಕೂಡ ಅದು ಬಹುಬೇಗ ಸಾರ್ವಜನಿಕವಾಗಿ ಚರ್ಚೆಗೀಡಾಗುತ್ತದೆ.ಅಷ್ಟರ ಮಟ್ಟಿಗೆ ತಮ್ಮ ನೆಚ್ಚಿನ ನಟ-ನಟಿಯರ ಸಿನಿಮಾ ಮತ್ತು ಅವರ ವೈಯಕ್ತಿಕ ಬದುಕಿನ ಬಗ್ಗೆ ಕುತೂಹಲ ಇಟ್ಟು ಕೊಂಡಿರುತ್ತಾರೆ.ಇನ್ನು ಇದೀಗ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಸುದ್ದಿಯಾಗಿರುವ ನಟಿ ಅಂದರೆ ಟಾಲಿವುಡ್ ಮತ್ತು ಕಾಲಿವುಡ್ ನ ಜನಪ್ರಿಯ ನಟಿ ಸಮಂತಾ ಅಕ್ಕಿನೇನಿ.ನಟಿ ಸಮಂತಾ ತೆಲುಗಿನ ಖ್ಯಾತ ನಟರಾದ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ.ನಟ ನಾಗ ಚೈತನ್ಯ ತೆಲುಗು ಚಿತ್ರರಂಗದ ಖ್ಯಾತ ಹಿರಿಯ ನಟರಾದ ನಾಗಾರ್ಜುನ ಅವರ ಪುತ್ರ.

ಈಗ ನಟಿ ಸಮಂತಾ ಅಕ್ಕಿನೇನಿ ಕುಟುಂಬದ ಸೊಸೆಯಾಗಿದ್ದಾರೆ. ಇತ್ತೀಚಿಗೆ ನಟಿ ಸಮಂತಾ ಅವರು ಜನಪ್ರಿಯ ವೆಬ್ ಸೀರಿಸ್ ಆದಂತಹ ಫ್ಯಾಮಿಲಿ ಮ್ಯಾನ್ 2 ನಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದರು.ಆದರೆ ಈ ಪಾತ್ರದ ಬಗ್ಗೆ ತಮಿಳಿನ ಕೆಲವು ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದರು.ಇದಕ್ಕೆ ನಟಿ ಸಮಂತಾ ಕೂಡ ಅವರಲ್ಲಿ ಕ್ಷಮೆಯನ್ನು ಕೂಡ ಕೇಳಿದ್ದರು. ಇದೀಗ ನಟಿ ಸಮಂತಾ ಮತ್ತೆ ಸುದ್ದಿಯಾಗಿರುವುದು ಅಂದರೆ ತಮ್ಮ ತಮ್ಮ ಮಾವರಾದ ನಾಗಾರ್ಜುನ್ ಅವರ ಹುಟ್ಟು ಹಬ್ಬದ ದಿನದಂದು ಗೈರು ಹಾಜರಾಗಿರುವ ವಿಚಾರ. ತೆಲುಗಿನಲ್ಲಿ ಖ್ಯಾತ ನಟ ನಾಗಾರ್ಜುನ್ ಅವರಿಗೆ ಟಾಲಿವುಡ್ ನಲ್ಲಿ ಅಪಾರ ಸ್ನೇಹ ಬಳಗವಿದೆ.

ಅವರ ಜನ್ಮ ದಿನದ ಪ್ರಯುಕ್ತ ಇಡೀ ಟಾಲಿವುಡ್ ಸಿನಿಮಾರಂಗ ನಾಗಾರ್ಜುನ್ ಅವರ ಬರ್ತಡೇ ಪಾರ್ಟಿಯಲ್ಲಿ ಭಾಗವಹಿಸಿ ವಿಶ್ ಮಾಡಿದ್ದಾರೆ.ಆದರೆ ಈ ಸಮಾರಂಭದಲ್ಲಿ ಅಕ್ಕಿನೇನಿ ನಾಗಾರ್ಜುನ ಅವರ ಸೊಸೆಯಾದ ನಟಿ ಸಮಂತಾ ಗೈರು ಹಾಜರಾಗಿದ್ದಾರೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಏಕೆಂದರೆ ಇತ್ತೀಚಿಗೆ ಸಮಂತಾ ಅವರು ತಮ್ಮ ಇನ್ಸ್ಟಾಗ್ರಾಂ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಕ್ಕಿನೇನಿ ಎಂಬುದನ್ನ ತೆಗೆದು ಸಮಂತಾರುತುಪ್ರಭು ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರು.ಈ ಬಗ್ಗೆಯೂ ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಚರ್ಚೆ ಆಗಿತ್ತು.ಇದನ್ನೆಲ್ಲಾ ಗಮನಿಸಿದ ನೆಟ್ಟಿಗರು ನಟ ನಾಗಚೈತನ್ಯ ಮತ್ತು ನಟಿ ಸಮಂತಾ ಅವರ ದಾಂಪತ್ಯದಲ್ಲಿ ಬಿರುಕು ಉಂಟಾಗಿರಬಹುದು ಎಂದು ಅನುಮಾನ ಪಟ್ಟಿದ್ದರು.ಆದರೆ ಇದುವರೆಗೂ ಕೂಡ ಈ ಎಲ್ಲಾ ವಿಚಾರದ ಬಗ್ಗೆ ನಟಿ ಸಮಂತಾ ಸ್ಪಷ್ಟನೆ ನೀಡಿಲ್ಲ.