ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆಯ ಲಗ್ನ ಪತ್ರಿಕೆ! ಅಂತದ್ದೇನಿದೆ ಗೊತ್ತಾ

ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಪೋಸ್ಟ್….! ಸ್ಯಾಂಡಲ್ ವುಡ್ ನಲ್ಲಿ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಅಂದ್ರೆ ಅದು ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್.ಕಿರುತೆರೆಯ ಜನಪ್ರಿಯ ವಾಹಿನಿಯಾದ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಂದ ಗೋಕುಲ ಧಾರಾವಾಹಿಯ ಮೂಲಕ ಬಣ್ಣದ ಜಗತ್ತಿಗೆ ಜೊತೆಯಾಗಿ ಎಂಟ್ರಿ ಕೊಟ್ಟ ಈ ಜೋಡಿ ಬೆಳ್ಳಿ ತೆರೆಗೂ ಕೂಡ ಜೊತೆಯಾಗಿಯೇ ಎಂಟ್ರಿ ಪಡೆದುಕೊಂಡರು.ಹೌದು ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯವಾದ ಈ ಜೋಡಿ ಪರಸ್ಪರ ಪರಿಚಯವಾಗಿದ್ದ ಇವರಿಬ್ಫರ ನಡುವೆ ಸ್ನೇಹ ಬೆಳೆಯಿತು.ತದ ನಂತರದಲ್ಲಿ ಸ್ನೇಹ ಪ್ರೀತಿಗೆ ತಿರುಗಿ 2016 ರಲ್ಲಿ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟರು.ಈ ಜೋಡಿ ಮೊಗ್ಗಿನ ಮನಸ್ಸು,ಡ್ರಾಮಾ,ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ,ಸಂತು ಸ್ಟ್ರೈಟ್ ಫಾರ್ವಾರ್ಡ್ ಸೇರಿ ಒಟ್ಟಾರೆ ನಾಲ್ಕು ಸಿನಿಮಾಗಳಲ್ಲಿ ಜೊತೆಯಾಗಿ ತೆರೆ ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಟ-ನಟಿಯಾಗಿ ಗುರುತಿಸಿಕೊಂಡು,ರೀಲ್ ನಲ್ಲಿ ಕ್ಯುಟ್ ಜೋಡಿಯಾಗಿದ್ದ ಇವರು ರಿಯಲ್ ಲೈಫ್ ನಲ್ಲಿಯೂ ಕೂಡ ಕ್ಯೂಟೆಸ್ಟ್ ಜೋಡಿಯಾಗಿ ಯುವ ಪ್ರೇಮಿಗಳಿಗೆ ಆದರ್ಶ ದಂಪತಿಗಳಾಗಿದ್ದಾರೆ ಯಶ್ ಮತ್ತು ರಾಧಿಕಾ ಪಂಡಿತ್.ಈ ಆದರ್ಶ ದಂಪತಿಗಳಿಗೆ ಆರ್ಥಿಗೊಬ್ಬ,ಕೀರ್ತಿಗೊಬ್ಬಳು ಎಂಬಂತೆ ಐರಾ ಮತ್ತು ಯಥರ್ವ್ ಹೆಸರಿನ ಇಬ್ಬರು ಮುದ್ದು ಮಕ್ಕಳೊಂದಿಗೆ ಸುಂದರ ಬದುಕನ್ನ ನಡೆಸುತ್ತಿರುವ ಯಶ್ ಮತ್ತು ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ.ಆಗಾಗ ತಮ್ಮ ಮಕ್ಕಳೊಂದಿಗೆ ಇರುವ ಕುಟುಂಬ ಸಮೇತ ಫೋಟೋಗಳು ಸೇರಿದಂತೆ ತಮ್ಮ ಪೋಟೋಗಳನ್ನು ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ಇತ್ತೀಚೆಗಷ್ಟೇ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದುಬೈ ದೇಶಕ್ಕೆ ಪ್ರವಾಸ ಹೋಗಿದ್ದರು.ಅಲ್ಲೊಂದಷ್ಟು ಪ್ರಸಿದ್ದ ಸ್ಥಳಗಳಿಗೆ ಭೇಟಿ ನೀಡಿ ಜೊತೆಯಾಗಿ ಫೋಟೋ ತೆಗೆಸಿಕೊಂಡಿದ್ದರು.ಅದರಲ್ಲಿ ಯಶ್ ಅವರು ಸಿಂಹಕ್ಕೆ ಆಹಾರ ನೀಡುತ್ತಿದ್ದ ಫೋಟೋ ಅಂತೂ ಸಖತ್ ವೈರಲ್ ಆಗಿತ್ತು.ಅದರಂತೆ ಇತ್ತಿಚೆಗೆ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗಳ ಮದುವೆಯ ಆಮಂತ್ರಣ ಲಗ್ನ ಪತ್ರಿಕೆಯ ಫೋಟೋವೊಂದು ವೈರಲ್ ಆಗಿದೆ.ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರಿಬ್ಬರ ಲಗ್ನ ಪತ್ರಿಕೆಯ ಫೋಟೋ ನೋಡಿ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

%d bloggers like this: