ಸಾಮಾಜಿಕ ಜಾಲತಾಣದಲ್ಲಿ ಒಂದೇ ಒಂದು ಪೋಸ್ಟ್ ಹಾಕಿದರೆ ವಿರಾಟ್ ಕೊಹ್ಲಿ ಅವರಿಗೆ ಇಷ್ಟು ಹಣ ಸಿಗುತ್ತದೆ

ಇತ್ತೀಚೆಗೆ ಕೆಲವು ವರ್ಷಗಳಿಂದೀಚೆಗೆ ಸೋಶಿಯಲ್ ಮೀಡಿಯಾ ಎಂಬುವುದು ಜನರ ಅವಿಭಾಜ್ಯ ಅಂಗ ಅಥವಾ ಮನುಷ್ಯನ ಮೂಲಭೂತ ಸೌಕರ್ಯಗಳಲ್ಲಿ ಇದೂ ಕೂಡ ಒಂದು ಎಂಬಂತೆ ಇದೆ. ಅಷ್ಟರ ಮಟ್ಟಿಗೆ ಇಂದಿನ ಯುವ ಸಮೂಸ ಸೋಶಿಯಲ್ ಮೀಡಿಯಾಗಳಿಗೆ ಅಡಿಕ್ಟ್ ಆಗಿದ್ದಾರೆ. ಈ ಸೋಶಿಯಲ್ ಮೀಡಿಯಾ ಕೆಲವರಿಗೆ ಟೈಮ್ ಪಾಸ್ ಮಾಡೋದಕ್ಕೆ. ಇನ್ನೊಂದಷ್ಟು ಜನರಿಗೆ ಜಸ್ಟ್ ಫಾರ್ ಎಂಟರ್ಟೈನ್ ಮೆಂಟ್. ಅದೇ ಈ ಸೋಶಿಯಲ್ ಮೀಡಯಾ ಕೆಲವರಿಗೆ ಆದಾಯ ಮಾಡುವ ಒಂದು ಉತ್ತಮ ವೇದಿಕೆ ಆಗಿದೆ. ಈ ಸೋಶಿಯಲ್ ಮೀಡಿಯಾಗಳಿಂದ ಕೋಟ್ಯಾಂತರ ರುಪಾಯಿ ಆದಾಯ ಮಾಡುವ ಜನರನ್ನ ನೋಡಿದ್ರೆ ನೀವು ನಿಜಕ್ಕೂ ಕೂಡ ಅಚ್ಚರಿ ಪಡುತ್ತೀರಿ.

ಹೌದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಯಾಯಿಗಳನ್ನ ಹೆಚ್ಚು ಮಾಡಿಕೊಂಡು ಇದರ ಮೂಲಕ ಅನೇಕ ಪ್ರತಿಭಾವಂತರು ತಾವು ಆದಾಯ ಗಳಿಸುವ ಪ್ಲಾಟ್ ಫಾರ್ಮ್ ಆಗಿ ಪರಿವರ್ತನೆ ಮಾಡಿಕೊಂಡಿದ್ದಾರೆ. ಹೌದು ಅದರಲ್ಲಿ ಈ ಸಿನಿಮಾ ಸೆಲೆಬ್ರಿಟಿಗಳು ಮತ್ತು ಕ್ರಿಕೆಟ್ ಕ್ಷೇತ್ರದ ಸ್ಟಾರ್ ಆಟಗಾರರು ಸಿಂಹಪಾಲು ಅಂತ ಹೇಳಬಹುದು. ಫೇಸ್ ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಈ ಮೂರು ಸೋಶಿಯಲ್ ಮೀಡಿಯಾಗಳು ಸದ್ಯಕ್ಕೆ ಭಾರಿ ಸಂಚಲನ ಮೂಡಿಸುತ್ತಿವೆ. ಅದರಲ್ಲಿಯೂ ಈ ಇನ್ಸ್ಟಾ ಗ್ರಾಮ್ ಮಾತ್ರ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಅದರಂತೆ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಜಾಹೀರಾತು ಪ್ರಚಾರ ಮಾಡುವುದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.

ಕಳೆದ ವರ್ಷ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ತಾವು ವಸ್ತುವೊಂದನ್ನ ಪ್ರಚಾರ ಮಾಡುವುದಕ್ಕೆ ಬರೋಬ್ಬರಿ ಐದು ಕೋಟಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಈ ವರ್ಷ ವಿರಾಟ್ ಕೊಹ್ಲಿ ಒಂದು ಜಾಹೀರಾತು ಪೋಸ್ಟಿಗೆ ಸರಿ ಸುಮಾರು 8.70ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಈ ರೀತಿ ಇನ್ಸ್ಟಾಗ್ರಾಮ್ ಮೂಲಕ ಆದಾಯ ಗಳಿಸುತ್ತಿರುವ ಸೆಲೆಬ್ರಿಟಿಗಳ ಪೈಕಿ ವಿಶ್ವದ ರ್ಯಾಂಕಿಂಗ್ ನಲ್ಲಿ ಕೊಹ್ಲಿ ಅವರು ಕಳೆದ ವರ್ಷ 18ನೇ ಸ್ಥಾನವನ್ನ ಪಡೆದುಕೊಂಡಿದ್ದರು. ಈ ವರ್ಷ ಹದಿನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ. ಇನ್ನು ಸದ್ಯಕ್ಕೆ ವಿರಾಟ್ ಕೊಹ್ಲಿ ಟೆಸ್ಕ್ ಸರಣಿ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ಆದರೆ ಹೋಪ್ಪರ್ ಎಚ್ ಕ್ಯೂ 2022ರ ಇನ್ಸ್ಟಾಗ್ರಾಮ್ ಶ್ರೀಮಂತರ ಪಟ್ಟಿಯಲ್ಲಿ ಮಾತ್ರ ವಿರಾಟ್ ಕೊಹ್ಲಿ ಟಾಪ್ ಸ್ಥಾನದಲ್ಲಿ ಇದ್ದಾರೆ.

Leave a Reply

%d bloggers like this: