ಸಲ್ಮಾನ್ ಖಾನ್ ನ 2300 ಕೋಟಿ ಆಸ್ತಿಗೆ ವಾರುಸದಾರ ಯಾರು ಗೊತ್ತಾ? ಮಕ್ಕಳು ಇಲ್ಲ, ಹೆಂಡತಿ ಇಲ್ಲ, ಹಾಗಾದರೆ ಯಾರಿಗೆ ಸಿಗತ್ತೆ ಗೊತ್ತಾ

ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸ್ಟಾರ್ ನಟ ಸಲ್ಮಾನ್ ಖಾನ್ 55 ವರ್ಷ ವಯಸ್ಸು ಪೂರ್ಣವಾಗಿದ್ದರು ಕೂಡ ಇನ್ನು ಸಹ ಮದುವೆ ಆಗದೇ ಬ್ಯಾಚ್ಯೂಲರ್ ಆಗಿಯೇ ಉಳಿದುಕೊಂಡಿದ್ದಾರೆ. ಇವರ ಅಪಾರ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಯಾವಾಗ ಮದುವೆ ಆಗುತ್ತಾರೆ ಎಂದು ಕಾಯುತ್ತಿದ್ದಾರೆ.ಆದರೆ ಅವರಿಗೆ ಈಗಾಗಲೇ 55 ವರ್ಷ ವಯಸ್ಸಾಗಿರುವ ಕಾರಣ ಇನ್ನು ಮದುವೆ ಆಗುವ ಸಾಧ್ಯತೆ ಬಹುತೇಕ ಕಡಿಮೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.ಬಾಲಿವುಡ್ ಬಹು ಬೇಡಿಕೆಯ ಸೂಪರ್ ಸ್ಟಾರ್ ನಟನಾಗಿರುವ ನಟ ಸಲ್ಮಾನ್ ಖಾನ್ ತಮ್ಮ ಫಿಟ್ ನೆಸ್,ಡ್ಯಾನ್ಸ್,ಫೈಟ್ ನಟನೆಯ ಮೂಲಕ ಅತಿ ಹೆಚ್ಚು ಫೀಮೇಲ್ ಫ್ಯಾನ್ ಹೊಂದಿದ್ದಾರೆ.ಅಷ್ಟೇ ಪ್ರಮಾಣದ ಮೇಲ್ ಫ್ಯಾನ್ಸ್ ಫಾಲೋಯಿಂಗ್ ಕೂಡ ಹೊಂದಿರುವ ನಟ ಸಲ್ಮಾನ್ ಖಾನ್ ತನ್ನ ಜನಪ್ರಿಯತೆಗೆ ತಕ್ಕಂತೆ ಸಖತ್ ಸುದ್ದಿಯಲ್ಲಿರುತ್ತಾರೆ.

ಕೋವಿಡ್ ಸಂಕಷ್ಟದ ಸಂಧರ್ಭದಲ್ಲಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ಸಲ್ಲು ಬಾಯ್ ಸ್ವತಃ ತಾವೇ ಕೋವಿಡ್ ನಿಂದ ಕಷ್ಟದಲ್ಲಿದ್ದವರಿಗೆ ಕಿಟ್ ನೀಡಿ ನೆರವಾಗಿದ್ದರು. ಸಿನಿಮಾವೊಂದಕ್ಕೆ ನಟ ಸಲ್ಮಾನ್ ಖಾನ್ ಬರೋಬ್ಬರಿ ಐವತ್ತರಿಂದ ಅರವತ್ತು ಕೋಟಿ ಸಂಭಾವನೆ ಪಡೆಯುತ್ತಾರೆ.ಅದಲ್ಲದೆ ವಿವಿಧ ಕಡೆ ಬಂಡವಾಳ ಹೂಡಿಕೆ ಮಾಡಿ ಲಾಭಾಂಶವನ್ನು ಸಹ ಪಡೆಯುತ್ತಾರೆ. ಮೂಲಗಳ ಪ್ರಕಾರ ಅವರು ಸರಿ ಸುಮಾರು ಎರಡುವರೆ ಸಾವಿರ ಕೋಟಿ ಒಡೆಯರಂತೆ. ಇಷ್ಟೆಲ್ಲಾ ಆಸ್ತಿ ಹೊಂದಿರುವ ನಟ ಸಲ್ಮಾನ್ ಖಾನ್ ಇನ್ನು ಕೂಡ ಮದುವೆ ಆಗಿಲ್ಲದಿದುರ ಕಾರಣ ಮಾತ್ರ ಅವರಿಗಷ್ಟೇ ಗೊತ್ತು. ನಟ ಸಲ್ಮಾನ್ ಖಾನ್ ಐಶ್ವರ್ಯ ರೈ ಅವರನ್ನ ಪ್ರೀತಿಸುತ್ತಿದ್ದರು.

ಆದರೆ ಇವರಿಬ್ಬರ ಪ್ರೀತಿ ಬ್ರೇಕ್ ಆಪ್ ಆಗಿ ಐಶ್ವರ್ಯ ರೈ ಅಮಿತಾಬ್ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್ ಅವರನ್ನ ಮದುವೆ ಆಗುತ್ತಾರೆ. ಇದಾದ ಬಳಿಕ ಸಲ್ಮಾನ್ ಖಾನ್ ಅವರೊಟ್ಟಿಗೆ ಅನೇಕ ಸ್ಟಾರ್ ನಟಿಯರ ಹೆಸರು ಕೇಳಿ ಬರುತ್ತದೆ. ಆದರೆ ಯಾರ ನಟಿಯ ಜೊತೆಗೂ ಕೂಡ ಸಲ್ಮಾನ್ ಖಾನ್ ಮತ್ತೆ ಪ್ರೀತಿ,ಪ್ರೇಮ ಎಂದು ಹೋಗಲಿಲ್ಲ. ನಟ ಸಲ್ಮಾನ್ ಖಾನ್ ಅವರೇ ಹೇಳಿರುವಂತೆ ಅವರು ಮದುವೆ ಆದರೂ ಕೂಡ ತಮ್ಮ ಆಸ್ತಿಯಲ್ಲಿ ಅರ್ಧ ಭಾಗದಷ್ಟು ಆಸ್ತಿಯು ಟ್ರಸ್ಟ್ ಗಳಿಗೆ ಹೋಗುತ್ತದೆಯಂತೆ.ಒಂದು ವೇಳೆ ಸಲ್ಮಾನ್ ಖಾನ್ ಮದುವೆ ಆಗದೇ ಹೋದರೂ ಕೂಡ ತಮ್ಮ ಆಸ್ತಿಯು ಸಂಪೂರ್ಣವಾಗಿ ಟ್ರಸ್ಟ್ ಗೆ ಸೇರಲಿದೆ ಎಂದು ತಿಳಿಸಿದ್ದಾರೆ.