ಸಲ್ಮಾನ್ ಖಾನ್ ಅವರ ಹೊಸ ಬುಲೆಟ್ ಪ್ರೂಫ್ ಕಾರಿನ ಬೆಲೆ ಎಷ್ಟು ಗೊತ್ತಾ

ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅವರಿಗೆ ಪ್ರಾಣ ಬೆದರಿಕೆ ಇದೆ ಎಂದು ಗೊತ್ತಾದ ನಂತರ ಅವರು ಸಾಕಷ್ಟು ಎಚ್ಚರಿಕೆಯಿಂದ ಇದ್ದಾರೆ. ಹಾಗಾಗಿಯೇ ನಟ ಸಲ್ಮಾನ್ ಖಾನ್ ಅವರು ಎಲ್ಲಿಯೂ ಕೂಡ ಅನಗತ್ಯವಾಗಿ ಓಡಾಡುತ್ತಿಲ್ಲ. ಅದಲ್ಲದೆ ಮುಖ್ಯವಾದ ಕಾರ್ಯಕ್ರಮಗಳನ್ನ ಹೊರತುಪಡಿಸಿ ಯಾವುದೇ ರೀತಿಯ ಸಿನಿಮಾ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದಿರಲು ನಿರ್ಧಾರ ಮಾಡಿದ್ದಾರೆ. ಇನ್ನು ಟೈಗರ್3 ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು ನಟ ಸಲ್ಮಾನ್ ಖಾನ್ ಅವರು ಹೊಸದಾಗಿ ಖರೀದಿ ಮಾಡಿರುವ ಬುಲೆಟ್ ಪ್ರೂಫ್ ಕಾರಿನಲ್ಲಿಯೇ ಶೂಟಿಂಗ್ ಹೋಗುತ್ತಿದ್ದಾರೆ. ಇದೀಗ ಬಾಲಿವುಡ್ ನಲ್ಲಿ ಎಲ್ಲಾ ವಿಚಾರಗಳಿಗಿಂತ ಹೆಚ್ಚಾಗಿ ಸಲ್ಮಾನ್ ಖಾನ್ ಖರೀದಿಸಿರುವ ಬುಲೆಟ್ ಪ್ರೂಫ್ ಕಾರಿನ ಬಗ್ಗೆಯೇ ಸುದ್ದಿಯಾಗಿದೆ.

ಸಲ್ಮಾನ್ ಖಾನ್ ಅವರ ಬಳಿ ಅನೇಕ ಐಷಾರಾಮಿ ದುಬಾರಿ ಕಾರುಗಳಿವೆ. ಆದರೆ ಅವೆಲ್ಲವಗಳಿಗಿಂತ ತನ್ನ ಪ್ರಾಣ ರಕ್ಷಣೆಗಾಗಿ ಖರೀದಿ ಮಾಡಿರುವ ಈ ಕಾರು ಅನೇಕ ಅಡ್ವಾನ್ಸ್ ಅತ್ಯಾಧುನಿಕ ಫೀಚರ್ಸ್ ಗಳನ್ನ ಹೊಂದಿರುವ ಕಾರ್ ಆಗಿದೆಯಂತೆ. ಸಲ್ಮಾನ್ ಖಾನ್ ಅವರು ಖರೀದಿಸಿರುವುದು ಟೊಯೊಟೋ ಲ್ಯಾಂಡ್ ಕ್ರೂಸ್ ಎಸ್ಯುವಿ ಬುಲೆಟ್ ಪ್ರೂಫ್ ಕಾರು. ಈ ಕಾರಿನ ಬೆಲೆ ಬರೋಬ್ಬರಿ ಒಂದೂವರೆ ಕೋಟಿಯಿಂದ ಎರಡು ಕೋಟಿ ಎಂದು ತಿಳಿದುಬಂದಿದೆ. ಇದ್ದಕಿದ್ದಂತೆ ಸಲ್ಮಾನ್ ಖಾನ್ ಅವರು ಈ ವಿಶೇಷ ಕಾರನ್ನ ಕೊಳ್ಳುವುದಕ್ಕೆ ಪ್ರಮುಖ ಕಾರಣ ಅಂದರೆ ಇತ್ತೀಚೆಗೆ ಪಂಜಾಬಿನ ಗಾಯಕ ಸಿಧು ಅವರನ್ನ ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಇದು ನಿಜಕ್ಕೂ ಕೂಡ ಆಘಾತಕಾರಿಯಾಗಿತ್ತು.

ಇದು ಸಲ್ಮಾನ್ ಖಾನ್ ಅವರಿಗೆ ಮುನ್ನೆಚ್ಚರಿಕೆ ಆಗಿದೆ. 2018ರಿಂದ ಕೂಡ ಲಾರೆನ್ಸ್ ಗ್ಯಾಂಗ್ ಅವರು ಸಲ್ಮಾನ್ ಖಾನ್ ಅವರನ್ನ ಹತ್ಯೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಅದಲ್ಲದೆ ಸಲ್ಲುಗೆ ಈಗಾಗಲೇ ಕೊಲೆ ಬೆದರಿಕೆಯ ಪತ್ರಗಳು ಬಂದಾಗಿನಿಂದ ಸಲ್ಮಾನ್ ಖಾನ್ ಅವರು ಕೂಡ ಕೊಂಚ ಜಾಗೃತರಾಗಿದ್ದು ತಮ್ಮ ಆತ್ಮ ರಕ್ಷಣೆಯ ಕಡೆ ಗಮನ ವಹಿಸಿದ್ದಾರೆ. ಅದರ ಜೊತೆಗೆ ಇತ್ತೀಚೆಗೆ ಮುಂಬೈ ಪೊಲೀಸ್ ಆಯುಕ್ತರನ್ನ ಭೇಟಿ ಮಾಡಿ ವಿಶೇಷ ಪಿಸ್ತೂಲ್ ಇಟ್ಟುಕೊಳ್ಳಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿ ಬಂದಿದ್ದರು. ಇದೀಗ ಸಲ್ಮಾನ್ ಖಾನ್ ಅವರು ಎಲ್ಲೇ ಹೋದರು ಕೂಡ ತಮ್ಮ ಬುಲೆಟ್ ಫ್ರೂಫ್ ಕಾರಿನಲ್ಲಿಯೇ ಓಡಾಡುತ್ತಿದ್ದಾರೆ.

Leave a Reply

%d bloggers like this: