ಸಲ್ಮಾನ್ ಖಾನ್ 14 ದಿನಗಳ BIGBOSS ಸಂಭಾವನೆಯಲ್ಲಿ ಕನ್ನಡ ಬಿಗ್ ಬಾಸ್ 4 ಸೀಸನ್ ಗಳೇ ಮಾಡಬಹುದು

ಭಾರತೀಯ ಕಿರುತೆರೆ ರಂಗದ ಅತ್ಯಂತ ದೊಡ್ಡ ಜನಪ್ರಿಯ ರಿಯಾಲಿಟಿ ಶೋ ಅಗಿರುವ ಹಿಂದಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಿರೂಪಕರು ಪಡೆಯುವಂತಹ ಸಂಭಾವನೆ ನಿಜಕ್ಕೂ ಕೂಡ ಎಲ್ಲರನ್ನ ದಂಗಾಗಿಸುತ್ತದೆ.ಹೌದು ಈ ಶೋನಲ್ಲಿ ನಿರೂಪಣೆ ಮಾಡುವ ನಿರೂಪಕರಿಗೆ ಪ್ರತಿ ಸೀಸನ್ ನಲ್ಲಿಯೂ ಕೂಡ ಏರಿಕೆ ಅಗುತ್ತಲೆ ಇರುತ್ತದೆ. ಆದರೆ ಕಳೆದ 11 ಸೀಸನ್ ಗಳಿಂದ ಹಿಂದಿ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವ ಬಾಲಿವುಡ್ ಬಾಕ್ಸಾಫಿಸ್ ಸುಲ್ತಾನ್ ಸಲ್ಮಾನ್ ಖಾನ್ ಈ ಬಾರಿ ಬಿಗ್ ಬಾಸ್ ಸೀಸನ್ ನಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಹಿಂದಿಯ ಬಿಗ್ ಬಾಸ್ ಕಾರ್ಯಕ್ರಮ ಆರಂಭದ 3 ಆವೃತ್ತಿಗಳಲ್ಲಿ ನಿರೂಪಕರಾಗಿ
ಹರ್ಷದ್ ವಾರ್ಸಿ ಬಿಗ್ -ಬಿ ಅಮಿತಾಭ್ ಬಚ್ಚನ್ ಮತ್ತು ನಟಿ ಶಿಲ್ಪಾ ಶೆಟ್ಟಿ ‌ಕೂಡ ಈ ಶೋ ವನ್ನು ನಡೆಸಿಕೊಡುತ್ತಿದ್ದರು.

ತದ ನಂತರ ಹಿಂದಿಯ ಬಿಗ್ ಬಾಸ್ ಸೀಸನ್ 4 ರಿಂದ ನಿರಂತರವಾಗಿ ನಿರೂಪಣೆ ಮಾಡಿಕೊಂಡು ಬರುತ್ತಿರುವ ನಟ ಸಲ್ಮಾನ್ ಖಾನ್ ರವರಿಗೆ 4 ನೇ ಸೀಸನ್ ನಲ್ಲಿ ವಾರವೊಂದಕ್ಕೆ ಎರಡೂವರೆ ಕೋಟಿ ರೂ ಸಂಭಾವನೆ ನೀಡುತ್ತಿದ್ದರು.ತದ ನಂತರ ಪ್ರಸಾರವಾದ ಪ್ರತಿ ಸೀಸನ್ ನಲ್ಲಿಯೂ ಸಲ್ಮಾನ್ ಖಾನ್ ಅವರ ಸಂಭಾವನೆ ಏರಿಕೆ ಯಾಗುತ್ತಿದೆ. ಅಂತೆಯೇ ಸೀಸನ್ 13 ಕ್ಕೆ ನಟ ಸಲ್ಮಾನ್ ಖಾನ್ ಬರೊಬ್ಬರಿ 15 ಕೋಟಿ ರೂ ಪಡೆದಿದ್ದರು.ಇದೀಗ ಹಿಂದಿಯ ಬಿಗ್ ಬಾಸ್ 14 ನೇ ಆವೃತ್ತಿಯು ಪೂರ್ಣವಾಗಿದೆ. ಈ ಬಿಗ್ ಬಾಸ್ ಸೀಸನ್ 14 ರಲ್ಲಿ ಹಿಂದಿ ಕಿರುತೆರೆಯ ಜನಪ್ರಿಯ ನಟಿಯಾದಂತಹ ರುಬೀನಾ ದಿಲೈಕ್ ಸೀಸನ್ ೧೪ ರ ಟ್ರೋಫಿ ಮತ್ತು ಬಹುಮಾನದ ಮೊತ್ತವನ್ನು ಎತ್ತಿ ಹಿಡಿದಿದ್ದರು.ಇದೀಗ ಹಿಂದಿ ಬಿಗ್ ಬಾಸ್ ಸೀಸನ್ 15 ರ ಆವೃತ್ತಿಯು ಆರಂಭಗೊಳ್ಳಲು ಸಿದ್ದವಾಗಿದೆ.

ಇದರ ನಡುವೆ ಇದೀಗ ಬಾರಿ ಸುದ್ದಿ ಯಾಗುತ್ತಿರುವುದು ನಟ ಸಲ್ಮಾನ್ ಖಾನ್.ಹೌದು, ಬಿಗ‌್ ಬಾಸ್ ಸೀಸನ್ 4 ರಿಂದ 14 ರ ವರಗೆ ಪಡೆದಕ್ಕಿಂತ ಹೆಚ್ಚು ಸಂಭಾವನೆ ಇದೀಗ ಸಲ್ಮಾನ್ ಖಾನ್ ಪಡೆಯುತ್ತಿದ್ದಾರೆ. ಬಿಗ್ ಬಾಸ್ ಸೀಸನ್15 ರಲ್ಲಿ ನಟ ಸಲ್ಮಾನ್ ಖಾನ್ ವಾರವೊಂದಕ್ಕೆ ಬರೊಬ್ಬರಿ 25 ಕೋಟಿ ರೂ.ಗಳನ್ನು ಪಡೆಯುತ್ತಿದ್ದಾರೆ.ಹೀಗೆ ಒಟ್ಟಾರೆಯಾಗಿ ಬಿಗ್ ಬಾಸ್ ಸೀಸನ್ ೧೫ ರ ನಿರೂಪಣೆಗಾಗಿ 14 ವಾರಗಳಿಗೆ ಬರೊಬ್ಬರಿ 350 ಕೋಟಿ ರೂ.ಗಳನ್ನು ಸಂಭಾವನೆ ರೂಪದಲ್ಲಿ ಪಡೆಯುತ್ತಿದ್ದಾರೆ. ಸದ್ಯಕ್ಕೆ ನಟ ಸಲ್ಮಾನ್ ಖಾನ್ ಅವರು ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಕನ್ನಡ ಬಿಗ್ ಬಾಸ್ ಇಡೀ ಸೀಸನ್ ಗೆ 90 ಕೋಟಿ ಕೊಡಲಾಗುತ್ತದೆ. ಸಲ್ಮಾನ್ ಖಾನ್ ಅವರ ನಾಲ್ಕು ಎಪಿಸೋಡ್ ನ ಸಂಭಾವನೆ ಕಿಚ್ಚ ಸುದೀಪ್ ಅವರು ಇಡೀ ಸೀಸನ್ ಪಡೆಯುತ್ತಾರೆ.

Leave a Reply

%d bloggers like this: