ಸೈನಿಕರು ತರಬೇತಿ ಪಡೆಯುವ ಸ್ಥಳಕ್ಕೆ ಬಾಲಿವುಡ್ ನಟಿಯ ಹೆಸರಿಟ್ಟ ಭಾರತೀಯ ಸೇನೆ

ಭಾರತೀಯ ಸೇನೆಯಿಂದ ಬಾಲಿವುಡ್ ಖ್ಯಾತ ನಟಿಗೆ ಒಲಿದ ಅತ್ಯುನ್ನತ ಗೌರವ ದೊರೆತಿದೆ.ಹೌದು ಭಾರಿತೀಯ ಚಿತ್ರರಂಗದಲ್ಲಿ ತನ್ನ ಬೋಲ್ಡ್ ನಟನೆಯಿಂದ ಜನಪ್ರಿಯತೆ ಪಡೆದಿರುವ ವಿದ್ಯಾಬಾಲನ್ ಅವರ ಕಲಾಸೇವೆಗೆ ಗೌರವಿಸಿ ಗುಲ್ಮಾರ್ಗ್ನಲ್ಲಿರುವ ಮಿಲಿಟರಿ ಫೈರಿಂಗ್ ರೇಂಜ್ ಗೆ ವಿದ್ಯಾಬಾಲನ್ ಅವರ ಹೆಸರನ್ನು ಸೂಚಿಸಲಾಗಿದೆ.ಕೆಲವು ದಿನಗಳ ಹಿಂದೆ ವಿದ್ಯಾಬಾಲನ್ ಅವರಿಗೆ ಆಸ್ಕರ್ ಆಡಳಿತ ಮಂಡಳಿಯ ಅಕಾಡೆಮೆ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಸೈನ್ಸ್ ನಲ್ಲಿ ಕಾರ್ಯ ನಿರ್ಮಾಪಕ ಸದಸ್ಯರ ಹೊಸ ಬ್ಯಾಚ್ ಗೆ ನಿರ್ಮಾಪಕರಾದ ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್ ಜೊತೆಗೆ ನಟಿ ವಿದ್ಯಾಬಾಲನ್ ಅವರನ್ನು ಆಯ್ಕೆ ಮಾಡಲಾಗಿತ್ತು. ವಿದ್ಯಾಬಾಲನ್ ಮುಖ್ಯ ಭೂಮಿಕೆಯಲ್ಲಿ ತೆರೆಕಂಡ ಶೆರ್ನಿ ಸಿನಿಮಾ ಓಟಿಟಿ ವೇದಿಕೆ ಅಮೇಜನ್ ನಲ್ಲಿ ಬಿಡುಗಡೆಯಾಗಿ ಜನ ಮೆಚ್ಚುಗೆ ಪಡೆದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಶೆರ್ನಿ ಚಿತ್ರದಲ್ಲಿ ವಿದ್ಯಾಬಾಲನ್ ಅರಣ್ಯ ಅಧಿಕಾರಿ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಇದಾದ ಬಳಿಕ ವಿದ್ಯಾಬಾಲನ್ ಅವರು ನಿರ್ದೇಶಕ ಸುರೇಶ್ ತ್ರಿವೇಣಿ ಅವರ ನಿರ್ದೇಶನದಲ್ಲಿ ತುಮ್ಹಾರಿಸುಲು ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ.ಇದರ ನಡುವೆ ಭಾರತೀಯ ಸೇನೆಯು ಕಾಶ್ಮೀರದಲ್ಲಿ ಆಯೋಜನೆ ಮಾಡಿದ್ದ ಗುಲ್ಮಾರ್ನ್ಗ್ ಎಂಟರ್ ಫೆಸ್ಟಿವಲ್ ನಲ್ಲಿ ವಿದ್ಯಾಬಾಲನ್ ತಮ್ಮ ಪತಿ ಸಿದ್ದಾರ್ಥ್ ರಾಯ್ ಕಪೂರ್ ಅವರೊಂದಿಗೆ ಪಾಲ್ಗೊಂಡಿದ್ದರು.ಭಾರತೀಯ ಚಿತ್ರರಂಗಕ್ಕೆ ವಿದ್ಯಾಬಾಲನ್ ಅವರ ಕಲಾಸೇವೆಯ ಕೊಡುಗೆ ಅಪಾರ. ಸಿನಿರಂಗದಲ್ಲಿ ಇವರ ಸೇವೆಯನ್ನು ಗೌರವಿಸಿ ಭಾರತೀಯ ಸೇನೆಯು ಸೈನಿಕರು ಫೈರಿಂಗ್ ತರಬೇತಿ ಪಡೆಯುವ ಸ್ಥಳಕ್ಕೆ ವಿದ್ಯಾಬಾಲನ್ ಅವರ ಹೆಸರನ್ನು ನಾಮಕರಣ ಮಾಡಿದೆ.ಈ ವಿಚಾರ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಸುದ್ದಿಯಾಗಿದ್ದು,ವಿದ್ಯಾಬಾಲನ್ ಅವರಿಗೆ ಅವರ ಅಭಿಮಾನಿಗಳು ಮತ್ತು ಬಾಲಿವುಡ್ ಸಿನಿ ದಿಗ್ಗಜರುಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

Leave a Reply

%d bloggers like this: