ಸಾಯಿ ಪಲ್ಲವಿ ಅವರ ಹೊಸ ಚಿತ್ರದ ಅಭಿನಯಕ್ಕೆ ಮನಸೋತ ಪ್ರೇಕ್ಷಕರು

ಸಿನಿಮಾ ಅಂದ್ಮೇಲೆ ಸೋಲು ಗೆಲವು ಸರ್ವೇ ಸಾಮಾನ್ಯ. ಒಂದು ಸಿನಿಮಾ ಸೋತರೆ ಮತ್ತೊಂದು ಗೆಲ್ಲುತ್ತೆ. ಆದ್ರೇ ಈ ಸಿನಿಮಾಗಳು ಸೋಲು ಗೆಲವು ಅನ್ನೋದರ ಮೇಲೆ ಆ ಕಲಾವಿದರ ಚಾರ್ಮ್ ಉಳಿದುಕೊಳ್ಳುತ್ತದೆ. ಕೆಲವು ನಟ ನಟಿಯರಿಗೆ ಸಿನಿಮಾ ಸೋತರೆ ಅದು ಅವರ ಭವಿಷ್ಯಕ್ಕೆ ಬುನಾದಿ ನೀಡುತ್ತದೆ. ಆದರೆ ದಕ್ಷಿಣ ಭಾರತದ ಈ ಸುಪ್ರಸಿದ್ದ ನಟಿಗೆ ಸಿನಿಮಾ ಗೆಲ್ಲಲಿ ಅಥವಾ ಸೋಲಲಿ ಅವರ ಚಾರ್ಮ್ ಮಾತ್ರ ಬೀಳಲ್ಲ. ಆ ನಟಿ ಬೇರಾರು ಅಲ್ಲ. ನ್ಯಾಚುರಲ್ ಸ್ಮೈಲ್ ಬ್ಯೂಟಿ ಅಂತಾನೇ ಕರೆಸಿಕೊಳ್ಳುವ ನಟಿ ಸಾಯಿ ಪಲ್ಲವಿ. ನಟಿ ಸಾಯಿ ಪಲ್ಲವಿ ಅವರ ನಟನೆಯ ವಿರಾಟ ಪರ್ವಂ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೆ ಇದೀಗ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಹೊರ ಹೊಮ್ಮಿದ ಗಾರ್ಗಿ ಚಿತ್ರದ ಮೂಲಕ ಅಪಾರ ಮೆಚ್ಚುಗೆ ಪಡೆದುಕೊಂಡು ಯಶಸ್ವಿಯಾಗಿದ್ದಾರೆ.

ಮಧ್ಯಮ ವರ್ಗದ ಜನ ಜೀವನದಲ್ಲಿ ಮಹಿಳೆಗೆ ಎದುರಾಗುವ ಅನೇಕ ಸವಾಲು ಸಂಘರ್ಷಗಳನ್ನು ನಿಭಾಯಿಸುವ ಪಾತ್ರದಲ್ಲಿ ನಟಿ ಸಾಯಿ ಪಲ್ಲವಿ ಅವರು ಮನೋಜ್ಞವಾಗಿ ನಟಿಸುವ ಮೂಲಕ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಗಾರ್ಗಿ ಸಿನಿಮಾ ನೋಡಿದ ಪ್ರತಿಯೊಬ್ಬರು ಕೂಡ ನಟಿ ಸಾಯಿ ಪಲ್ಲವಿ ಅವರ ನಟನೆ ಮೆಚ್ಚಿ ಹೊಗಳಿಕೆ ಮಾತುಗಳನ್ನಾಡುತ್ತಿದ್ದಾರೆ. ಗಾರ್ಗಿ ಸಿನಿಮಾದಲ್ಲಿನ ಭಾವನಾತ್ಮಕ ಅಂಶಗಳು, ಸಾಹಸ ದೃಶ್ಯ ಸನ್ನಿವೇಶಗಳು ಹೀಗೆ ಚಿತ್ರದ ಪ್ರತಿಯೊಂದು ವಿಭಾಗದಲ್ಲಿಯೂ ಕೂಡ ಚಿತ್ರ ಮೆಚ್ಚುಗೆ ಪಡೆದುಕೊಳ್ಳುತ್ತದೆ. ನಟಿ ಸಾಯಿ ಪಲ್ಲವಿ ಅವರ ಸಿನಿಮಾಗಳು ಅಂದರೆ ಅದರಲ್ಲಿ ಸಾಯಿ ಪಲ್ಲವಿ ಅವರ ಜಬರ್ ದಸ್ತ್ ಡ್ಯಾನ್ಸ್ ಇರ್ಬೇಕು. ಹಾಗಿದ್ರೇನೇ ಅದು ಚಂದ ಅಂತೇಳ್ತಿದ್ದವರು ಕೂಡ ಗಾರ್ಗಿ ಚಿತ್ರದಲ್ಲಿನ ಗಂಭೀರ ಭಾವುಕ ಪಾತ್ರಗಳಲ್ಲಿಯೂ ಕೂಡ ನಟಿ ಸಾಯಿ ಪಲ್ಲವಿ ಅವರು ಇಷ್ಟ ಆಗ್ತಾರೆ ಅನ್ನೋದನ್ನ ಪ್ರೂವ್ ಮಾಡಿದ್ದಾರೆ.

ಸಾಯಿ ಪಲ್ಲವಿ ಅವರ ಗಾರ್ಗಿ ಎಂಬ ಈ ಮಹಿಳಾ ಪ್ರಧಾನ ಸಿನಿಮಾವನ್ನು ಪ್ರೇಕ್ಷಕರು ಇಡೀ ಕುಟುಂಬ ಸಮೇತ ಹೋಗಿ ನೋಡಬಹುದಾಗಿದೆ. ಇನ್ನು ಈ ಗಾರ್ಗಿ ಸಿನಿಮಾ ಕನ್ನಡ, ತೆಲುಗು,ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿದ್ದು, ಎಲ್ಲಾ ಕಡೆ ಅಪಾರ ಮೆಚ್ಚುಗೆ ಪಡೆದುಕೊಂಡಿದೆ. ವಿಶೇಷ ಅಂದರೆ ಗಾರ್ಗಿ ಸಿನಿಮಾದ ಕನ್ನಡ ಅವತರಿಣಿಕೆಯಲ್ಲಿ ಸ್ವತಃ ನಟಿ ಸಾಯಿ ಪಲ್ಲವಿ ಅವರೇ ಧ್ವನಿ ನೀಡಿದ್ದಾರೆ. ಈ ಗಾರ್ಗಿ ಚಿತ್ರಕ್ಕೆ ರವಿಚಂದ್ರನ್, ರಾಮಚಂದ್ರನ್, ಐಶ್ವರ್ಯ ಲೇಕ್ಷಿ, ಥಾಮಸ್ ಜಾರ್ಜ್ ಮತ್ತು ಗೌತಮ್ ರಾಮಚಂದ್ರನ್ ಜಂಟಿಯಾಗಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಗೌತಮ್ ರಾಮಚಂದ್ರನ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಗಾರ್ಗಿ ಚಿತ್ರದಲ್ಲಿ ಸಾಯಿ ಪಲ್ಲವಿ ಅವರೊಟ್ಟಿಗೆ ಕಾಳಿ ವೆಂಕಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಗೋವಿಂದ್ ವಸಂತ ರಾಗ ಸಂಯೋಜನೆ ಮಾಡಿದ್ದಾರೆ.