ಸದ್ಯದಲ್ಲೇ ಈಡೇರಲಿದೆ ಕಿಚ್ಚ ಸುದೀಪ್ ಅಭಿಮಾನಿಗಳ ಬಹು ದಿನದ ಆಸೆ

ಕಾಂತಾರ ಸಿನಿಮಾದ ಅಭೂತಪೂರ್ವ ಯಶಸ್ಸಿನಲ್ಲಿ ಇರೋ ಹೊಂಬಾಳೆ ಫಿಲಂಸ್ ಇದೀಗ ಮತ್ತೊಂದು ಖುಷಿ ಸುದ್ದಿಯೊಂದನ್ನ ಹಂಚಿಕೊಂಡಿದೆ. ಹೌದು ಕೆಜಿಎಫ್ ಅಂತಹ ಗೋಲ್ಡನ್ ಸಿನಿಮಾ ನೀಡಿದ ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ದೆ ಆಗಿ ಹೊರ ಹೊಮ್ಮಿರುವ ಹೊಂಬಾಳೆ ಫಿಲಂಸ್ ಸಂಸ್ಥೆ ಇಂದು ಕನ್ನಡ ಮಾತ್ರ ಅಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಅಪಾರ ಪ್ರಸಿದ್ದತೆ ಪಡೆದುಕೊಂಡಿದೆ. ಪುನೀತ್ ರಾಜ್ ಕುಮಾರ್ ಅವರೊಟ್ಟಿಗೆ ನಿನ್ನಿಂದಲೇ, ರಾಜಕುಮಾರ, ರಾಕಿಂಗ್ ಸ್ಟಾರ್ ಯಶ್ ಅವರಿಗೆ ಕೆಜಿಎಫ್, ಕೆಜಿಎಫ್2, ರಿಷಭ್ ಶೆಟ್ಟಿ ಅವರಿಗೆ ಕಾಂತಾರ ಅಂತಹ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನ ನೀಡಿದ ಹೊಂಬಾಳೆ ಫಿಲಂಸ್ ತೆಲುಗಿನಲ್ಲಿಯೂ ಕೂಡ ಪ್ರಭಾಸ್ ಅವರೊಟ್ಟಿಗೆ ಸಲಾರ್ ಅನ್ನೋ ಬಿಗ್ ಬಜೆಟ್ ಸಿನಿಮಾ ಮಾಡುತ್ತಿದೆ.

ಅದರ ಜೊತೆಗೆ ಇತ್ತೀಚೆಗೆ ಲೂಸಿಯಾ ಪವನ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಧೂಮ್ ಅನ್ನೋ ಸಿನಿಮಾಗೂ ಕೂಡ ಬಂಡವಾಳ ಹೂಡಿದ್ದಾರೆ. ಅದರ ಜೊತೆಗೆ ಜಗ್ಗೇಶ್ ಅವರಿಗೆ ರಾಘವೇಂದ್ರ ಸ್ಟೋರ್ಸ್ ಅನ್ನೋ ಸಿನಿಮಾ ಕೂಡ ಮಾಡುತ್ತಿದ್ದಾರೆ. ಹೀಗೆ ಹೊಂಬಾಳೆ ಫಿಲಂಸ್ ಬ್ಯಾನರಡಿಯಲ್ಲಿ ಕನ್ನಡ ಸಿನಿಮಾರಂಗಕ್ಕೆ ಅತ್ಯುತ್ತಮ ಸಿನಿಮಾಗಳ ಕೊಡುಗೆ ಇದೆ. ಇದೀಗ ಹೊಂಬಾಳೆ ಫಿಲಂಸ್ ಕನ್ನಡದ ಮತ್ತೊಬ್ಬ ಸೂಪರ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರಿಗೆ ಸಿನಿಮಾ ಮಾಡಲು ಹೊರಟಿದೆ. ಇದಕ್ಕೆ ಪೂರಕವಾಗಿ ಎಂಬಂತೆ ಕಿಚ್ಚ ಸುದೀಪ್ ಅವರ ನ್ನ ಹೊಂಬಾಳೆ ಫಿಲಂಸ್ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಅವರು ಭೇಟಿ ಮಾಡಿದ್ದಾರೆ. ಸುದೀಪ್ ಕಾರ್ತಿಕ್ ಗೌಡ ಅವರನ್ನ ಅಪ್ಪಿಕೊಂಡಿರೋ ಫೋಟೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ವಿಕ್ರಾಂತ್ ರೋಣ ಸಿನಿಮಾದ ನಂತರ ಕಿಚ್ಚ ಸುದೀಪ್ ಅವರಿಗೆ ಅನೇಕ ಕಥೆಗಳು ಬರುತ್ತಿದ್ದರು ಕೂಡ ಅವರು ಸದ್ಯಕ್ಕೆ ಹಸಿರು ನಿಶಾನೆ ನೀಡಿರೋದು ಅನೂಪ್ ಭಂಡಾರಿ ಅವರ ಬಿಲ್ಲ ರಂಗ ಬಾಷಾ ಸಿನಿಮಾಗೆ. ಈ ಚಿತ್ರವನ್ನ ಹೊರತುಪಡಿಸಿದರೆ ಸುದೀಪ್ ಇನ್ನು ಯಾವುದೇ ಸಿನಿಮಾಗೆ ಅಧಿಕೃತವಾಗಿ ಒಪ್ಪಿಗೆ ನೀಡಿಲ್ಲ. ಇದೆಲ್ಲದರ ನಡುವೆ ಹೊಂಬಾಳೆ ಫಿಲಂಸ್ ಕಾರ್ಯಾಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಅವರು ಸುದೀಪ್ ಅವರನ್ನ ಭೇಟಿ ಮಾಡಿರೋದು ಭಾರಿ ಕುತೂಹಲ ಮೂಡಿಸಿದೆ. ಇನ್ನೊಂದು ಕಡೆ ಸುದೀಪ್ ಅವರು ಹೊಂಬಾಳೆ ಫಿಲಂಸ್ ನಲ್ಲಿ ಸಿನಿಮಾ ಮಾಡೋದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಮಾಹಿತಿ ಬಂದರೆ ಇನ್ನೊಂದು ಕಡೆ ಇನ್ನೂ ಕೂಡ ಕಥೆ ಫೈನಲ್ ಆಗಿಲ್ಲ ಅನ್ನೋ ಮಾತೂ ಕೂಡ ಕೇಳಿ ಬರುತ್ತಿದೆ. ಎಲ್ಲದಕ್ಕೂ ಉತ್ತರ ಹೊಂಬಾಳೆ ಫಿಲಂಸ್ ಅವರೇ ನೀಡಬೇಕಾಗಿದೆ. ಹೊಂಬಾಳೆ ಅಂತಹ ದೊಡ್ಡ ಪ್ರೊಡಕ್ಷನ್ ಹೌಸ್ ಜೊತೆ ಚಿತ್ರ ಮಾಡಬೇಕೆನ್ನುವುದು ಕಿಚ್ಚನ ಅಭಿಮಾನಿಗಳ ಬಹುದೊಡ್ಡ ಆಸೆಯಾಗಿದ್ದು ಸದ್ಯದಲ್ಲೇ ಇದು ಈಡೇರಲಿದೆ.